ಆಗಿ ಮಮತಾ ಪ್ರಮಾಣ ವಚನ, ಕ್ರಿಕೆಟಿಗನ ಅಪಹರಣ; ಮೇ.5ರ ಟಾಪ್ 10 ಸುದ್ದಿ! ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ಮಮತಾ ಬ್ಯಾನರ್ಜಿ ಇದೀಗ ಮುಖ್ಯಮಂತ್ರಿಯಾಗಿ ಪ್ರಮಾಣವ ವಚನ ಸ್ವೀಕರಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಕೊರೋನಾ ಕಾರಣ ತಂದೆ ಕಳೆದುಕೊಂಡ ಯುುವಕನಿಗೆ ನಟ ಸಲ್ಮಾನ್ ಖಾನ್ ನೆರವು ನೀಡಿದ್ದಾರೆ. ಆಸೀಸ್ ಕ್ರಿಕೆಟಿಗನ ಅಪಹರಣ, ಮತ್ತೆ ಮಳೆ ಮುನ್ಸೂಚನೆ ಸೇರಿದಂತೆ ಮೇ.5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಸೋಂಕಿನಿಂದ ಮತೃಪಟ್ಟ ಎಲ್ಲಾ ಉದ್ಯೋಗಿ ಕುಟುಂಬಕ್ಕೆ ಸಿಗಲಿದೆ ಗರಿಷ್ಠ 7 ಲಕ್ಷ ರೂ ವಿಮೆ!... ಕೊರೋನಾ ವೈರಸ್ ಭಾರತ ಬಹುತೇಕ ಕುಟುಂಬವನ್ನು ಹಿಂಡಿ ಹಿಪ್ಪೆ ಮಾಡಿದೆ. ಇನ್ನು ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ಪ್ರಮುಖರೇ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಕುಟುಂಬ ಬೀದಿ ಬೀಳುತ್ತಿದೆ. ಹೀಗಾಗಿ ಸರ್ಕಾರ ಕೊರೋನಾ ಸೋಂಕಿನಿಂದ ಮೃತಪಟ್ಟ ಉದ್ಯೋಗಿ ಕುಟುಂಬಕ್ಕೆ ಸಿಗಲಿದೆ ವಿಮಾ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 3ನೇ ಬಾರಿ ಪಶ್ಚಿಮ ಬಂಗಾಳ ಸಿಎಂ ಆಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ!... ಕೊರೋನಾ ಹಾವಳಿ ಮಧ್ಯೆ ನಡೆದಿದ್ದ ಪಶ್ಚಿಮ ಬಂಗಾಳ ಚುನಾವಣೆ| ಸತತ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ದೀದೀ ರಾಜ್ಯಭಾರ| ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾನರ್ಜಿ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಸ್ಟುವರ್ಟ್‌ ಮೆಕ್‌ಗಿಲ್‌ ಅಪಹರಣ..!... ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಸ್ಟುವರ್ಟ್‌ ಮೆಕ್‌ಗಿಲ್‌ರನ್ನು ಅಪಹರಣಕಾರರು ಕಿಡ್ನಾಪ್‌ ಮಾಡಿ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ. ಐಪಿಎಲ್‌ ತಂಡದ ಬಸ್‌ಗಾಗಿ ಆ್ಯಂಬುಲೆನ್ಸ್ ತಡೆಹಿಡಿದ ಗುಜರಾತ್ ಪೊಲೀಸರು..!... ಐಪಿಎಲ್‌ ಆಟಗಾರರಿದ್ದ ಬಸ್‌ ಸಾಗಲು ಅನುಕೂಲ ಮಾಡಿಕೊಡಲು ಹೋಗಿ ಆ್ಯಂಬುಲೆನ್ಸ್ ತಡೆ ಹಿಡಿದ ಗುಜರಾತ್ ಸಂಚಾರ ಪೋಲಿಸರ ನಡೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಯಶ್‌ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥ್ಯ... ಯಶ್‌ ಅವರ ಅಭಿನಯದ ಮುಂದಿನ ಚಿತ್ರಕ್ಕೆ ಝೀ ಸಿನಿಮಾಸ್‌ ನಿರ್ಮಾಣ ಸಾರಥಿ | ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಮೊದಲ ಬಾರಿಗೆ ಹಣ ಹೂಡುತ್ತಿದೆ ಝೀ ಸಿನಿಮಾಸ್‌ ರೆಡ್‌ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಟೀಸರ್, ಶೀಘ್ರವೇ ಭಾರತದಲ್ಲಿ ಬಿಡುಗಡೆ... ಚೀನಾ ಮೂಲದ ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿ ಶಿಯೋಮಿ ಭಾರತದಲ್ಲಿ ಶೀಘ್ರವೇ ರೆಡ್‌ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಶಿಯೋಮಿ ಕಂಪನಿಯ ಈ ಸ್ಮಾರ್ಟ್‌ಫೋನ್ ಇರುವ ರಿಟೇಲ್ ಬಾಕ್ಸ್ ಇಮೇಜ್ ಅನ್ನು ರಿಲೀಸ್ ಮಾಡಿ ಸ್ಮಾರ್ಟ್‌ಫೋನ್ ಗ್ರಾಹಕರಲ್ಲಿ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೋನಾದಿಂದ ತಂದೆಯನ್ನು ಕಳ್ಕೊಂಡ ಬೆಂಗಳೂರಿನ ಬಾಲಕನಿಗೆ ಸಲ್ಮಾನ್ ನೆರವು... ಕೊರೋನಾದಿಂದ ತಂದೆಯನ್ನು ಕಳ್ಕೊಂಡ ಬಾಲಕನಿಗೆ ಸಲ್ಮಾನ್ ನೆರವು | ರೇಷನ್, ಶಿಕ್ಷಣ ಸಂಬಂಧಿಸಿದ ನೆರವು ನೀಡಿದ ನಟ 'ಕೊರೋನಾ ನಿಯಂತ್ರಣಕ್ಕೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ '... ಕೊರೋನಾ ನಿಯಂತ್ರಣಕ್ಕೆ‌ ಹೊಸ ಟಾಸ್ಕ್‌ಪೋರ್ಸ್ ಕಮಿಟಿ ರಚನೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರೇ ಟಾಸ್ಕ್ ಪೋರ್ಸ್ ಕಮಿಟಿಯ ಅಧ್ಯಕ್ಷರಾಗಿರುತ್ತಾರೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು. ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ... ರಾಜ್ಯದ 5 ಜಿಲ್ಲೆಗಳಲ್ಲಿ ಭಾರೀ ಮಳೆ| ಹರಿಹರದಲ್ಲಿ ಭಾರೀ ಗಾಳಿಗೆ ಅನೇಕ ಮರಗಳು ಧರೆಗುರುಳಿವೆ, ವಿದ್ಯುತ್‌ ವ್ಯತ್ಯಯ| ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸೇರಿ ಒಟ್ಟು 7 ಮಂದಿ ಬಲಿ| ಬೆಂಗಳೂರಿನಲ್ಲಿ ಜೂನ್‌ಗೆ ಕೊರೋನಾ ಕರಾಳತೆ : ಟಾಸ್ಕ್‌ಫೋರ್ಸ್ ಟೀಂ ಎಚ್ಚರಿಕೆ... ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಕೋವಿಡ್ ಟಾಸ್ಕ್ ಫೋರ್ಸ್ ಟೀಂ ತಿಳಿಸಿದೆ. ಬೆಂಗಳೂರಿನ ಪಾಲಿಗೆ ಇದೊಂದು ಆಘಾತಕಾರಿ ವಿಚಾರವಾಗಿದ್ದು, ಜೂನ್‌ಗೆ ಕೋವಿಡ್ ಕೇಸ್‌ಗಳು ವಿಪರೀತವಾಗುವ ಎಚ್ಚರಿಕೆ ನೀಡಿದೆ.