ಹುಡುಗರ ಕನ್ನಡ ಪ್ರೀತಿ, ಗುಲಾಬ್ ಚಂಡಮಾರುತ ಭೀತಿ; ಸೆ.27ರ ಟಾಪ್ 10 ಸುದ್ದಿ! ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದಾರೆ. ಗುಲಾಬ್ ಚಂಡಮಾರುತದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಯಾವುದೇ ಅಡೆಚಣೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್‌ಸಿಬಿ ಹುಡುಗ ಪಡಿಕ್ಕಲ್ ಕನ್ನಡ ಪ್ರೀತಿ, ಬಿಕಿನಿ ಲುಕ್‌ನಲ್ಲಿ ನಟಿ ಶೋಭಿತಾ ಸೇರಿದಂತೆ ಸೆಪ್ಟೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. : ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ! ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌( ) ವಿತರಿಸುವ ‘ಪ್ರಧಾನ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’( ) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್‌: ಕಟ್ಟೆ​ಚ್ಚ​ರ! ಆಂಧ್ರಪ್ರದೇಶ( ) ಉತ್ತರ ಭಾಗ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಲಾಬ್‌ ಚಂಡಮಾರುತ( ) ಅಪ್ಪಳಿಸಿದೆ. ಇದಕ್ಕೆ ಮುಂಚಿತವಾಗಿಯೇ ಉಭಯ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಭಾರತ್‌ ಬಂದ್‌: ಕೇಂದ್ರದ ಕೃಷಿ ಕಾಯ್ದೆ ವಿರೋ​ಧಿಸಿ ದೇಶ​ವ್ಯಾಪಿ ಪ್ರತಿ​ಭ​ಟ​ನೆ! ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು( ) ವಿರೋಧಿಸಿ ರೈತರು ಕಳೆದ 10 ತಿಂಗಳಿನಿಂದ ನಡೆಸುತ್ತಿರುವ ಪ್ರತಿ​ಭ​ಟನೆ ಮತ್ತಷ್ಟು ಕಾವು ಪಡೆ​ದು​ಕೊ​ಳ್ಳುವ ಸಾಧ್ಯ​ತೆ ಇದೆ. ಕೃಷಿ ಕಾಯ್ದೆ​ಗಳ ರದ್ದ​ತಿಗೆ ಆಗ್ರ​ಹಿಸಿ 40 ರೈತ ಸಂಘ​ಟ​ನೆ​ಗಳ( ) ಮಾತೃ ಸಂಸ್ಥೆ​ಯಾದ ಸಂಯುಕ್ತ ಕಿಸಾನ್‌ ಮೋರ್ಚಾ( ), ಸೋಮ​ವಾರ ಭಾರತ್‌ ಬಂದ್‌ಗೆ( ) ಕರೆ ನೀಡಿ​ದೆ. ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು! ಐಪಿಎಲ್‌() ಹಬ್ಬ ಮತ್ತೆ ಆರಂಭವಾಗಿದೆ. ಪ್ರತಿ ಬಾರಿ ಐಪಿಲ್ ಸೀಜನ್ ಆರಂಭವಾಗುವಾಗ ಆರ್‌ಸಿಬಿ( ) ವಿಭಿನ್ನ ಕಾರಣಗಳಿಂದ ಸದ್ದು ಮಾಡುತ್ತಿರುತ್ತದೆ. ಹಾಟ್ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶೋಭಿತಾ ಬಾಲಿವುಡ್ ನಟಿ ಶೋಭಿತಾ ರಾನ( ) ಬಿಕಿನಿ ಫೋಟೋಗಳು ವೈರಲ್ ಆಗಿವೆ. ಮಾಲ್ಡೀವ್ಸ್‌ನಲ್ಲಿ ವೆರೈಟಿ ಸ್ಟೈಲಿಷ್ ಬಿಕಿನಿಯಲ್ಲಿ ವೆಕೇಷನ್ ಎಂಜಾಯ್ ಮಾಡಿದ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಬಿಎಸ್‌ವೈ ಪ್ರವಾಸಕ್ಕೆ ಹೈಕಮಾಂಡ್‌ ಬ್ರೇಕ್‌?: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ( ) ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( ) ಸ್ಪಷ್ಟಪಡಿಸಿದ್ದಾರೆ. ಹಿಂಭಾಗದಲ್ಲಿ ನೋವೆಂದು ಬಂದ ಮಹಿಳೆ ಪ್ಯಾಂಟ್ ಕಳಚಿ ಖಾಸಗಿ ಅಂಗ ಮುಟ್ಟಲು ಮುಂದಾದ! ಚೆಕ್ ಅಪ್ ಗೆ ಬಂದಿದ್ದ ಮಹಿಳಾ ಪೇಶೆಂಟ್ ಜತೆ ಅಸಭ್ಯವಾಗಿ ವರ್ತಿಸಿದ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. 'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ' ಹಿಂದೂಗಳ () ಮನಸ್ಸಿಗೆ ನೋವುಂಟು ಮಾಡಿದರೆ ಕರ್ನಾಟಕದಲ್ಲಿ () ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲ್ಲವೆಂದು ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿ ಎಚ್ಚರಿಸಿದರು. ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ! ನೀಲಸಮುದ್ರದಾಳದಲ್ಲಿ() ಅದೆಷ್ಟೋ ರಹಸ್ಯಗಳು ಅಡಗಿರುತ್ತವೆ. ವಿಜ್ಞಾನಿಗಳು ಕೆಲ ವಿಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇರುತ್ತಾರೆ, ಇನ್ನು ಕೆಲವೊಮ್ಮೆ ಈ ವಿಚಾರಗಳು ತನ್ನಿಂತಾನಾಗೇ ಬೆಳಕಿಗೆ ಬರುತ್ತವೆ.