ಶನಿವಾರ ಈ ಕೆಲಸ ಮಾಡಿದ್ರೆ ಶನಿದೇವನ ಕೋಪಕ್ಕೆ ಗುರಿಯಾಗ್ತೀರಿ ಶನಿವಾರವನ್ನು ಶನಿ ದೇವರಿಗೆ ವಿಶೇಷವಾಗಿ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಆದರೆ ಶನಿವಾರ ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯಲು ಶನಿವಾರ ಯಾವ ಕೆಲಸ ಮಾಡಬಾರದು ಅನ್ನೋದನ್ನು ತಿಳಿಯೋಣ, ಶನಿವಾರವನ್ನು ಶನಿ ದೇವರಿಗೆ ವಿಶೇಷವಾಗಿ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ. ಆದರೆ ಶನಿವಾರ ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯಲು ಶನಿವಾರ ಯಾವ ಕೆಲಸ ಮಾಡಬಾರದು ಅನ್ನೋದನ್ನು ತಿಳಿಯೋಣ, ಉಪ್ಪು ()ಶನಿವಾರ ಉಪ್ಪು ಖರೀದಿಸುವುದು ಅಶುಭ. ಈ ದಿನ ಅಪ್ಪಿ ತಪ್ಪಿಯೂ ಉಪ್ಪು ಖರೀದಿಸಬೇಡಿ. ಇದನ್ನು ಮಾಡುವುದರಿಂದ, ನೀವು ಸಾಲಗಾರರಾಗೋ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಆ ದಿನ ಇನ್ನೊಬ್ಬರ ಮನೆಯಿಂದ ಉಪ್ಪು ತೆಗೆದುಕೊಳ್ಳೋದು ಸಹ ಒಳ್ಳೆಯದಲ್ಲ. ಕಬ್ಬಿಣ ()ಶನಿವಾರ ತಪ್ಪಿಯೂ ಕಬ್ಬಿಣವನ್ನು ಖರೀದಿಸಬೇಡಿ. ಅದು ಕಬ್ಬಿಣದ ಪಾತ್ರೆ ಆಗಿರಲಿ, ರಾಡ್ ಆಗಿರಲು, ಕಬ್ಬಿಣದಿಂದ ಮಾಡಿದ ಯಾವುದೇ ವಸ್ತು ಆಗಿರಲಿ, ಈ ದಿನ ಕಬ್ಬಿಣವನ್ನು ಖರೀದಿಸುವುದು ಅಶುಭ. ಹೀಗೆ ಮಾಡುವುದರಿಂದ, ಶನಿ ದೇವರು ಕೋಪಗೊಳ್ಳುತ್ತಾನೆ. ಶೂ ()ಶನಿವಾರಶೂಗಳನ್ನು ಖರೀದಿಸುವುದು ಸರಿಯಲ್ಲ. ನೀವು ಒಂದು ವೇಳೆ ಶನಿವಾರ ಶೂ, ಚಪ್ಪಲ್ ಏನಾದರು ಖರೀದಿಸಿದರೆ, ಈ ಕಾರಣದಿಂದಾಗಿ, ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ನೀವು ಮಾಡಲು ಅಂದುಕೊಂಡಿರುವ ಕೆಲಸ ಅರ್ಧದಲ್ಲಿ ಸ್ಥಗಿತವಾಗಬಹುದು. ಬಟ್ಟೆಗಳು ()ಶನಿವಾರ ಬಟ್ಟೆ ಖರೀದಿಸುವುದು ಒಳ್ಳೆಯದಲ್ಲ. ಈ ದಿನ ನೀವು ಬಟ್ಟೆಗಳನ್ನು ಖರೀದಿಸಿದರೆ ಅಥವಾ ಶಾಪಿಂಗ್ ಮಾಡಿದರೆ, ಇದರಿಂದ ನಿಮ್ಮ ಜೀವನದಲ್ಲಿ ಉತ್ತಮ ಫಲ ಸಿಗೋದಿಲ್ವಂತೆ. ಹಾಗಾಗಿ ಇನ್ನು ಮುಂದೆ ಶನಿವಾರ ಬಟ್ಟೆ ಖರೀದಿ ಮಾಡಬೇಡಿ. ಈ ವಸ್ತುಗಳನ್ನು ದಾನ ಮಾಡಬೇಡಿಶನಿ ದೇವರ ಅನುಗ್ರಹವನ್ನು ನಿಮ್ಮ ಮೇಲೆ ಇರಿಸಿಕೊಳ್ಳಲು ಬಯಸೋದಾದ್ರೆ ನೀವು ಶನಿವಾರ ಉಪ್ಪು, ಪೊರಕೆ, ಕಪ್ಪು ಬಟ್ಟೆ ಅಥವಾ ಕಂಬಳಿಗಳನ್ನು ದಾನ ಮಾಡಬಹುದು. ಆದರೆ, ಇತರ ಬಣ್ಣಗಳ ಬಟ್ಟೆಗಳನ್ನು ದಾನ ಮಾಡಬೇಡಿ. ಈ ವಿಷಯಗಳಿಂದ ದೂರವಿರಿಶನಿ ದೇವರ ಅನುಗ್ರಹವನ್ನು ಪಡೆಯಲು, ನೀವು ಶನಿವಾರ ಯಾರೊಂದಿಗೂ ವಿವಾದಕ್ಕೆ ಇಳಿಯುವುದನ್ನು ತಪ್ಪಿಸಬೇಕು. ಇದರೊಂದಿಗೆ, ನೀವು ಈ ದಿನ ಎಳ್ಳು, ಕಬ್ಬಿಣ ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಇದರಿಂದ ಎಲ್ಲವೂ ಶುಭವಾಗುತ್ತೆ. ಏನು ತಿನ್ನಬಾರದು ?ಶನಿವಾರದಂದುಆಹಾರವನ್ನು ಬುದ್ಧಿವಂತಿಕೆಯಿಂದ ತಿನ್ನಬೇಕು. ಈ ದಿನ ಕೆಂಪು ಬಣ್ಣದ ವಸ್ತುಗಳಿಂದ ದೂರವಿರಿ. ಇದಲ್ಲದೆ, ಬೇಳೆಕಾಳುಗಳ ಸೇವನೆಯನ್ನು ಸಹ ತಪ್ಪಿಸಬೇಕು. ಇದರಿಂದ ನೀವು ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತೆ.