ವಿದೇಶಿ ಕ್ರಿಕೆಟಿಗರಿಗೆ ಆತಂಕ, ಜಾರಕಿಹೊಳಿ ಮಾತಿಗೆ ಕೆಲವರಲ್ಲಿ ನಡುಕ: ಮಾ.9ರ ಟಾಪ್ 10 ಸುದ್ದಿ! ರಾಸಲೀಲಿ ಸಿಡಿ ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಹಲವು ರಹಸ್ಯ ಬಹಿರಂಗ ಪಡಿಸಿದ್ದಾರೆ. ಇತ್ತ ವಿದೇಶಿ ಕ್ರಿಕೆಟಿಗರಿಗೆ ಐಪಿಎಲ್ ಆತಂಕ ಎದುರಾಗಿದೆ. ಸಿದ್ದು- ಬಿಎಸ್‌ವೈ ಮುಖಾಮುಖಿಯಾಗಿದ್ದಾರೆ. ರಣಬೀರ್ ಕಪೂರ್‌ಗೆ ಕೊರೋನಾ ಪಾಸಿಟೀವ್, ಕುಗ್ರಾಮದ ಮಣ್ಣಿನ ಕಣ ಕಣದಲ್ಲೂ ಚಿನ್ನ ಸೇರಿದಂತೆ ಮಾ.9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ರಾಸಲೀಲೆ ಸೀಡಿ ಕೇಸ್ : ಜಾರಕಿಹೊಳಿ ಹೇಳಿದ ರಹಸ್ಯ... ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಹೊಸ ತಿರುವುಗಳು ಲಭ್ಯವಾಗುತ್ತಿದೆ. ಅಪಾರ್ಟ್ಮೆಂಟ್‌ನಲ್ಲಿ ನಡೆದಿತ್ತು ಆ ಸ್ಕೆಚ್ ಎಂದು ಹೇಳಲಾಗಿದೆ. ಸಾಹುಕಾರ್‌ ಇದೀಗ ಅಪಾರ್ಟ್‌ಮೆಂಟ್ ರಹಸ್ಯ ಹೇಳಿದ್ದಾರೆ. ಅಲ್ಲದೇ ಇದು ಷಡ್ಯಂತ್ರ ಎಂದು ಹೇಳಿದ್ದಾರೆ. ಸಿದ್ದು- ಬಿಎಸ್‌ವೈ ಮುಖಾಮುಖಿ : ಆತ್ಮೀಯ ಮಾತುಕತೆ... ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದರು. ಆತ್ಮೀಯಯತೆಯಿಂದ ಮಾತುಕತೆ ನಡೆಸಿದರು. ಪ್ರತಿ ಐಪಿಎಲ್‌ ತಂಡದ ಈ ವಿದೇಶಿ ಸ್ಟಾರ್ ಆಟಗಾರರ ಬೆಂಚ್ ಕಾಯಿಸೋದು ಪಕ್ಕಾ..!... ಐಪಿಎಲ್‌ ಟೂರ್ನಿಯ ಆಡುವ ಹನ್ನೊಂದರ ಬಳಗದಲ್ಲಿ ಕೇವಲ 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಸಾಕಷ್ಟು ಪ್ರತಿಭೆ ಹಾಗೂ ಸಾಮರ್ಥ್ಯವಿದ್ದರೂ ಕೆಲವು ಸ್ಟಾರ್ ವಿದೇಶಿ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಬೆಂಚ್‌ ಕಾಯಿಸಬೇಕಾಗಬಹುದು. ನಟ ರಣಬೀರ್ ಕಪೂರ್‌ಗೆ ಕೊರೋನಾ ಪಾಸಿಟಿವ್, ಮನೆಯಲ್ಲಿಯೇ ಕ್ವಾರಂಟೈನ್!... ಮಗ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನೀತು