ಕೌನ್ಸಿಲ್ ಸಭೆ: ಬ್ಲಾಕ್ ಫಂಗಸ್ ಇಂಜೆಕ್ಷನ್, ಕೋವಿಡ್ ಉಪಕರಣ ಮೇಲೆ ತೆರಿಗೆ ಕಡಿತ! ನವದೆಹಲಿ(ಜೂ.12):ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇಜಿಎಸ್‌ಟಿಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ (ತೆರಿಗೆ)ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. " ಕೋವಿಡ್‌ ಅಬ್ಬರವಿದ್ದರೂ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ! ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಈ ಸಭೆಯಲ್ಲಿನ ಪ್ರಮುಖ ನಿರ್ಧಾರಗಳ ವಿವರ ಇಲ್ಲಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಲಸಿಕೆ ನೀತಿ ಪ್ರಕಾರ ಶೇಕಡಾ 75 ರಷ್ಟು ಲಸಿಕೆಯನ್ನು ಕೇಂದ್ರ ಖರೀದಿಸಿ ರಾಜ್ಯಗಳಿಗೆ ಹಂಚಲಿದೆ. ಶೇಕಡಾ 75 ರಷ್ಟು ಲಸಿಕೆ ಖರೀದಿಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪಾವತಿಸಲಿದೆ. ಈ ಜಿಎಸ್‌ಟಿ ಮೊತ್ತವನ್ನು ರಾಜ್ಯಗಳಿಗೆ ಹಂಚಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 3 ತಿಂಗಳಲ್ಲಿ 20124 ಕೋಟಿ ರು. ಜಿಎಸ್‌ಟಿ ವಂಚನೆ ಪತ್ತೆ!. ಕೋವಿಡ್ ಸಂಬಂಧಿತ ಉಪಕರಣ, ಔಷಧಿಗಳ ಮೇಲಿನ ಜಿಎಸ್‌ಟಿ ಕಡಿತ ಕುರಿತು ಪರಿಶೀಲಿಸಲು ಜಿಎಸ್‌ಟಿ ಕೌನ್ಸಿಲ್ ಸಚಿವರ ಸಮಿತಿಯೊಂದನ್ನ ರಚಿಸಿತ್ತು. ಈ ಸಮಿತಿ ಕೌನ್ಸಿಲ್‍ಗೆ ವರದಿ ನೀಡಿದೆ. ಈ ವರದಿಯ ಆಧಾರದಲ್ಲಿ ಇದೀಗ ಮಹತ್ವದ ನಿರ್ಧಾರಗಳ ಕೈಗೊಳ್ಳಲಾಗಿದೆ.