: ನಿಮ್ಮ ಸಣ್ಣ ತಪ್ಪು ಭವಿಷ್ಯಕ್ಕೆ ಕಂಟಕ ಆಗಲಿದೆ; ಎಚ್ಚರಿಕೆ ಅಗತ್ಯ..! ಟ್ಯಾರೋ ಕಾರ್ಡ್ ಎಲ್ಲ ರಾಶಿಗಳ ಈ ವಾರದ ಭವಿಷ್ಯವನ್ನು ಸೂಚಿಸಿದೆ. ಅಂತೆಯೇ ಈ ವಾರ 21 ಆಗಸ್ಟ್‌ನಿಂದ 27ನೇ ಆಗಸ್ಟ್ 2023ರವರೆಗೆ ನೆಮ್ಮದಿಯ ಬದುಕಿಗಾಗಿ ಏನು ಮಾಡಬಾರದು, ಏನು ಮಾಡಬೇಕು ಎಂಬುದನ್ನೂ ತಿಳಿಸಿದೆ. ಈ ಕುರಿತು ಇಲ್ಲಿದೆ ಮಾಹಿತಿ. ಮೇಷ ರಾಶಿ () : ನೀವು ವಿಭಿನ್ನ ದೃಷ್ಟಿಕೋನ ಅಳವಡಿಕೊಳ್ಳಬೇಕು. ಇತರರ ಮಾತುಗಳು ನಿಮ್ಮ ಆಲೋಚನೆಗಳಿಗೆ ಹೊಸ ದಿಕ್ಕನ್ನು ನೀಡುತ್ತವೆ. ಅದು ಕೆಲಸದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಕಷ್ಟಕರವಾದ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ವೃವೃಷಭ ರಾಶಿ (): ಪ್ರತಿಯೊಂದು ಸಂದರ್ಭದಲ್ಲೂ ತಾಳ್ಮೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ನಿಮ್ಮಲ್ಲಿ ಮಹತ್ತರವಾದ ಬದಲಾವಣೆ ಕಂಡುಬರುತ್ತದೆ. ನೀವು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ನಿಮ್ಮ ಆಧ್ಯಾತ್ಮಿಕ ಪ್ರಗತಿ ಹೆಚ್ಚಾಗುತ್ತದೆ. ನಿಮ್ಮ ಆಂತರಿಕ ಆತ್ಮವಿಶ್ವಾಸ ಹೆಚ್ಚುತ್ತದೆ. ಮಿಥುನ ರಾಶಿ (): ನಿಮ್ಮ ಪ್ರಯತ್ನಗಳಿಗೆ ಅನುಗುಣವಾಗಿ ಫಲಿತಾಂಶಗಳು ಬರಲಿವೆ, ಇದರಿಂದ ನಿಮಗೆ ನಿರ್ಣಯದ ಮಹತ್ವ ಗೊತ್ತಾಗಲಿದೆ. ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಿ, ಪರಸ್ಪರ ಸಾಮರಸ್ಯ ಕಾಪಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಕ್ರಮೇಣ ಮಾಯವಾಗುತ್ತವೆ. ಯಾವುದೇ ತಪ್ಪಾಗಿದ್ದರೆ ಸರಿಪಡಿಸಲು ಪ್ರಯತ್ನಿಸಲಾಗುವುದು. ಕಟಕ ರಾಶಿ (): ನೀವು ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ಗಳಿಸುವಿರಿ. ಇತರರೊಂದಿಗೆ ನಿಮ್ಮ ಪ್ರಗತಿಯನ್ನು ಎಂದಿಗೂ ಹೋಲಿಸಬೇಡಿ. ನೀವು ತೆಗೆದುಕೊಳ್ಳುವ ನಿರ್ಧಾರದಿಂದಾಗಿ ಇತರರಿಗೆ ಆಶ್ಚರ್ಯವಾಗಬಹುದು. ಹೊಟ್ಟೆ ನೋವಿನಿಂದ ತೊಂದರೆ ಉಂಟಾಗುತ್ತದೆ. ಮಗನ ಸಾಧನೆಗೆ ಮೂಕಳಾದ ತಾಯಿ, ವೈರಲ್ ಆಯ್ತು ಫೋಟೋ, ಯಾರು ಈ ಪ್ರಜ್ಞಾನಂದ..? ಸಿಂಹ ರಾಶಿ () : ನಿಮ್ಮ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀವು ಶೀಘ್ರದಲ್ಲೇ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನೀವುಎಲ್ಲಾ ರೀತಿಯ ಅವಕಾಶಗಳಿಗೆ ಸಿದ್ಧರಾಗಿರಿ. ಜೀವನದಲ್ಲಿ ಸಕಾರಾತ್ಮಕ ಮತ್ತು ನಿರೀಕ್ಷಿತ ಸಂಬಂಧವು ಇದ್ದಕ್ಕಿದ್ದಂತೆ ಪ್ರಾರಂಭವಾಗಬಹುದು. ಮಲಬದ್ಧತೆಯಿಂದ ಬಳಲುವ ಸಾಧ್ಯತೆ ಇದೆ. ಕನ್ಯಾ ರಾಶಿ (): ಅನಿಶ್ಚಿತ ವೆಚ್ಚಗಳು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದು ಹಾನಿಯನ್ನುಂಟುಮಾಡುತ್ತದೆ. ಹೊಸ ವ್ಯಕ್ತಿಯೊಂದಿಗಿನ ವ್ಯಾಪಾರ ಆರಂಭಿಸುವ ಮೊದಲು ಒಮ್ಮೆ ಯೋಚನೆ ಮಾಡಿ. ಊತದಿಂದಾಗಿ ಪಾದಗಳಲ್ಲಿ ತೊಂದರೆ ಇರುತ್ತದೆ. ತುಲಾ ರಾಶಿ (): ನಿಮ್ಮನ್ನು ಖಿನ್ನತೆಗೆ ಒಳಪಡಿಸುತ್ತಿದ್ದ ವಿಷಯಗಳು ಇದ್ದಕ್ಕಿದ್ದಂತೆ ಬದಲಾಗುತ್ತವೆ. ಸ್ನೇಹಿತರ ಭೇಟಿಯಿಂದ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಪಾರ್ಟಿ ಅಥವಾ ಪಿಕ್ನಿಕ್ ಆಯೋಜಿಸುವಿರಿ. ಜನರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ವೃಶ್ಚಿಕ ರಾಶಿ () : ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಯಶಸ್ವಿಯಾಗುತ್ತವೆ. ನೀವು ಸಣ್ಣ ತಪ್ಪನ್ನು ಮಾಡಬಹುದು, ಅದು ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಈಗಿನಿಂದಲೇ ಜಾಗರೂಕರಾಗಿರಬೇಕು. ಧನು ರಾಶಿ (): ನಿಮ್ಮ ಪ್ರಯತ್ನಗಳ ಪ್ರಕಾರ ಫಲಿತಾಂಶಗಳು ಬರದಿರಬಹುದು, ಆದರೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ. ನೀವು ಚಿಂತಿಸುತ್ತಿದ್ದ ವಿಷಯಗಳನ್ನು ಜಯಿಸಲು ಪರಿಚಿತ ವ್ಯಕ್ತಿಯ ಸಹಾಯವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಕರ ರಾಶಿ () : ಹಳೆಯ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಲು ಪ್ರಯತ್ನಿಸಿ. ಇದರಿಂದ ನೀವು ಧನಾತ್ಮಕ ಭಾವನೆ ಹೊಂದಬಹುದು. ಅತಿಯಾಗಿ ಯೋಚಿಸುವ ಮೂಲಕ ನೀವು ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದ್ದರಿಂದ ಹೆಚ್ಚು ಚಿಂತಿಸಬೇಡಿ. ಕುಂಭ ರಾಶಿ (): ಯೋಜನಾಬದ್ಧತೆ ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇರುತ್ತದೆ ಇಲ್ಲವಾದಲ್ಲಿ ಒತ್ತಡ ಉಂಟಾಗುತ್ತದೆ. ನಿಮ್ಮ ಕೆಲಸವನ್ನು ನೀವು ಸಂಪೂರ್ಣ ಸಮರ್ಪಣೆಯೊಂದಿಗೆ ಮಾಡಿದರೂ ಸಹ, ಕೆಲವು ಜನರಿಂದ ಅಸಮಾಧಾನ ಎದುರಿಸಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು. : ಪ್ರೀತಿಯ ಹೆಂಡತಿಗಾಗಿ ಮನೆಯವರ ನಿರ್ಲಕ್ಷ್ಯ; ಈ ರಾಶಿಯವರ ಕುಟುಂಬದಲ್ಲಿ ಬಿರುಕು..! ಮೀನ ರಾಶಿ (): ನೀವು ಜನರಿಗೆ ಮಾಡಿದ ಕಠಿಣ ವರ್ತನೆಗೆ ನೀವು ವಿಷಾದಿಸಬಹುದು, ನಿಮ್ಮ ಸ್ವಭಾವವನ್ನು ಬದಲಾಯಿಸಿ. ನಿಮ್ಮಲ್ಲಿ ಮೂಡುವ ಕೋಪವನ್ನು ಬೇರೆಯವರ ಮೇಲೆ ವ್ಯಕ್ತಪಡಿಸಲು ನೀವು ಪ್ರಯತ್ನಿಸುತ್ತೀರಿ. ಇದು ನೀವು ಮತ್ತು ಆ ವ್ಯಕ್ತಿ ಮಾನಸಿಕ ತೊಂದರೆಗೆ ಒಳಗಾಗುವಂತೆ ಮಾಡುತ್ತದೆ.