ತಿರುಪತಿಗೆ ಮೋದಿ : ತಿಮ್ಮಪ್ಪನ ದರ್ಶನ ಪಡೆಯಲಿರುವ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ತಿರುಪತಿ: ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೋದಿ ನ.26 ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್‌ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ನ.27ರಂದು ವಿಐಪಿ ದರ್ಶನವನ್ನು ( ) ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ಮೊದಿ ಭೇಟಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಮಾದಿಗ ಒಳಮೀಸಲು: ಬೇಗ ಸಮಿತಿ ರಚನೆಗೆ ಪ್ರಧಾನಿ ಮೋದಿ ಸೂಚನೆ ನವದೆಹಲಿ: ಪರಿಶಿಷ್ಟ ಜಾತಿಯಲ್ಲಿ ಮಾದಿಗರಿಗೆ ಒಳಮೀಸಲು ನೀಡುವ ಬೇಡಿಕೆ ಪರಿಶೀಲಿಸಲು ಸಮಿತಿ ರಚನೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ( ) ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಮೋದಿ ಅವರು ಹೈದರಾಬಾದ್ ದಲಿತ ರಾಲಿಯಲ್ಲಿ ಸಮಿತಿ ರಚನೆ ಭರವಸೆ ನೀಡಿದ್ದರು. ಡ್ರಗ್ಸ್‌ಗಾಗಿ ಒಂದು ತಿಂಗಳ ಮಗು ಮಾರಿದ ದಂಪತಿ ಮುಂಬೈ: ಮಾದಕ ವಸ್ತುಗಳ ( ) ವ್ಯಸನ ಜನರನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಒಂದು ಸಾಕ್ಷಿಯಾಗಿದೆ. ಮಾದಕ ವಸ್ತು ಖರೀದಿಗಾಗಿ ದಂಪತಿಗಳು ತಮ್ಮ ಒಂದು ತಿಂಗಳ ಹೆಣ್ಣು ಮಗು ( ) ಹಾಗೂ ಒಂದು ವರ್ಷದ ಮಗನನ್ನು ಮಾರಿದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆ ಸಂಬಂಧ ದಂಪತಿಗಳು ಹಾಗೂ ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್‌ ಹಾಗೂ ಸಾನಿಯಾ ಖಾನ್‌ ( ) ಮಾದಕ ವಸ್ತುಗಳ ವ್ಯಸನಿಗಳಾಗಿದ್ದು, ದಿನಂಪ್ರತಿ ಡ್ರಗ್ಸ್‌ ಇಲ್ಲದೆ ಇರುವುದಕ್ಕೆ ಆಗದಷ್ಟು ದಾಸರಾಗಿದ್ದಾರೆ. ಇವರು ಒಂದು ದಿನ ಡ್ರಗ್ಸ್‌ ಖರೀದಿಸಲು ಹಣವಿಲ್ಲದ ಕಾರಣ ಒಂದು ತಿಂಗಳ ಶಿಶುವನ್ನು 14,000 ರು. ಹಾಗೂ 1 ವರ್ಷದ ಮಗನನ್ನು 60,000 ರು,ಗೆ ಮಾರಿದ್ದಾರೆ. ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ ಆರಂಭ, ಟಿಕೆಟ್‌ ದರ ಮಾಹಿತಿ ಇಲ್ಲಿದೆ ಈ ಘಟನೆಯನ್ನು ತಿಳಿದ ಶಬ್ಬೀರ್‌ ಸೋದರಿ ರುಬೀನಾ ಆತಂಕಗೊಂಡು ಹತ್ತಿರದ ಡಿ.ಎನ್‌ ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇವರ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಒಂದು ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ. 1 ವರ್ಷದ ಮಗುವಿಗೆ ಹುಡುಕಾಟ ನಡೆಸಿದ್ದಾರೆ. ದಂಪತಿ ಉಷಾ ರಾಥೋಡ್‌ ಎಂಬ ಏಜೆಂಟ್‌, 1 ತಿಂಗಳ ಶಿಶುವನ್ನು ಖರೀದಿ ಮಾಡಿದ್ದ ಶಕೀಲ್‌ ಮಕ್ರಾನಿಯನ್ನು ಬಂಧಿಸಿದ್ದಾರೆ. 1 ವರ್ಷದ ಮಗುವನ್ನು ಖರೀದಿ ಮಾಡಿದವರಿಗೆ ಬಲೆ ಬೀಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