ಒಂದು ಡಿಸೈನ್, ಟ್ಯಾಗ್‌ಲೈನ್ ಮಾಡಿ 15 ಲಕ್ಷ ಗಳಿಸಿ: ಕೇಂದ್ರದ ಆಫರ್! * ನೀವು ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅವಕಾಶ * 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಮಾಡಿಕೊಟ್ಟ ಸರ್ಕಾರ * ಸೃಜನಶೀಲ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋ ಮಾಡೋರಿಗೆ ಈ ಆಫರ್ ನವದೆಹಲಿ(ಜು.28): ನೀವು ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೇಂದ್ರ ಸರ್ಕಾರ ನಿಮಗೆ 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ನೀಡುತ್ತಿದೆ. ಇದಕ್ಕಾಗಿ ನೀವು ಒಂದೋ ಹೆಸರನ್ನು ನೀಡಬೇಕು ಇಲ್ಲವೇ ಲೋಗೋ ಮತ್ತು ಟ್ಯಾಗ್‌ಲೈನ್ ಕೊಟ್ಟೂ ಈ ಮೊತ್ತ ಗಳಿಸಬಹುದು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಆಗಸ್ಟ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಹಾಗಾದ್ರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲೋದು ಹೇಗೆ? ಇಲ್ಲಿದೆ ವಿವರ Indiaದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸೃಜನಶೀಲ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋವನ್ನು ಮಾಡಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಈ ಸ್ಪರ್ಧೆಯನ್ನು ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಗಾಗಿ ಆಯೋಜಿಸಲಾಗಿದೆ. ಇದರಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಏನು ಮಾಡಬೇಕು? ಹಣಕಾಸು ಸೇವಾ ಇಲಾಖೆ, ಹಣಕಾಸು ಸಚಿವಾಲಯ, ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲೋಗೋದ ವಿನ್ಯಾಸವನ್ನು ಸೂಚಿಸಲು ಜನರಿಗೆ ಆಹ್ವಾನ ಕೊಟ್ಟಿದೆ. ಈ ಹೆಸರು, ಲೋಗೊ ಮತ್ತು ಟ್ಯಾಗ್‌ಲೈನ್ ಸಂಸ್ಥೆಯ ಕೆಲಸಕ್ಕೆ ಸಂಬಂಧಿಸಿರಬೇಕು. ನೀವು ಕೊಡುವ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೊವನ್ನು ಡಿಎಫ್‌ನ್ನ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಇದೊಂದು ವರ್ಚುವಲ್ ಸಹಿಯಂತೆ ಇದ್ದು, ಇದು ನೆನಪಿಟ್ಟುಕೊಳ್ಳಲು ಮತ್ತು ಉಚ್ಚರಿಸಲು ಸುಲಭವಿರಬೇಕು. ಹೆಸರು, ಟ್ಯಾಗ್‌ಲೈನ್‌ಗಳು ಮತ್ತು ಲೋಗೊ ಈ ಮೂರೂ ತಮ್ಮದೇ ಆದ ರೀತಿಯಲ್ಲಿ ಭಿನ್ನವಾಗಿರಬೇಕು. ನೋಂದಣಿ ಮಾಡೋದು ಹೇಗೆ? * ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು . ಪೋರ್ಟಲ್‌ಗೆ ಹೋಗಬೇಕು.* ಇಲ್ಲಿ ನೀವು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಕ್ಲಿಕ್ ಮಾಡಬೇಕು.* ಬಳಿಕ ನೀವು ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕು.* ನೋಂದಣಿ ನಂತರ, ನೀವು ನಿಮ್ಮ ಎಂಟ್ರಿ ಖಚಿತಪಡಿಸಿಕೊಳ್ಳಬೇಕು. ಬಹುಮಾನ ವಿವರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ನೀಡಲಾಗುವುದು.* ಹೆಸರು - 5,00,000 / -, ರೂ. 3,00,000 / - ರೂ. 2,00,000 / -* ಟ್ಯಾಗ್‌ಲೈನ್ - ರೂ. 5,00,000 / -, ರೂ. 3,00,000 / - ರೂ. 2,00,000 / -* ಲೋಗೋ - 5,00,000 / -, ರೂ. 3,00,000 / - ರೂ. 2,00,000 / - ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಿರಿ ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಈ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ.://..//-------/