: ಮಾರ್ಚ್ ತಿಂಗಳಲ್ಲಿ 14 ದಿನ ಬ್ಯಾಂಕ್ ಕ್ಲೋಸ್; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ.. ಈ ಆರ್ಥಿಕ ಸಾಲಿನ ಕೊನೆಯ ತಿಂಗಳಾದ ಮಾರ್ಚ್ ನಲ್ಲಿ ಬ್ಯಾಂಕುಗಳು ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ನವದೆಹಲಿ (ಫೆ.26):ಮಾರ್ಚ್ ತಿಂಗಳು ಪ್ರಾರಂಭವಾಗಲು ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಮಾರ್ಚ್ ತಿಂಗಳ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ದಿನಗಳ ಕಾಲ ರಜೆಯಿದೆ. ಮಹಾಶಿವರಾತ್ರಿ, ಹೋಳಿ, ಗುಡ್ ಫ್ರೈಡೇ ಸೇರಿದಂತೆ ಮಾರ್ಚ್ ತಿಂಗಳಲ್ಲಿ ವಿವಿಧ ಹಬ್ಬಗಳು ಹಾಗೂ ವಿಶೇಷ ದಿನಗಳ ಪ್ರಯುಕ್ತ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಇನ್ನು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ರಜೆಯಿದೆ. ಮಾರ್ಚ್ ತಿಂಗಳು ಆರ್ಥಿಕ ಸಾಲಿನ ಕೊನೆಯ ತಿಂಗಳಾಗಿರುವ ಕಾರಣ ಕೆಲವು ಪ್ರಮುಖ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು. ಅಂಥ ತುರ್ತು ಕೆಲಸಗಳಿದ್ರೆ ರಜಾಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ಭೇಟಿ ನೀಡಿ. ಇಲ್ಲವಾದ್ರೆ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ಆದರೆ, ಎಟಿಎಂ, ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಗಳು ರಜಾದಿನಗಳಂದು ಕೂಡ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದೇ ವ್ಯತ್ಯಯವಾಗೋದಿಲ್ಲ. ಇನ್ನು ಸಾಮಾನ್ಯವಾಗಿ ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಇನ್ನು ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡಲೇಬೇಕಾದ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಗೃಹಸಾಲ, ವಾಹನಸಾಲ ಅಥವಾ ಇನ್ಯಾವುದೇ ಅಗತ್ಯ ಕೆಲಸಗಳಿಗೆ ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅಗತ್ಯವಿದ್ರೆ, ರಜೆಪಟ್ಟಿ ನೋಡಿಕೊಂಡು ಹೋಗಲು ಮರೆಯಬೇಡಿ. ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿದರದಲ್ಲಿ ಏರಿಕೆ; 8 ಬ್ಯಾಂಕುಗಳ ಪರಿಷ್ಕೃತ ಬಡ್ಡಿದರ ಹೀಗಿದೆ ಬ್ಯಾಂಕ್ () ರಜೆಗಳನ್ನು () ಆರ್ ಬಿಐ () ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು ( ). ಆರ್ ಬಿಐ () ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ ( ), ಖಾಸಗಿ ವಲಯ ( ), ವಿದೇಶಿ ಬ್ಯಾಂಕುಗಳು ( ),ಕೋ-ಆಪರೇಟಿವ್ ಬ್ಯಾಂಕುಗಳು (- ) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ( ) ಅನ್ವಯಿಸಲಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರೋ ಗ್ರಾಹಕರ ಹಣ ಏನಾಗುತ್ತೆ? ಯಾರು ಭದ್ರತೆ ನೀಡ್ತಾರೆ? ಮಾರ್ಚ್ ತಿಂಗಳ ರಜಾಪಟ್ಟಿ ಹೀಗಿದೆ:ಮಾರ್ಚ್ 1:ಛಪ್ ಛರ್ ಕುತ್ (ಮಿಜೋರಾಂ)ಮಾರ್ಚ್ 3:ಭಾನುವಾರಮಾರ್ಚ್ 8:ಮಹಾಶಿವರಾತ್ರಿ (ನವದೆಹಲಿ, ಬಿಹಾರ್, ರಾಜಸ್ಥಾನ, ತಮಿಳು ನಾಡು, ತ್ರಿಪುರ, ಪಶ್ಚಿಮ ಬಂಗಾಳ, ಮಿಜೋರಾಂ, ಅಸ್ಸಾಂ, ಮಣಿಪುರ, ಮೇಘಾಲಯ, ಸಿಕ್ಕಿಂ, ನಾಗಲ್ಯಾಂಡ್, ಇಟಾನಗರ್, ಗೋವಾ)ಮಾರ್ಚ್ 9:ಎರಡನೇ ಶನಿವಾರಮಾರ್ಚ್ 10:ಭಾನುವಾರಮಾರ್ಚ್ 17:ಭಾನುವಾರಮಾರ್ಚ್ 22:ಬಿಹಾರ ದಿವಸ್ (ಬಿಹಾರ)ಮಾರ್ಚ್ 23:ನಾಲ್ಕನೇ ಶನಿವಾರಮಾರ್ಚ್ 24:ಭಾನುವಾರಮಾರ್ಚ್ 25:ಹೋಳಿ (ಕರ್ನಾಟಕ, ಒಡಿಶಾ, ತಮಿಳು ನಾಡು ಮಣಿಪುರ್, ಕೇರಳ, ನಾಗಲ್ಯಾಂಡ್, ಬಿಹಾರ, ಶ್ರೀನಗರ ಹೊರತುಪಡಿಸಿ)ಮಾರ್ಚ್ 26:ಯೋಸ್ಯಾಂಗ್ ಎರಡನೇ ದಿನ /ಹೋಳಿ (ಒಡಿಶಾ, ಮಣಿಪುರ, ಬಿಹಾರ)ಮಾರ್ಚ್ 27:ಹೋಳಿ (ಬಿಹಾರ)ಮಾರ್ಚ್ 29:ಗುಡ್ ಫ್ರೈಡೇ (ತ್ರಿಪುರ, ಅಸ್ಸಾಂ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ)ಮಾರ್ಚ್ 31:ಭಾನುವಾರ