ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ! * ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ರೈತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ * 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಕೇಂದ್ರ ಸಂಪುಟ ನಿರ್ಧಾರ * ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 72 ರು.ನಷ್ಟುಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ ನವದೆಹಲಿ(ಜೂ.10): ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ರೈತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 72 ರು.ನಷ್ಟುಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಇದರಿಂದಾಗಿ ಬೆಂಬಲ ಬೆಲೆ 2021-22ನೇ ಬೆಳೆ ವರ್ಷಕ್ಕೆ ಕ್ವಿಂಟಾಲ್‌ಗೆ 1,940 ರು.ಗೆ ಏರಿಕೆಯಾಗಲಿದೆ. ಬೆಳೆ ವರ್ಷವನ್ನು ಸರ್ಕಾರ ಜುಲೈನಿಂದ ಜೂನ್‌ವರೆಗೆ ಪರಿಗಣಿಸುತ್ತದೆ. 2020-21ರ ಬೆಳೆ ವರ್ಷದಲ್ಲಿ ಭತ್ತದ ಬೆಂಬಲ ಬೆಲೆ 1,868 ರು. ಇತ್ತು. ಇದು ಈಗ 1940 ರು.ಗೆ ಹೆಚ್ಚಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ. ಭತ್ತ ಸೇರಿ ಒಟ್ಟು 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಈ ಏರಿಕೆ ಬಳಿಕ ಕೃಷಿಕರು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.5-58ರಷ್ಟುಬೆಲೆ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ.