ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಎಡವಟ್ಟು, ಶಮಿತಾಗೆ ಪ್ರತಿ ದಿನ ಸಿಹಿ ಮುತ್ತು; ಆ.27ರ ಟಾಪ್ 10 ಸುದ್ದಿ! ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಸಂತ್ರಸ್ತೆ ಗೆಳೆಯ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. ಬಾಂಗ್ಲಾದೇಶ ವಿಮಾನ ಪೈಲೆಟ್‌ಗೆ ಹೃದಯಾಘಾತವಾದ ಕಾರಣ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಗಣೇಶ ಹಬ್ಬಕ್ಕೆ 350 ಚಿತ್ರಮಂದಿರಗಳಲ್ಲಿ ಭಜರಂಗಿ 2 ಬಿಡುಗಡೆಯಾಗಲಿದೆ. ಬಿಗ್‌ಬಾಸ್ ಸ್ಪರ್ಧಿ, ಶಿಲ್ಪಾ ಶೆಟ್ಟಿ ತಂಗಿಗೆ ಪ್ರತಿ ಸಿಹಿ ಮುತ್ತು, ಆರ್‌ಎಸ್ಎಸ್ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮಾಡಿತಾ ಎಡವಟ್ಟು? ಸೇರಿದಂತೆ ಆಗಸ್ಟ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಹಾರಾಟದ ನಡುವೆ ಬಾಂಗ್ಲಾದೇಶ ವಿಮಾನ ಪೈಲೆಟ್‌ಗೆ ಹೃದಯಾಘಾತ, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ! ಕಳವಳಕಾರಿ ಬೆಳವಣಿಗೆಯೊಂದು ಏರ್‌ಲೈನ್ಸ್‌ನಲ್ಲಿ ನಡೆದಿದೆ. ಮಾಸ್ಕೋದಿಂದ ಬಾಂಗ್ಲಾದೇಶದ ಢಾಕಾಗೆ ಪ್ರಯಾಣ ಬೆಳೆಸಿದ್ದ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದ ಪೈಲೈಟ್‌ಗೆ ಹಾರಾಟದ ಮಧ್ಯೆ ತೀವ್ರ ಹೃದಯಾಘಾತಾಗಿದೆ. ನೆರವು ಕೇಳಿದ ಬಾಂಗ್ಲಾದೇಶಕ್ಕೆ ಭಾರತ ತುರ್ತು ಭೂಸ್ಪರ್ಶ ಮಾಡಲು ಅನುವು ಮಾಡಿಕೊಟ್ಟಿದೆ. ಮೈಸೂರು ಗ್ಯಾಂಗ್ ರೇಪ್ : ತನಿಖಾ ವರದಿ ಸಲ್ಲಿಕೆಗೆ ಸಿಎಂ ಸೂಚನೆ ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಭವಿಸಿದ 2 ದಿನಗಳೇ ಕಳೆದಿದೆ. ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ ಆಲೌಟ್ @432, ರೂಟ್‌ ಪಡೆಗೆ 354 ರನ್‌ಗಳ ಮುನ್ನಡೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನದ ಆರಂಭದಲ್ಲೇ ನಿರೀಕ್ಷೆಯಂತೆಯೆ ಇಂಗ್ಲೆಂಡ್ ತಂಡವನ್ನು ಆಲೌಟ್‌ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂಗ್ಲೆಂಡ್‌ 432 ರನ್‌ಗಳಿಗೆ ಸರ್ವಪತನ ಕಂಡಿದ್ದು, ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 354 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಗಣೇಶ ಹಬ್ಬಕ್ಕೆ 350 ಚಿತ್ರಮಂದಿರಗಳಲ್ಲಿ ಭಜರಂಗಿ 2: ಜಯಣ್ಣ ಶಿವರಾಜ್‌ಕುಮಾರ್‌ ನಟನೆಯ, ಎ ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಸಿನಿಮಾ ಬಿಡುಗಡೆ ಕುರಿತು ಜಯಣ್ಣ ಸಂದರ್ಶನ. 1 ಕೋಟಿ ಬಳಕೆದಾರರ ತಲುಪಿದ ಬೆಂಗಳೂರು ಮೂಲದ ಕೂ ಆ್ಯಪ್‌ ಟ್ವೀಟರ್‌ಗೆ ಪರಾರ‍ಯಯವಾಗಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’ 1 ಕೋಟಿ ಬಳಕೆದಾರರನ್ನು ತಲುಪಿದೆ. ವಯಸ್ಸಾಯ್ತು, ಡಯಲಾಗ್ ನೆನಪಾಗಲ್ಲ ಎಂದ ಬಿಗ್‌ಬಿ ನಟ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಿಗಾಗಿ ಪದೇ ಪದೇ ತಮ್ಮ ಡಯಲಾಗ್ ಏಕೆ ಪೂರ್ವಾಭ್ಯಾಸ ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಚೆಹ್ರೆ ನಿರ್ಮಾಪಕ ಆನಂದ್ ಪಂಡಿತ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಅಮಿತಾಬ್ ಮತ್ತು ಇಮ್ರಾನ್ ಹಶ್ಮಿ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತಾಲೀಬಾನ್ ಮತ್ತು ಎರಡೂ ಒಂದೇ ಎಂದ ಕೈ ನಾಯಕರು.. ಎಂಥಾ ಹೇಳಿಕೆ! ಅಫ್ಘಾನಿಸ್ತಾನವನ್ನು ನರಕ ಮಾಡಿದ ತಾಲೀಬಾನ್ ಮತ್ತು ಆರ್ ಎಸ್‌ ಎಸ್ ಎರಡೂ ಒಂದೇ! ಕಾಂಗ್ರೆಸ್ ನಾಯಕರಿಂದ ಇದೆಂಥ ಹೋಲಿಕೆ.. ಕಾಂಗ್ರೆಸ್ ಮುಖಂಡರು ಹೇಳುವ ಮಾತಿನ ಅರ್ಥವೇನು? ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಬೆಚ್ಚಿಬೀಳಿಸುವ ಮಾಹಿತಿ ನೀಡಿದ ಸಂತ್ರಸ್ತೆಯ ಫ್ರೆಂಡ್‌ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಬೆಚ್ಚಿಬೀಳಿಸುವಂತ ಮಾಹಿತಿಯನ್ನ ನೀಡಿದ್ದಾನೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾಗೆ ಬಿಗ್‌ಬಾಸ್ ಮನೆಯಲ್ಲಿ ಪ್ರತಿದಿನ ಸಿಹಿ ಮುತ್ತು..! ಕಾರಣ ? ಶಿಲ್ಪಾ ಶೆಟ್ಟಿ ಸಹೋದರಿ ಬಾಲಿವುಡ್ ನಟಿ ಶಮಿತಾ ಶೆಟ್ಟಿಯೊಂದಿಗೆ ರಾಕೇಶ್ ಬಾಪತ್ ಅವರ ರೊಮ್ಯಾನ್ಸ್ ಸದ್ಯ ಒಟಿಟಿ ಬಿಗ್‌ಬಾಸ್‌ನ ಪ್ರಮುಖ ಆಕರ್ಷಣೆ.