ನಾಗರ ಪಂಚಮಿಯಂದು ರಾಶಿಗಳ ಅನುಸಾರ ಈ ಕೆಲಸ ಮಾಡಿ! ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರಾವಣ ತಿಂಗಳ ಕೃಷ್ಣ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸುವ ಸಂಪ್ರದಾಯವಿದೆ. ಈ ದಿನ, ಎಲ್ಲಾ ಸರ್ಪ ದೇವತೆಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಮತ್ತು ನಾಗನಿಗೆ ಹಾಲಿನ ಅಭಿಷೇಕ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 21 ರ ಸೋಮವಾರ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರಾವಣ ತಿಂಗಳ ಕೃಷ್ಣ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸುವ ಸಂಪ್ರದಾಯವಿದೆ. ಈ ದಿನ, ಎಲ್ಲಾ ಸರ್ಪ ದೇವತೆಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಮತ್ತು ನಾಗನಿಗೆ ಹಾಲಿನ ಅಭಿಷೇಕ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 21 ರ ಸೋಮವಾರ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಶ್ರಾವಣ ತಿಂಗಳನ್ನು ( ) ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಇಡೀ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಅದೇ ಸಮಯದಲ್ಲಿ, ನಾಗರ ಪಂಚಮಿ ಕೂಡ ಈ ತಿಂಗಳ ಪ್ರಮುಖ ಹಬ್ಬವಾಗಿದೆ. ನಾಗರ ಪಂಚಮಿಯ ದಿನದಂದು, ಶಿವ ಮತ್ತು ನಾಗ ದೇವತೆಯನ್ನು ಪೂಜೆ ಮಾಡಲಾಗುತ್ತೆ. ಈ ಹಬ್ಬ ಮಾಡೋದರಿಂದ ಎಲ್ಲಾ ಪಾಪಗಳನ್ನು ತೊಡೆದುಹಾಕಬಹುದು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಇದರೊಂದಿಗೆ, ನೀವು ರಾಹು, ಕೇತು ಮತ್ತು ಕಾಲಸರ್ಪ ದೋಷದ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಬಹುದು. ನಾಗರ ಪಂಚಮಿ ( ) ಹಬ್ಬದಂದು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶುಭವಾಗುತ್ತೆ ಎನ್ನಲಾಗುತ್ತದೆ. ರಾಶಿಚಕ್ರದ ಪ್ರಕಾರ, ಶುಭ ಫಲಿತಾಂಶಗಳನ್ನು ಪಡೆಯಲು ನಾಗ ಪಂಚಮಿಯ ಪೂಜೆಯಲ್ಲಿ ವ್ಯಕ್ತಿಯು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿ:ರಾಹು ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ತೊಡೆದುಹಾಕಲು ಮೇಷ ರಾಶಿಯ ಜನರು ರುದ್ರಾಷ್ಟಾಧೀಶವನ್ನು ಪಠಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ವೃಷಭ ರಾಶಿ:ವೃಷಭ ರಾಶಿಯವರು ನಾಗರ ಪಂಚಮಿಯ ದಿನದಂದು ಹರಿಯುವ ನೀರಿನಲ್ಲಿ ತಾಮ್ರದ ತುಂಡನ್ನು ಎಸೆಯಬೇಕು ಅಥವಾ ಮುಳುಗಿಸಬೇಕು. