ಚಾಮರಾಜನಗರದ 7 ಹಳ್ಳಿಗಳಲ್ಲಿ ದೀಪಾವಳಿ ಆಚರಣೆಯೇ ಇಲ್ಲ..! ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ. ರಂಗೂಪುರ ಶಿವಕುಮಾರ್‌ ಗುಂಡ್ಲುಪೇಟೆ(ನ.11):ದೀಪಾವಳಿ ಹಬ್ಬ ದೇಶದೆಲ್ಲೆಡೆ ಸಂಭ್ರಮ,ಸಡಗರಿಂದ ಆಚರಣೆಯಲ್ಲಿ ಸಿದ್ದವಾಗುತ್ತಿದ್ದರೆ, ತಾಲೂಕಿನ ನೇನೇಕಟ್ಟೆ ಸುತ್ತ-ಮುತ್ತಲ 7 ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಮಂಗಳವಾರ ಆಚರಿಸುವುದಿಲ್ಲ. ದೀಪಾವಳಿ ಹಬ್ಬ ಬುಧವಾರ ಬಂದರೆ ಮಾತ್ರ ಎಲ್ಲರಂತೆ ಈ 7 ಗ್ರಾಮಗಳ ಜನರು ಹಬ್ಬ ಮಾಡಲಿದ್ದಾರೆ. ಈ ಸಾಲಿನಲ್ಲಿ ದೀಪಾವಳಿ ಹಬ್ಬ ಮಂಗಳವಾರ ಬಂದಿರುವುದರಿಂದ ಹಬ್ಬದ ಕುರುಹು ಈ ಗ್ರಾಮದಲ್ಲಿ ಕಂಡು ಬಂದಿಲ್ಲ. ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ.ದೇಶದಲ್ಲೆಡೆ ಯಾವ ದಿನವಾದರೂ ದೀಪಾವಳಿ ಹಬ್ಬ ಮಾಡಲಿದ್ದಾರೆ. ಆದರೆ ಈ ೭ ಹಳ್ಳಿಗಳಲ್ಲಿ ಮಾತ್ರ ಬುಧವಾರ ಹೊರೆತು ಪಡಿಸಿ ಹಬ್ಬ ಮಾಡಿದರೆ ಏನಾದರೂ ಅನಾಹುತ ಸಂಭವಿಸಲಿದೆ ಎಂಬ ಹಿರಿಯ ವಾಡಿಕೆಯಂತೆ ಹಬ್ಬ ಮಾಡುವುದಿಲ್ಲ ಎಂದು ನೇನೇಕಟ್ಟೆ ಗ್ರಾಮದ ಮುಖಂಡ ಎನ್.ಎಂ.ಗಂಗಾಧರಪ್ಪ ಹೇಳುತ್ತಾರೆ. ತಿರುಪತಿ ತಿಮ್ಮಪ್ಪನ 2.25 ಲಕ್ಷ ಟಿಕೆಟ್ 20 ನಿಮಿಷದಲ್ಲೇ ಬಿಕರಿ: ದಾಖಲೆ ಬರೆದ ಗೋವಿಂದ ಹಾಗಾಗಿ ಮುಂದಿನ ಬುಧವಾರ ನ.15 ರಂದು ಮೇಲ್ಕಂಡ ಎಲ್ಲಾ ಹಳ್ಳಿಯಲ್ಲೂ ದೇಶದಲ್ಲಿ ನಡೆಯುವಂತೆ ದೀಪಾವಳಿ ಹಬ್ಬದಾಚರಣೆಯ ಜೊತೆಗೆ ಜಾನುವಾರುಗಳಿಗೆ ಪೂಜೆ ನಡೆಸಿ ಮೆರವಣಿಗೆ ನಡೆಸಲಾಗುತ್ತದೆ ಎಂದರು. ಇದೊಂದೆ ಹಬ್ಬವಲ್ಲ ! ದೀಪಾವಳಿ ಹಬ್ಬ ಆಚರಣೆಗೆ ಬುಧವಾರ ಆಗಬೇಕು. ಆದರೆ ಯುಗಾದಿಗೆ ಶುಕ್ರವಾರ ಆಗಬೇಕು, ದೀಪಾವಳಿ ಹಾಗೂ ಯುಗಾದಿ ಹಬ್ಬದ ವಾರದ ದಿನ ಬಿಟ್ಟು ಬೇರೆ ದಿನಗಳಲ್ಲಿ ಎರಡು ಹಬ್ಬದ ಆಚರಣೆ ಕೂಡ ಇಲ್ಲವಂತೆ ಏಳೂರಲ್ಲಿ !.