ಶ್ರೀನಗರದ ದಾಲ್‌ ಸರೋವರದಲ್ಲಿ ‘ತೇಲುವ ಎಟಿಎಂ’! * ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನ * ಶ್ರೀನಗರದ ದಾಲ್‌ ಸರೋವರದಲ್ಲಿ ‘ತೇಲುವ ಎಟಿಎಂ’ * ಶ್ರೀನಗರದ ಮೋಡಿಯನ್ನು ಇನ್ನೂ ಹೆಚ್ಚಿಸಲಿದೆ ಈ ವ್ಯವಸ್ಥೆ ಶ್ರೀನಗರ(ಆ. 23): ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟಪ್ರಯತ್ನಕ್ಕೆ ಕೈ ಹಾಕಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶ್ರೀನಗರದ ದಾಲ್‌ ಸರೋವರದಲ್ಲಿ ‘ತೇಲುವ ಎಟಿಎಂ’ ಯಂತ್ರವನ್ನು ಸ್ಥಾಪಿಸಿದೆ. ಈ ಎಟಿಎಂಅನ್ನು ಎಸ್‌ಬಿಐ ಮುಖ್ಯಸ್ಥ ದಿನೇಶ್‌ ಖರಾ ಅವರು ಆ.16ರಂದು ಉದ್ಘಾಟಿಸಿದರು. ಇದು ಶ್ರೀನಗರದ ಮೋಡಿಯನ್ನು ಇನ್ನೂ ಹೆಚ್ಚಿಸಲಿದೆ ಎಂದು ಎಸ್‌ಬಿಐ ತಿಳಿಸಿದೆ. ದಾಲ್‌ ಸರೋವರದಲ್ಲಿ ಈಗಾಗಲೇ ತೇಲುವ ತರಕಾರಿ ಮಾರುಕಟ್ಟೆ, ತೇಲುವ ಅಂಚೆ ಕಚೇರಿ ಕೂಡ ಇದೆ. ಎಸ್‌ಬಿಐ ಈ ಮೊದಲು 2004ರಲ್ಲಿ ಕೇರಳದಲ್ಲಿ ತೇಲುವ ಎಟಿಎಂಅನ್ನು ಮೊದಲ ಬಾರಿಗೆ ಸ್ಥಾಪಿಸಿತ್ತು.