ಅಯೋಧ್ಯೆಯ ಶ್ರೀರಾಮನ ಆರಾಧನೆಗೆ 3000 ಅರ್ಚಕರ ಹಿಂದಿಕ್ಕಿ ಆಯ್ಕೆಯಾದ ವಿದ್ಯಾರ್ಥಿ ಮೋಹಿತ್ ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ಈ ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು, ಹೀಗೆ ನೇಮಕವಾದ ಪುರೋಹಿತರ ಪೈಕಿ ಓರ್ವ ವಿದ್ಯಾರ್ಥಿಯೂ ಸೇರಿದ್ದಾನೆ. ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ದೇಗುಲ ನಿರ್ಮಾಣ ಕಾಮಗಾರಿ ಕೊನೆ ಹಂತ ತಲುಪಿದ್ದು 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ದೇಗುಲದ ಉದ್ಘಾಟನೆ ಮಾಡಲಿದ್ದಾರೆ. ಈ ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು, ಹೀಗೆ ನೇಮಕವಾದ ಪುರೋಹಿತರ ಪೈಕಿ ಓರ್ವ ವಿದ್ಯಾರ್ಥಿಯೂ ಸೇರಿದ್ದಾನೆ. ಅವರೇ ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋಹಿತ್ ಪಾಂಡೆ ಅವರ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಗಾಜಿಯಾಬಾದ್‌ನ () ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ ( ) ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ದೇಶದೆಲ್ಲೆಡೆಯ ಪುರೋಹಿತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 3 ಸಾವಿರಕ್ಕೂ ಹೆಚ್ಚು ಮಂದಿ ಈ ಪೌರೋಹಿತ್ಯ ಕೆಲಸಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದರು. ಅಷ್ಟೊಂದು ಜನರಲ್ಲಿ ಕೇವಲ 50 ಮಂದಿಯನ್ನು ದೇಗುಲದ ಪೂಜೆಗಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರಾಗಿದ್ದಾರೆ ಈ ವಿದ್ಯಾರ್ಥಿ ಮೋಹಿತ್ ಪಾಂಡೆ. ಇಲ್ಲಿ ಪುರೋಹಿತರಾಗಿ ಆಯ್ಕೆಯಾದ ಅರ್ಚಕರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಾಗಿದೆ. ಅಯೋಧ್ಯೆ ದೇಗುಲದ ಬಗ್ಗೆ ಶಾಸಕಿ ಕವಿತಾ ಪೋಸ್ಟ್‌: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು ಈ ಮೋಹಿತ್ ಪಾಂಡೆಯವರು ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ ( ) ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ವೇದಾಧ್ಯಯನ ನಡೆಸಿದ್ದಾರೆ. ಈ ದೂಧೇಶ್ವರನಾಥ ಮಠವೂ ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇದಾಧ್ಯಯನ ಪೀಠದಲ್ಲಿ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶದ ಮಾತ್ರವಲ್ಲದೇ ವಿದೇಶಗಳಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೂಧೇಶ್ವರನಾಥ ಮಠದ ಪೀಠಾಧೀಶ್ವರ ಮಹಾಂತ್‌ ನಾರಾಯಣ ಗಿರಿ ಮಾತನಾಡಿದ್ದು, ದೂಧೇಶ್ವರ ದೇವರ ಆಶೀರ್ವಾದದಿಂದ ಅಯೋಧ್ಯೆಯ ಶ್ರೀರಾಮನ ಸೇವೆಗೆ ಮೋಹಿತ್ ಪಾಂಡೆ ಆಯ್ಕೆಯಾಗಿದ್ದಾರೆ. ಈ ನಮ್ಮ ಮಠದಲ್ಲಿ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವೇದಾಧ್ಯಾಯನ ಕಲಿಸಿ ಸಂಸ್ಕಾರ ನೀಡಲಾಗಿದೆ. ಕಳೆದ 23 ವರ್ಷಗಳಿಂದ ಇಲ್ಲಿ ವೇದಾಧ್ಯಾಯನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ: ಗರ್ಭಗುಡಿ ಫೋಟೋ ಬಿಡುಗಡೆ ಮಾಡಿದ ಮಂದಿರ ಟ್ರಸ್ಟ್‌ ಧೂದೇಶ್ವರ ವಿದ್ಯಾಪೀಠದಲ್ಲಿ ಮೋಹಿತ್ ಅವರು 7 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಇಲ್ಲಿ ಅಧ್ಯಯನದ ನಂತರ ಹೆಚ್ಚಿನ ವೇದಾಭ್ಯಾಸಕ್ಕಾಗಿ ಮೋಹಿತ್ ತಿರುಪತಿಗೆ ಹೋಗಿದ್ದರು ಎಂದು ಮಹಾಂತ್‌ ನಾರಾಯಣ ಗಿರಿ ಮಾಹಿತಿ ನೀಡಿದ್ದಾರೆ.