2021: ರೈಲ್ವೇಗೆ 1,10,055 ಕೋಟಿ ರೂ ಅನುದಾನ ಮೀಸಲು! ರೈಲ್ವೇ ಅಭಿವೃದ್ಧಿಗೆ ಹೊಸ ಘೋಷಣೆ| ರೈಲ್ವೇಗೆ 1,10,055 ಕೋಟಿ ರೂ ಅನುದಾನ ಮೀಸಲು| ರೈಲ್ವೇಸ್ 2.17 ಲಕ್ಷ ಕೋಟಿ ರೂ ಮೊತ್ತದ ದಾಖಲೆಯ ಬಂಡವಾಳ ವೆಚ್ಚ. ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೇ ಅಭಿವೃದ್ಧಿಗೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಅಲ್ಲದೇ 2021-22ನೇ ಸಾಲಿನ ರೈಲ್ವೆ ಯೋಜನೆಗಳಿಗೆ 1,10,055 ಕೋಟಿ ರೂ ಅನುದಾನ ಘೋಷಿಸಿದ್ದಾರೆ. " ಸಂಸತ್ ನಲ್ಲಿ ಕೇಂದ್ರ ಬಜೆಟ್ 2021 ಮಂಡಿಸಿದ ನಿರ್ಮಲಾ ಸೀತಾರಾಮನ್ , ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿದ್ದು. ಕಳೆದ ಬಾರಿಯ ರೈಲ್ವೇ ಬಜೆಟ್ ಗಿಂತ 40,055 ಕೋಟಿ ರೂ ಹೆಚ್ಚಿದೆ ಎಂದ್ದಾರೆ. ಕಳೆದ ವರ್ಷ ರೈಲ್ವೇ ಇಲಾಖೆಗೆ 70,000 ಕೋಟಿ ರೂ ಮೀಸಲಿಡಲಾಗಿತ್ತು. * ಭಾರತೀಯ ರೈಲ್ವೆ ಯೋಜನೆ 2030 ಸಿದ್ಧ. * ರೈಲ್ವೇಗೆ 2.17 ಲಕ್ಷ ಕೋಟಿ ರೂದ ಮೊತ್ತದ ದಾಖಲೆಯ ಬಂಡವಾಳ ವೆಚ್ಚ. * ರೈಲ್ವೆಗೆ 1.15 ಲಕ್ಷ ಕೋಟಿ ರೂ ನೀಡುತ್ತಿದ್ದು, ಅದರಲ್ಲಿ ಸಿಎಪಿಇಎಕ್ಸ್ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್) ಮೊತ್ತ 1.07 ಲಕ್ಷ ಕೋಟಿ ರೂ ಇರಲಿದೆ. * ರೈಲ್ವೆಯು ಮುಂದೆ ಸರಕು ಸಾಗಣೆ ಕಾರಿಡಾರ್‌ಗೆ ಹೆಚ್ಚಿನ ಗಮನ. * 46,000 ಕಿ.ಮೀ. ಈ ವರ್ಷ ಬ್ರಾಡ್​ಗೇಜ್​ ಹಳಿ ಪರಿವರ್ತನೆ * ಸರಕು ಕಾರಿಡಾರ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, 18,000 ಕೋಟಿ ರೂ ಮೊತ್ತದ ಸಾರ್ವಜನಿಕ ಸಾರಿಗೆಯ ಪಾಲನ್ನು ಪಡೆದುಕೊಳ್ಳುವತ್ತ ಕೆಲಸ * ಜೂನ್ 2022ರ ಒಳಗೆ ಎರಡು ಕಾರಿಡಾರ್ ಪೂರ್ಣ * 2023ರ ಡಿಸೆಂಬರ್ ವೇಳೆಗೆ 100 ಬ್ರಾಡ್‌ಗೇಜ್ ರೈಲ್ವೇ ಹಳಿಗಳ ವಿದ್ಯುದೀಕರಣ.