ಹೊಸ ಕ್ರೆಡಿಟ್‌ ಕಾರ್ಡ್‌: ಮೇಲಿನ 8 ತಿಂಗಳ ನಿಷೇಧ ತೆರವು! * ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ HDFCಗೆ ನಿಷೇಧ * ಹೇರಿದ್ದ ನಿರ್ಬಂಧ 8 ತಿಂಗಳ ಬಳಿಕ ಆರ್‌ಬಿಐ * ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ ನವದೆಹಲಿ(ಆ.18): ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು 8 ತಿಂಗಳಗಳ ಬಳಿಕ ಆರ್‌ಬಿಐ ತೆರವು ಮಾಡಿದೆ. ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ. ಡಿಜಿಟಲ್‌ ಪಾವತಿ ಸೇವೆಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಆರ್‌ಬಿಐ ಈ ನಿರ್ಬಂಧ ಹೇರಿತ್ತು. ಆದಾಗ್ಯೂ, ಡಿಜಿಟಲ್‌ ವೇದಿಕೆ ಮುಖಾಂತರ ಸಾಲಗಾರರಿಗೆ ನೀಡಲಾಗುವ ನೂತನ ಯೋಜನೆಗಳ ಮೇಲಿನ ತಾತ್ಕಾಲಿಕ ನಿಷೇಧವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.