ಅಂಬಾನಿ ದಿವಾಳಿಯಾದ ರಿಲಯನ್ಸ್ ಕ್ಯಾಪಿಟಲ್ ಹಿಂದೂಜಾ ಕಂಪೆನಿಗೆ ಮಾರಾಟ, ಎಷ್ಟಕ್ಕೆ ಕೋಟಿಗೆ ಸೇಲ್‌ ಆಯ್ತು? ದಿವಾಳಿಯಾಗಿರುವ ಅನಿಲ್‌ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಅನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಹಿಂದೂಜಾ ಗ್ರೂಪ್ ಕಂಪನಿ ಇಂಡಸ್‌ಇಂಡ್ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪೆನಿಯನ್ನು ತೆಗೆದುಕೊಳ್ಳಲು ಮುಂದಾಗಿದೆ. ದಿವಾಳಿಯಾಗಿರುವ ಅನಿಲ್‌ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಅನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಹಿಂದೂಜಾ ಗ್ರೂಪ್ ಕಂಪನಿ ಇಂಡಸ್‌ಇಂಡ್ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪೆನಿಯನ್ನು ತೆಗೆದುಕೊಳ್ಳಲು ಮುಂದಾಗಿದೆ. ಒಂದು ಕಾಲದಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಅನಿಲ್ ಅಂಬಾನಿ ತಮ್ಮ ಅಣ್ಣ ಮುಖೇಶ್ ಅಂಬಾನಿಯನ್ನು ಮೀರಿ ಬೆಳೆದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದವರು ದಿವಾಳಿಯಾಗಿದ್ದು, ತಮ್ಮ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಅನ್ನು ಮಾರಾಟ ಮಾಡಲು ಸಿದ್ಧರಾಗಿದ್ದು, ಆರ್‌ಬಿಐ ಒಪ್ಪಿಗೆ ಸೂಚಿಸಿದೆ. ನವೆಂಬರ್ 29, 2021 ರಂದು, ಪಾವತಿ ಡೀಫಾಲ್ಟ್‌ಗಳು ಮತ್ತು ಗಮನಾರ್ಹ ಆಡಳಿತ ಸಮಸ್ಯೆಗಳ ಕಾರಣ ರಿಲಯನ್ಸ್ ಕ್ಯಾಪಿಟಲ್ ಬೋರ್ಡ್ ಅನ್ನು ವಿಸರ್ಜಿಸಿತು. ರಿಲಯನ್ಸ್ ಕ್ಯಾಪಿಟಲ್ ಒಂದು ಹಣಕಾಸು ಸೇವೆಗಳ ಕಂಪನಿಯಾಗಿದೆ. ಇದು ವೈಯಕ್ತಿಕ ಮತ್ತು ವ್ಯಾಪಾರ ಸಾಲಗಳು, ವಿಮೆ, ಹೂಡಿಕೆಗಳು ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು 2021 ರಲ್ಲಿ ದಿವಾಳಿಯಾಯಿತು.