ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಈ ಬ್ಯಾಂಕ್‌ ಹೊರಕ್ಕೆ 3 ದಶಕಗಳ ಸೇವೆ ಬಳಿಕ ಬ್ಯಾಂಕೊಂದು ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಹೊರ ನಡೆಯುತ್ತಿದೆ. ಭಾರತ ಸೇರಿದಂತೆ 13 ದೇಶಗಳಲ್ಲಿನ ವಹಿವಾಟಿನಿಂದ ಮುಕ್ತವಾಗುತ್ತಿದೆ. ಮುಂಬೈ (ಏ.16):ಅಮೆರಿಕ ಮೂಲದ ಸಿಟಿಬ್ಯಾಂಕ್‌, ಭಾರತ ಸೇರಿದಂತೆ 13 ದೇಶಗಳಲ್ಲಿನ ತನ್ನ ಗ್ರಾಹಕ (ಚಿಲ್ಲರೆ) ಬ್ಯಾಂಕಿಂಗ್‌ ವ್ಯವಹಾರವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದೆ. 1902ರಲ್ಲೇ ಭಾರತಕ್ಕೆ ಕಾಲಿಟ್ಟಿದ್ದ ಬ್ಯಾಂಕ್‌, 1985ರಲ್ಲಿ ಚಿಲ್ಲರೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಹೀಗೆ 3 ದಶಕಗಳ ಸೇವೆ ನೀಡಿದ ಬಳಿಕ ಇಂಥದ್ದೊಂದು ನಿರ್ಧಾರವನ್ನು ಅದು ಕೈಗೊಂಡಿದೆ. ಗ್ರಾಹಕರಿಗೆ ಬಿಗ್‌ನ್ಯೂಸ್: ನಿಮ್ಮ ಖರೀದಿಗೆ 52 ರೂ.ನಿಂದ ಆರಂಭ .. ಗ್ರಾಹಕ ಬ್ಯಾಂಕಿಂಗ್‌ ವಲಯವು ಕ್ರೆಡಿಟ್‌ ಕಾರ್ಡ್‌, ಚಿಲ್ಲರೆ ವಹಿವಾಟು, ಗೃಹ ಸಾಲ ಸೇರಿದಂತೆ ಇತರೆ ವ್ಯವಹಾರಗಳನ್ನು ಒಳಗೊಂಡಿದೆ. ಬ್ಯಾಂಕ್‌ ಭಾರತದಲ್ಲಿ 35 ಶಾಖೆಗಳನ್ನು ಹೊಂದಿದ್ದು, 4000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡಿದೆ. ಆದರೆ ಬ್ಯಾಂಕ್‌ನ ಈ ನಿರ್ಧಾರವು ಆರ್‌ಬಿಐ ಅನುಮತಿ ಸಿಕ್ಕ ಬಳಿಕವಷ್ಟೇ ಜಾರಿಗೆ ಬರಲಿದೆ.