ರಾಜ್ಯೋತ್ಸವದಲ್ಲಿ ರಾಜಕುಮಾರನಿಲ್ಲದ ಕೊರಗು, ಉಗ್ರರ ವಿರುದ್ಧ ಯೋಗಿ ಗುಡುಗು; ನ.1ರ ಟಾಪ್ 10 ಸುದ್ದಿ! ಕನ್ನಡ ರಾಜ್ಯೋತ್ಸವವನ್ನು ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದರೆ ಈ ಬಾರಿ ಕನ್ನಡ ಕುವರ ಪುನೀತ್ ರಾಜ್‌ಕುಮಾರ್ ಇಲ್ಲ ಅನ್ನೋ ಕೊರಗು ಕನ್ನಡಿಗರನ್ನು ಕಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಎರಿಕೆಯಾಗಿದೆ . ಶಿವಣ್ಣನ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿದ್ದಾರೆ. ಅಪಘಾತಕ್ಕೆ ಮಿಸ್ ಕೇರಳ ಬಲಿ, ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳ ಆಕ್ರೋಶ ಸೇರಿದಂತೆ ನವೆಂಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಭಯೋತ್ಪಾದನೆ ಭಾರತದತ್ತ ತಿರುಗಿದರೆ ವಾಯುದಾಳಿಗೆ ಸಿದ್ಧರಾಗಿ; ತಾಲಿಬಾನ್ ಉಗ್ರರಿಗೆ ಯೋಗಿ ನೇರ ಎಚ್ಚರಿಕೆ! ಭಾರತದತ್ತ ಕಣ್ಣು ಹಾಕಿರುವ ತಾಲಿಬಾನ್ ಉಗ್ರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್( ) ನೇರ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್ ಉಗ್ರರು ಭಾರತದತ್ತ() ಸಾಗುವ ಧೈರ್ಯ ಮಾಡಿದರೆ, ಏರ್‍‌ಸ್ಟ್ರೈಕ್() ಎದುರಿಸಲು ಸಿದ್ದರಾಗಿ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ. ಸಮುದ್ರದಾಳದಲ್ಲಿ-ಆಕಾಶದೆತ್ತರದಲ್ಲೂ ಹಾರಿದ ಕನ್ನಡದ ಬಾವುಟ ಇಂದು ನಾಡಿನ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ. ಕರುನಾಡ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಇಂದು ಸಂಭ್ರಮಾಚರಣೆ ಇದ್ದು ವಿಭಿನ್ನವಾಗಿ ಕನ್ನಡದ ಬಾವುಟ ಹಾರಾಡಿದೆ. ಎಲ್ಲೆಲ್ಲಿ ಹೇಗಿದೆ..? ದೀಪಾವಳಿಗೆ ಆಘಾತ: ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 266 ರೂ. ಹೆಚ್ಚಳ! ದೀಪಾವಳಿ () ಸಂಭ್ರಮಕ್ಕೆ ನಡೆಯುತ್ತಿರುವ ಸಿದ್ಧತೆ ಮಧ್ಯೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಗ್ರಾಹಕರಿಗೆ ಆಘಾತ ನೀಡಿದೆ. ಹೌದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ( ) ದರ ಇಂದು, ಸೋಮವಾರದಿಂದ 266 ರೂ. ಹೆಚ್ಚಿಸಲಾಗಿದೆ. ಈ ನಡುವೆ ಗೃಹ ಬಳಕೆಯ ಗೃಹ ಬಳಕೆಯ ಎಲ್‌ಪಿಜಿ () ದರ ಏರಿಕೆಯಾಗಿಲ್ಲ ಎಂಬುವುದೇ ಕೊಂಚ ಸಮಾಧಾನದ ವಿಚಾರವಾಗಿದೆ. ಮೋದಿ ಸೇರಿ ಗಣ್ಯರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯ: ಕನ್ನಡದಲ್ಲೇ ಪಿಎಂ ಟ್ವೀಟ್! ಕನ್ನಡ ರಾಜ್ಯೋತ್ಸವವೆಂದರೆ ಕನ್ನಡದ ಎಲ್ಲ ಮನಸ್ಸುಗಳು ಈ ನಾಡಿನ ಭವ್ಯ ಇತಿಹಾಸವನ್ನು ಸ್ಮರಿಸಿ, ಗೌರವಿಸುವ ನಾಡ ಹಬ್ಬವಿದ್ದಂತೆ. ಸಂಭ್ರಮದ ಹೊರತಾಗಿ ಇದು ಕನ್ನಡನಾಡಿನ ಏಳ್ಗೆಗೆ ಹಾಗೂ ಕನ್ನಡದ ಉಳಿವಿಗೆ ಎಲ್ಲರೂ ಸೇರಿ ನಿಭಾಯಿಸಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನ ಕೂಡ ಹೌದು. ಇಂತಹ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ( ) ಸೇರಿ ಹಲವಾರು ರಾಜಕೀಯ ಗಣ್ಯರು ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರಿಗೆ ಶುಭ ಕೋರಿದ್ದಾರೆ. ಕೋವಿಡ್‌ ಮೂಲ: ಅಮೆರಿಕ ವರದಿಗೆ ಚೀನಾ ಸಿಡಿಮಿಡಿ! ಕೋವಿಡ್‌ ಉಗಮದ ( 19 ) ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಲ್ಲಿಕೆ ಮಾಡಿರುವ ವರದಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ () ಸರ್ಕಾರ, ಇದು ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ತಪ್ಪು ವರದಿ ಎಂದು ಕಿಡಿಕಾರಿದೆ. T20 : ಟೀಂ ಇಂಡಿಯಾ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು..! ಐಸಿಸಿ ಟಿ20 ವಿಶ್ವಕಪ್‌ ( T20 ) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ( ), ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಸೆಮೀಸ್‌ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿದೆ. ಶಿವಣ್ಣನ ಪರಿಸ್ಥಿತಿಯನ್ನು ಬಿಚ್ಚಿಟ್ಟರು ಕಿಚ್ಚ ಸುದೀಪ್! ಕನ್ನಡ ಚಿತ್ರರಂಗ ಮುತ್ತು ರಾಜನ ಮೂರು ಪುತ್ರರು ಚಿತ್ರರಂಗದ ಆಸ್ತಿ. ಪ್ರಚಾರವೇ ಜೀವನ ಎನ್ನುವ ಸಮಯದಲ್ಲಿ ಪ್ರಚಾರವನ್ನು ದಿಕ್ಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಪುನೀತ್ ರಾಜ್‌ಕುಮಾರ್. ಅಪ್ಪು ಇಲ್ಲದೇ ಅದೆಷ್ಟೋ ಮನೆಗಳಲ್ಲಿ ದೀಪವೇ ಇಲ್ಲದಂತಾಗಿದೆ. ಶಿವಣ್ಣನಿಗೆ ಆನೆ ಬಲದಂತಿದ್ದರು. ಈಗ ಒಂಟಿಯಾಗಿರುವ ಶಿವಣ್ಣ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ. ಪುನೀತ್‌ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ವಿಶಾಲ್ ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ( ) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಗೆಳೆಯನ ಸ್ಮರಿಸಿದ್ದಾರೆ. ಭೀಕರ ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ! 2019ರ ಮಿಸ್ ಕೇರಳ( -2019) ವಿಜೇತೆ ಅನ್ಸಿ ಕಬೀರ್( ) ಹಾಗೂ ರನ್ನರ್-ಅಪ್ ಅಂಜನಾ ಶಾಜನ್ ( ) ಕೊಚ್ಚಿ ಸಮೀಪದ ವಿಟಿಲ್ಲಾದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.