:ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ 2024-25ನೇ ಹಣಕಾಸು ಸಾಲಿನ ಮೊದಲ ತಿಂಗಳಾದ ಏಪ್ರಿಲ್ ನಲ್ಲಿ ಬ್ಯಾಂಕುಗಳಿಗೆ ಒಟ್ಟು 14 ದಿನಗಳ ಕಾಲ ರಜೆಯಿದೆ. ನವದೆಹಲಿ (ಮಾ.27):ಪ್ರತಿ ಹೊಸ ತಿಂಗಳು ಪ್ರಾರಂಭವಾಗೋದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕುಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದೇರೀತಿ ಏಪ್ರಿಲ್ ತಿಂಗಳ ಪ್ರಾರಂಭಕ್ಕೆ ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿದ್ದು, ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಇನ್ನು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ಎಂದಿನಂತೆ ರಜೆಯಿರುತ್ತದೆ. ಇನ್ನು ಏಪ್ರಿಲ್ ತಿಂಗಳು 2024-25ನೇ ಆರ್ಥಿಕ ಸಾಲಿನ ಮೊದಲ ತಿಂಗಳಾಗಿರುವ ಕಾರಣ ಕೆಲವರಿಗೆ ಒಂದಿಷ್ಟು ಹಣಕಾಸು ಸಂಬಂಧಿ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಪ್ರಸಂಗ ಎದುರಾಗಬಹುದು. ಅಂಥ ತುರ್ತು ಕೆಲಸಗಳಿದ್ರೆ ರಜಾಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ಭೇಟಿ ನೀಡಿ. ಇಲ್ಲವಾದ್ರೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ಆದರೆ, ಈ ರಜಾದಿನಗಳಂದು ಎಟಿಎಂ, ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿರೋದಿಲ್ಲ. ಇನ್ನು ಸಾಮಾನ್ಯವಾಗಿ ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡಲೇಬೇಕಾದ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಗೃಹಸಾಲ, ಕಾರು ಸಾಲ ಮುಂತಾದ ಸಾಲಗಳಿಗೆ ಅರ್ಜಿ ಸಲ್ಲಿಸಬೇಕಿದ್ರೆ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕಿಗೆ ರಜೆ ಎಂಬುದನ್ನು ಪರಿಶೀಲಿಸಿ, ಆ ಬಳಿಕ ಭೇಟಿ ನೀಡಿ. ಇದ್ರಿಂದ ಯಾವುದೇ ಸಮಸ್ಯೆಯಾಗೋದಿಲ್ಲ. ಈ ಭಾನುವಾರ ಬ್ಯಾಂಕಿಗೆ ರಜೆಯಿಲ್ಲ; ಈ ದಿನ ಗ್ರಾಹಕರು ಯಾವೆಲ್ಲ ವಹಿವಾಟು ನಡೆಸಬಹುದು? ಇಲ್ಲಿದೆ ಮಾಹಿತಿ ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು ( ). ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ),ಕೋ-ಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಈ ಎಲ್ಲ ಶುಲ್ಕಗಳ ಬಗ್ಗೆ ಮಾಹಿತಿ ಇರಲಿ ಏಪ್ರಿಲ್ ತಿಂಗಳ ರಜಾಪಟ್ಟಿ ಹೀಗಿದೆ:ಏಪ್ರಿಲ್ 1:ವಾರ್ಷಿಕ ಖಾತೆಗಳ ಕ್ಲೋಸಿಂಗ್ ಹಿನ್ನೆಲೆಯಲ್ಲಿ ರಜೆ.ಏಪ್ರಿಲ್ 5:ಬಾಬು ಜಗ್ಜೀವನ್ ರಾಮ್ ಹುಟ್ಟುಹಬ್ಬ/ಜುಮತ್ -ಉಲ್-ವಿದಏಪ್ರಿಲ್ 7:ಭಾನುವಾರಏಪ್ರಿಲ್ 9:ಗುದಿ ಪಡ್ವಾ/ಯುಗಾದಿ ಹಬ್ಬ/ತೆಲುಗು ಹೊಸ ವರ್ಷದ ದಿನ/ ಮೊದಲ ನವರಾತ್ರಏಪ್ರಿಲ್ 10:ರಂಜಾನ್ -ಇದ್ (ಈದ್ -ಉಲ್ -ಫಿತರ್)ಏಪ್ರಿಲ್ 11:ರಂಜಾನ್ -ಇದ್ (ಈದ್ -ಉಲ್ -ಫಿತರ್)ಏಪ್ರಿಲ್ 13:ಬೊಹಗ್ ಬಿಹು/ಛೆರೊಬ/ಬೈಸಾಕಿ/ಬಿಜು ಹಬ್ಬಏಪ್ರಿಲ್ 14:ಭಾನುವಾರಏಪ್ರಿಲ್ 15:ಬೊಹಗ್ ಬಿಹು/ಹಿಮಾಚಲ ದಿನಏಪ್ರಿಲ್ 17:ಶ್ರೀರಾಮ ನವಮಿ (ಚೈತೆ ದಸೈನ್)ಏಪ್ರಿಲ್ 20:ಗರಿಯಾ ಪೂಜಾಏಪ್ರಿಲ್ 21:ಭಾನುವಾರಏಪ್ರಿಲ್ 27:ನಾಲ್ಕನೇ ಶನಿವಾರಏಪ್ರಿಲ್ 28:ಭಾನುವಾರ