ಕಪೂರ್. ಕೋವಿಡ್‌19 ಪಾಸಿಟಿವ್, ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಬ್ರಹ್ಮಾಸ್ತ್ರ ನಟ. ಪಿಎಫ್‌ ನಿಯಮದಲ್ಲಿ ಮಹತ್ವದ ಬದಲಾವಣೆ: ನೌಕರರಿಗೆ ಸಂತಸ!... ನೌಕರರ ಭವಿಷ್ಯ ನಿಧಿ (ಪಿಎಫ್‌) ಯನ್ನು ವರ್ಗಾಯಿಸಲು ಅಥವಾ ಹಿಂಪಡೆದುಕೊಳ್ಳಲು ನೌಕರರು ತಾವು ಈ ಹಿಂದೆ ಕೆಲಸ ಮಾಡಿದ್ದ ಕಂಪನಿಯ ಮೇಲೆ ಅವಲಂಬಿತವಾಗಿಬೇಕಾಗಿಲ್ಲ. ಇಪಿಎಫ್‌ಒ ಖಾತೆಗೆ ಲಾಗಿನ್‌ ಆಗಿ ಪಿಎಫ್‌ ಸಮಾಪ್ತಿಗೊಳಿಸಿದ ದಿನಾಂಕವನ್ನು ಅಪ್‌ಡೇಟ್‌ ಮಾಡುವ ಮೂಲಕ ಬಾಕಿ ಇರುವ ಹಣವನ್ನು ಪಡೆದುಕೊಳ್ಳಬಹುದಾಗಿದೆ. ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!... ಒಲಾ ಕ್ಯಾಬ್ಸ್ ಇದೀಗ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದಲ್ಲಿ ತೊಡಗಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ತಲೆ ಎತ್ತಿದೆ. ಈ ಘಚಕದಲ್ಲಿ ಹಲವು ವಿಶೇಷತೆಗಳಿವೆ. ಇದರ ನಡುವೆ ಮೊದಲ ಒಲಾ ಸ್ಕೂಟರ್ ಇಮೇಜ್ ಕೂಡ ಬಹಿರಂಗಗೊಂಡಿದೆ. ಯತ್ನಾಳ್-ಬಿಎಸ್‌ವೈ ಮುಖಾಮುಖಿ: ಉಭಯ ನಾಯಕ ಮಧ್ಯೆ ನಡೀತು ಮಹತ್ವದ ಚರ್ಚೆ... ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಪರೂಪವೆಂಬಂತೆ ಮುಖಾಮುಖಿ ಭೇಟಿಯಾಗಿದ್ದಾರೆ. ಪತ್ತೆಯಾಯ್ತು ಬಂಗಾರದ ಬೆಟ್ಟ, ಕುಗ್ರಾಮದ ಮಣ್ಣಿನ ಕಣ ಕಣದಲ್ಲೂ ಚಿನ್ನ!. ಅಲ್ಲಿ ಬೀಸುವ ಧೂಳಿನ ಕಣ ಕಣದಲ್ಲೂ ಇದೆ ಬಂಗಾರ. ಆ ಮಣ್ಣಿನಲ್ಲಿದೆ ಶೇ. 90ರಷ್ಟು ಚಿನ್ನ. ಗುದ್ದಲಿ, ಸಲಾಕೆ, ನೀರಿನ ಪಾತ್ರೆ ಇಷ್ಟಿದ್ರೆ ಸಾಕು, ಅಲ್ಲಿ ನಡೆಯುತ್ತೆ ಚಿನ್ನದ ಗಣಿಗಾರಿಕೆ. ಬಂಗಾರ ಬೇಟೆಯ ಸ್ಪೀಡಿಗೆ ಇಡೀ ದೇಶವೇ ಕಂಗಾಲಾಗಿದೆ. ಹಾಗಾದ್ರೆ ಭಾರತಕ್ಕೂ ಆ ಬಂಗಾರ ಆಮದಾಗುತ್ತಾ? ಇಲ್ಲಿದೆ ನೋಡಿ ಒಂದು ವರದಿ