ಈ ತಿಂಗಳು 3 ರಾಶಿಯವರಿಗೆ ಹಣದ ಹೊಳೆ; ಶುಕ್ರನ ಆಶೀರ್ವಾದದಿಂದ ಬಾಳೇ ಬಂಗಾರ..! ಆಗಸ್ಟ್‌ ತಿಂಗಳಲ್ಲಿ ಶುಕ್ರನು ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷವನ್ನು ತರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ವೃತ್ತಿಜೀವನದಲ್ಲಿ ವಿತ್ತೀಯ ಲಾಭಗಳೊಂದಿಗೆ ಪ್ರಗತಿಯನ್ನು ಪಡೆಯಬಹುದು. ಈ ಕುರಿತು ಇಲ್ಲಿದೆ ಮಾಹಿತಿ. ಆಗಸ್ಟ್‌ ತಿಂಗಳಲ್ಲಿ ಶುಕ್ರನು ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷವನ್ನು ತರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಚಕ್ರ ಚಿಹ್ನೆ ( ) ಗಳ ಜನರು ತಮ್ಮ ವೃತ್ತಿಜೀವನ () ದಲ್ಲಿ ವಿತ್ತೀಯ ಲಾಭ ( ) ಗಳೊಂದಿಗೆ ಪ್ರಗತಿಯನ್ನು ಪಡೆಯಬಹುದು. ಈ ಕುರಿತು ಇಲ್ಲಿದೆ ಮಾಹಿತಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾದಾಗ, ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತೆಯೇ ಗ್ರಹಗಳ ಚಲನೆ ( ) , ಸಾಗಾಣೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ನೇರವಾಗಿ ಸಂಬಂಧಿಸಿದೆ. ಹಲವು ಪ್ರಮುಖ ಗ್ರಹಗಳು ಆಗಸ್ಟ್‌ನಲ್ಲಿ ಸಾಗಲಿವೆ. ಶುಕ್ರವು ಪ್ರಸ್ತುತ ಸಿಂಹರಾಶಿ () ಯಲ್ಲಿದೆ, ಮತ್ತು 8ನೇ ಆಗಸ್ಟ್‌ 2023ರಂದು ಕರ್ಕರಾಶಿ () ಯಲ್ಲಿ ನೆಲೆಸುತ್ತದೆ. ಹೀಗಾಗಿ ಇದರ ಪರಿಣಾಮವು ಮೂರು ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಲಿದೆ. ಶುಕ್ರನ ಸಂಚಾರದಿದ ಯಾವ ರಾಶಿಗೆ ಲಾಭವಾಗಲಿದೆ ಎಂದು ತಿಳಿಯೋಣ. ವೃಷಭ ರಾಶಿ () ಈ ರಾಶಿಯ ಆಡಳಿತ ಗ್ರಹ ಶುಕ್ರ, ಆದ್ದರಿಂದ ನೀವು ಶುಕ್ರನಿಂದ ಉತ್ತಮ ಫಲಿತಾಂಶ () ಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ, ದುಬಾರಿ ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗೇಯೇ ನೀವು ವಾಹನ () ಅಥವಾ ಚಿನ್ನ ಬೆಳ್ಳಿ ಆಭರಣವನ್ನು ಖರೀದಿಸಬಹುದು. ಇದರೊಂದಿಗೆ ಜನರು ಆರ್ಥಿಕ ಲಾಭ ( ) ವನ್ನು ಪಡೆಯುತ್ತಾರೆ ಮತ್ತು ಅವರ ಆರ್ಥಿಕ ಸ್ಥಿತಿ ( ) ಬಲಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಬರುತ್ತಾರೆ. ನೀವು ಸಂತೋಷ () ವಾಗಿರುತ್ತೀರಿ. ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು? ಸಿಂಹ ರಾಶಿ () ಈ ಅವಧಿಯಲ್ಲಿ ಬುಧನು ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಇದರಿಂದ ಈ ರಾಶಿಯವರು ಸ್ಥಾನ ಮತ್ತು ಗೌರವ () ದಲ್ಲಿ ಏರಿಕೆ ಕಾಣುತ್ತಾರೆ. ಇದರೊಂದಿಗೆ ಅವರು ಹೆಸರು ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ನಿಮ್ಮ ಸ್ಥಗಿತ () ಗೊಂಡ ಹಣ ಮರಳಿ ಬರುತ್ತದೆ. ನಿಮ್ಮ ವೃತ್ತಿ ಯೋಜನೆಗಳು ಯಶಸ್ವಿ () ಯಾಗುತ್ತವೆ ಮತ್ತು ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ಅವಧಿಯಲ್ಲಿ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ಉಳಿತಾಯವು ಹೆಚ್ಚಾಗುತ್ತದೆ. ಇದರೊಂದಿಗೆ ನಿಮ್ಮ ವೈವಾಹಿಕ ಜೀವನ ( ) ವು ಸಂತೋಷದಿಂದ ತುಂಬಿರುತ್ತದೆ. ಕಟಕ ರಾಶಿ ( ) ಶುಕ್ರನಿಂದ ನಿಮಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ, ಜನರ ಆತ್ಮ ವಿಶ್ವಾಸ ( ) ವು ಹೆಚ್ಚಾಗುತ್ತದೆ ಮತ್ತು ಅವರ ವ್ಯಕ್ತಿತ್ವವೂ ಸಾಕಷ್ಟು ಸುಧಾರಿಸುತ್ತದೆ. ಹೂಡಿಕೆ ಮಾಡಿದ ಹಣದ ಜೊತೆಗೆ ವ್ಯಾಪಾರದಲ್ಲಿ ಮಾಡಿದ ಪಾಲುದಾರಿಕೆ () ಯಿಂದ ಲಾಭ ಇರುತ್ತದೆ. ನೀವು ಯಾವುದೇ ಯೋಜನೆಯನ್ನು ಮಾಡಿದರೂ ಅದು ಯಶಸ್ವಿಯಾಗುತ್ತದೆ. ಮತ್ತು ಉತ್ತಮ ಸಂಬಂಧಗಳು ಬರುತ್ತದೆ. ಸಾವಿರ ವರ್ಷಗಳ ಬಳಿಕ ಖಗೋಳದಲ್ಲಿ ವಿಸ್ಮಯ; ಆಗಸ್ಟ್'ನಲ್ಲೇ ನಾಲ್ಕು ಕೌತುಕಗಳು..! ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.