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದು. ಮಿಥುನ ರಾಶಿ:ಮಿಥುನ ರಾಶಿಯವರು ನಾಗರ ಪಂಚಮಿಯ ದಿನದಂದು ಅಗತ್ಯವಿರುವವರಿಗೆ ಹೆಸರು ಬೇಳೆಯನ್ನು ದಾನ ಮಾಡಬೇಕು. ಹೀಗೆ ಮಾಡೋದರಿಂದ, ಜಾತಕದಲ್ಲಿರುವ ರಾಹು ಶಾಂತವಾಗುತ್ತದೆ. ಕರ್ಕಾಟಕ ರಾಶಿ:ನಾಗರ ಪಂಚಮಿಯ ದಿನದಂದು, ಕರ್ಕಾಟಕ ರಾಶಿಯವರು ಹರಿಯುವ ನೀರಿನಲ್ಲಿ ತೆಂಗಿನಕಾಯಿಯನ್ನು () ಬಿಡಬೇಕು ಮತ್ತು ಶಿವನ ದೇವಸ್ಥಾನಕ್ಕೆ ಹೋಗಿ ಸರ್ಪಾಕಾರದ ಪ್ರತಿಮೆಯನ್ನು ಅರ್ಪಿಸಬೇಕು. ಸಿಂಹ ರಾಶಿ:ಸಿಂಹ ರಾಶಿಯವರು ನಾಗರ ಪಂಚಮಿಯ ದಿನದಂದು ಅಗತ್ಯವಿರುವವರಿಗೆ ಒಣ ತೆಂಗಿನಕಾಯಿಯನ್ನು ದಾನ ಮಾಡಬೇಕು. ಇದರೊಂದಿಗೆ, ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕನ್ಯಾ ರಾಶಿ:ಕನ್ಯಾ ರಾಶಿಯವರು ನಾಗರ ಪಂಚಮಿಯ ದಿನದಂದು ಅನಾರೋಗ್ಯದಿಂದ ( ) ಬಳಲುತ್ತಿರುವ ವ್ಯಕ್ತಿಗೆ ಸಹಾಯ ಮಾಡಬೇಕು. ಇದು ಆರೋಗ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ತುಲಾ ರಾಶಿ:ತುಲಾ ರಾಶಿಯವರು ನಾಗರ ಪಂಚಮಿಯ ದಿನದಂದು ಮನೆಯಲ್ಲಿ ಶಿವ ಚಾಲೀಸಾವನ್ನು ಪಠಿಸಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರು ನಾಗರ ಪಂಚಮಿಯ ದಿನದಂದು ಗಣೇಶನನ್ನು ಪೂಜಿಸಬೇಕು ಮತ್ತು ಹಳದಿ ಹೂವುಗಳು ಮತ್ತು ಲಡ್ಡುಗಳನ್ನು ಅರ್ಪಿಸಬೇಕು. ಇದರಿಂದ ಎಲ್ಲವೂ ಶುಭವಾಗುತ್ತೆ. ಧನು ರಾಶಿ:ಧನು ರಾಶಿಯವರು ನಾಗರ ಪಂಚಮಿಯ ದಿನದಂದು ಹಿಟ್ಟು ಮತ್ತು ಸಕ್ಕರೆಯ ಮಿಶ್ರಣವನ್ನು ತಯಾರಿಸಿ ಶಿವನಿಗೆ ಅರ್ಪಿಸಿ ನಂತರ ಅದನ್ನು ಬಡವರಿಗೆ ವಿತರಿಸಬೇಕು. ಮಕರ ರಾಶಿ:ಮಕರ ರಾಶಿಯವರು ನಾಗರ ಪಂಚಮಿಯ ದಿನದಂದು ಭಂಡಾರವನ್ನು ಆಯೋಜಿಸಬೇಕು ಮತ್ತು ಶಿವಲಿಂಗಕ್ಕೆ ಕಪ್ಪು ಎಳ್ಳಿನ ( ) ಬೀಜಗಳನ್ನು ಅರ್ಪಿಸಬೇಕು. ಕುಂಭ ರಾಶಿ:ಕುಂಭ ರಾಶಿಯವರು ನಾಗರಚಮಿಯ ದಿನದಂದು ಹರಿಯುವ ನೀರಿನಲ್ಲಿ ಕಲ್ಲಿದ್ದಲನ್ನು ಹರಿಯಬಬಿಡಬೇಕು. 'ಓಂ ನಾಗದೇವತಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು. ಮೀನ ರಾಶಿ:ಮೀನ ರಾಶಿಯವರು ನಾಗರ ಪಂಚಮಿಯ ದಿನದಂದು ಓಂ ನಮಃ ಶಿವಾಯ ( ) ಮಂತ್ರವನ್ನು ಪಠಿಸಬೇಕು ಮತ್ತು ರುದ್ರಾಭಿಷೇಕ ಮಾಡಬೇಕು.