ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ ಹಮಾಸ್ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಭಾರತದಿಂದ ವಿವಿಧ ಉದ್ಯೋಗ ವಲಯಕ್ಕೆ 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲು ಇಸ್ರೇಲ್‌ನಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸುದ್ದಿಯ ನಡುವೆಯೇ ತೈವಾನ್ ಕೂಡಾ ಭಾರತದಿಂದ 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ನವದೆಹಲಿ: ಹಮಾಸ್ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಭಾರತದಿಂದ ವಿವಿಧ ಉದ್ಯೋಗ ವಲಯಕ್ಕೆ 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲು ಇಸ್ರೇಲ್‌ನಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸುದ್ದಿಯ ನಡುವೆಯೇ ತೈವಾನ್ ಕೂಡಾ ಭಾರತದಿಂದ 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ಈ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ( ), ಕೇಂದ್ರ ಸರ್ಕಾರ ( ) ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಕಾರ್ಮಿಕ ವಿನಿಮಯ ಒಪ್ಪಂದ ಮಾಡಿಕೊಳ್ಳುತ್ತಿದೆ. ಅದರ ಮೊದಲ ಭಾಗವಾಗಿ ಮುಂದಿನ ತಿಂಗಳು ತೈವಾನ್ ()ದೇಶದ ಕಾರ್ಖಾನೆ, ಆಸ್ಪತ್ರೆ ಹಾಗೂ ಹೊಲಗಳಲ್ಲಿ ದುಡಿಯಲು ಕಾರ್ಮಿಕರನ್ನು ಕಳುಹಿಸಲಾಗುತ್ತಿದೆ. ಹಂತಹಂತವಾಗಿ ಈ ಪ್ರಮಾಣವನ್ನು 1 ಲಕ್ಷಕ್ಕೆ ಏರಿಸಲಾಗುವುದು. ಇದು 2025ರ ವೇಳೆಗೆ ತನ್ನ ಜನಸಂಖ್ಯೆಯ ಶೇ.20ರಷ್ಟು ವೃದ್ಧರನ್ನೇ ಹೊಂದಲಿರುವ ತೈವಾನ್‌ಗೆ ತನ್ನ ಆರ್ಥಿಕತೆಯನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಸಹಾಯಕವಾಗಲಿದೆ' ಎಂದು ತಿಳಿಸಿದರು. ಆದರೆ ತೈವಾನ್ ತನ್ನದೇ ಪ್ರದೇಶವೆಂದು ವಾದಿಸುತ್ತಿರುವ ಚೀನಾ ಈ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ ನಿರ್ಗತಿಕನ ಬದುಕು ಬದಲಿಸಿದ ಕುದುರೆ ರೇಸ್‌: 5 ಡಾಲರ್‌ ಬೆಟ್ ಕಟ್ಟಿದವನಿಗೆ ಒಲಿಯಿತು 1 ಲಕ್ಷ ಡಾಲರ್ ಗಾಜಾ ಶಿಬಿರ: 50 ಸಾವಿರ ನಿರಾಶ್ರಿತರಿಗೆ ಬರೀ 4 ಟಾಯ್ಲೆಟ್‌, 4 ತಾಸಷ್ಟೇ ನೀರು!