ಕಂಗನಾ ಮನೆಯಲ್ಲಿ ಮುಂಗಾರು ರುದ್ರಾಭಿಷೇಕ: ವಿಡಿಯೋ ನೋಡಿ ಎಂದ ಫ್ಯಾನ್ಸ್​ ನಟಿ ಕಂಗನಾ ಅವರು ತಮ್ಮ ಮನೆಯಲ್ಲಿ ರುದ್ರಾಭಿಷೇಕವನ್ನು ಮಾಡಿಸಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ನಟಿ ಈಕೆ. ನೇರ ದಿಟ್ಟ ಮಾತಿನಿಂದ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗ್ತಿರೋ ನಟಿ ಕಂಗನಾ ಅವರ ನಟನಾ ಕೌಶಲಕ್ಕೆ ಅವರೇ ಸಾಟಿ. ಇದೀಗ ಅವರ ಬಹು ನಿರೀಕ್ಷಿತ ಹಾಗೆಯೇ ಬಹು ಚರ್ಚಿತ ಎಮರ್ಜೆನ್ಸಿ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಎರಡು ವರ್ಷಗಳಿಂದ ಬಹಳ ಚರ್ಚೆಗೆ ಗ್ರಾಸವಾಗಿರೋ ಈ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಕಂಗನಾ ರಣಾವತ್ ( ) ಅವರ ಈ ಚಿತ್ರವೂ ಸಕತ್​ ಸುದ್ದಿ ಮಾಡುತ್ತಲೇ ಇದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( ) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ ನಟಿಸಿರುವ ಟ್ರೇಲರ್​ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರದ ನಿರೀಕ್ಷೆಯ ನಡುವೆಯೇ ಕಂಗನಾ ರಣಾವತ್​ ಮುಂಗಾರು ಋತುವಿನ ರುದ್ರಾಭಿಷೇಕವನ್ನು ಮನೆಯಲ್ಲಿ ಮಾಡಿಸಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ ನಟಿ, ಪ್ರತಿ ಸಣ್ಣ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈಗ ಅವರು ಶಿವನ ಅಭಿಷೇಕವನ್ನು ಮಾಡಿದ್ದು, ಅದರ ವಿಡಿಯೋವನ್ನು ನಲ್ಲಿ ಹಂಚಿಕೊಂಡಿದ್ದಾರೆ. ಶಿವನ ಮಹಾನ್ ಭಕ್ತೆಯಾಗಿರುವ ಕಂಗನಾ ಅವರ ರುದ್ರಾಭಿಷೇಕದ ವಿಡಿಯೋ ಸಕತ್​ ವೈರಲ್​ ಆಗಿದೆ. ಈ ವೈರಲ್​ ವಿಡಿಯೋದಲ್ಲಿ ಕಂಗನಾ ತಂದೆ ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಹಲವು ಪಂಡಿತರು ಕಂಗನಾ ಅವರಿಗೆ ಮಂತ್ರ ವಾಚಿಸುವುದನ್ನು ನೋಡಬಹುದು. ಮುಂಗಾರು ಋತುವಿನಲ್ಲಿ ಮನೆಯಲ್ಲಿ ರುದ್ರ ಅಭಿಷೇಕ ಎಂದು ಕಂಗನಾ ಬರೆದುಕೊಂಡಿದ್ದು, ಮಹದೇವ್ ನಮ್ಮ ಮನೆಗೆ ಬಂದಿದ್ದಾನೆ, ಹರ ಹರ ಮಹಾದೇವ್ ಎಂದಿದ್ದಾರೆ. ಡೇಟ್​ ಫಿಕ್ಸ್​! ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎಂದ ಕಂಗನಾ ಇದಕ್ಕೆ ನೆಟ್ಟಿಗರು ಸಕತ್​ ಫಿದಾ ಆಗಿಬಿಟ್ಟಿದ್ದಾರೆ. ಕಂಗನಾ ಏನೇ ಮಾತನಾಡಿದರೂ ಅದನ್ನು ಟ್ರೋಲ್​ ಮಾಡುವವರೇ ಹೆಚ್ಚು. ಆದರೆ ಈ ವಿಡಿಯೋಗೆ ಕೆಲವೇ ಕೆಲವು ಟೀಕೆಗಳು ಕೇಳಿಬಂದಿದ್ದು, ಕಂಗನಾರ ಅಭಿಮಾನಿಗಳಂತೂ ಲವ್​ ಯು ಎಂದು ಕಮೆಂಟ್​ ಸೆಕ್ಷನ್​ ತುಂಬಿಸಿದ್ದಾರೆ. ಹಾರ್ಟ್​ ಎಮೋಜಿಗಳಿಂದ ಇನ್​ಸ್ಟಾಗ್ರಾಮ್​ ತುಂಬಿ ಹೋಗಿದೆ. ಇದೇ ಕಾರಣಕ್ಕೆ ನಾವು ನಿಮ್ಮನ್ನು ಪ್ರೀತಿಸುವುದು ಎಂದು ಹಲವರು ಕಮೆಂಟ್​ ಹಾಕಿದ್ದಾರೆ. ಇನ್ನು ಕಂಗನಾ ಅವರ ಕೆಲಸದ ಬಗ್ಗೆ ಹೇಳುವುದಾದರೆ 'ಎಮರ್ಜೆನ್ಸಿ' () ಚಿತ್ರವನ್ನು ಹೊರತುಪಡಿಸಿದರೆ, ನಟಿಯ ಬಳಿ ತೇಜಸ್ ಚಿತ್ರವೂ ಇದೆ. ಇದು ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ. ಅದೇ ಸಮಯದಲ್ಲಿ ಅವರು 'ಚಂದ್ರಮುಖಿ 2' ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಕಂಗನಾ ಕೊನೆಯ ಬಾರಿಗೆ 2022 ರಲ್ಲಿ ಬಿಡುಗಡೆಯಾದ 'ಧಕಡ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಎಮರ್ಜೆನ್ಸಿ ಚಿತ್ರವು ಇದೇ ವರ್ಷದ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಟೀಸರ್ ಅನ್ನು ಟ್ವೀಟರ್​ನಲ್ಲಿ () ಈಚೆಗೆ ಕಂಗನಾ ಹಂಚಿಕೊಂಡಿದ್ದರು. ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ 48 ವರ್ಷಗಳ ನಂತರ ಅದೇ ದಿನದಂದು ಈ ಚಿತ್ರ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇದೊಂದು ನಿರ್ಣಾಯಕ ಕಥೆಯಾಗಿದ್ದು, ಸಿನಿಮಾ ಆರಂಭಿಸಿದ್ದಕ್ಕಾಗಿ ಪ್ರತಿಭಾವಂತ ನಟರಾದ ದಿವಂಗತ ಸತೀಶ್ ಜಿ, ಅನುಪಮ್ ಜಿ, ಶ್ರೇಯಸ್, ಮಹಿಮಾ ಮತ್ತು ಮಿಲಿಂದ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ಇತಿಹಾಸದಿಂದ ಈ ಅಸಾಧಾರಣ ಸಂಚಿಕೆಯನ್ನು ದೊಡ್ಡ ಪರದೆಯ ಮೇಲೆ ತರಲು ಉತ್ಸುಕಳಾಗಿದ್ದೇನೆ ಜೈ ಹಿಂದ್ ಎಂದು ಕಂಗನಾ ಬರೆದುಕೊಂಡಿದ್ದರು. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ (@)