: 'ಈ ಕನಸುಗಳು' ಬಿದ್ದರೆ ನೀವು ಸಾಯೋದು ಗ್ಯಾರಂಟಿ..! ಸ್ವಪ್ನಶಾಸ್ತ್ರದ ಪ್ರಕಾರ ಕೆಲವು ಕನಸುಗಳು ಸಾವಿನ ಸೂಚನೆಗಳನ್ನು ತಿಳಿಸುತ್ತವೆ. ಅಂತಹ ಕನಸು ಕಂಡ ವ್ಯಕ್ತಿ ಶೀಘ್ರದಲ್ಲೇ ಮರಣ () ಹೊಂದುತ್ತಾನೆ ಎಂದು ಹೇಳಲಾಗಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ. ಸ್ವಪ್ನಶಾಸ್ತ್ರದ ಪ್ರಕಾರ ಕೆಲವು ಕನಸುಗಳು ಸಾವಿನ ಸೂಚನೆಗಳನ್ನು ತಿಳಿಸುತ್ತವೆ. ಅಂತಹ ಕನಸು ಕಂಡ ವ್ಯಕ್ತಿ ಶೀಘ್ರದಲ್ಲೇ ಮರಣ () ಹೊಂದುತ್ತಾನೆ ಎಂದು ಹೇಳಲಾಗಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ. ಮನುಷ್ಯರಿಗೆ ಕನಸುಗಳು ಬೀಳುವುದು ಸಹಜ. ಕೆಲವು ನೆನಪಿನಲ್ಲಿ ಉಳಿದರೆ ಇನ್ನು ಕೆಲವು ಕನಸು ಮಸುಕಾಗಿ ಕಾಡುತ್ತದೆ. ಸಪ್ನ ಶಾಸ್ತ್ರ ( ) ದಲ್ಲಿ ಯಾವ ರೀತಿಯ ಕನಸು ಬಿದ್ದರೆ ಯಾವುದರ ಸಂಕೇತ ಎಂಬ ಬಗ್ಗೆ ತಿಳಿಸಲಾಗಿದೆ. ಸಾವಿನ ಮುನ್ಸೂಚನೆ () ಯನ್ನು ಕನಸುಗಳ ಮೂಲಕ ಹೇಳಲಾಗಿದೆ, ಅವುಗಳ ಮಾಹಿತಿ ಇಲ್ಲಿದೆ. ಆಕಾಶದಲ್ಲಿ ಕಾಮನಬಿಲ್ಲು ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಕಾಮನಬಿಲ್ಲು () ಕಾಣಬಾರದು. ಇದು ಸಾವಿನ ಸಂಕೇತ. ಹಾಗೂ ಕನಸಿನಲ್ಲಿ ಹಗಲಿನ ವೇಳೆ ನಕ್ಷತ್ರಗಳನ್ನು ಕಂಡರೆ ಆ ವ್ಯಕ್ತಿಯು ಸದ್ಯದಲ್ಲೇ ಸಾವನ್ನಪ್ಪುತ್ತಾನೆ. ಆತನು ಇನ್ನು ಹೆಚ್ಚು ದಿನ ಬದುಕಲಾರನೆಂದು ಅರ್ಥೈಸಿಕೊಳ್ಳಬೇಕು. ಕನಸಿನಲ್ಲಿ ದೇವರ ಪ್ರತಿಮೆ ಒಡೆಯುವುದು ಸ್ವಪ್ನಶಾಸ್ತ್ರದಲ್ಲಿ ಹೇಳುವಂತೆ ಕನಸಿನಲ್ಲಿ ಇಷ್ಟ ದೇವರ ಫೋಟೋ ಅಥವಾ ಪ್ರತಿಮೆ () ಒಡೆಯಬಾರದು. ಅಥವಾ ಆ ಫೋಟೋ ಸುಟ್ಟು ಹೋಗುತ್ತಿರುವಂತೆ ಕನಸು ಬೀಳಬಾರದು. ಇದು ಆ ವ್ಯಕ್ತಿಯ ಮೃತ್ಯುವಿನ ಸಂಕೇತವೆಂದು ಹೇಳಲಾಗುತ್ತದೆ. : ನಿಮ್ಮ ಅಂಗೈನಲ್ಲಿ ಈ ರೀತಿ ರೇಖೆಯಿದ್ರೆ ಡಿವೋರ್ಸ್ ಫಿಕ್ಸ್..! ಈ ಕನಸು ಹಿರಿಯರ ಸಾವಿನ ಸಂಕೇತ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಅಪರಿಚಿತ ವ್ಯಕ್ತಿ ನಗಾರಿಯನ್ನು ಬಾರಿಸುವುದು ಹಾಗೂ ಕ್ಷೌರ () ಮಾಡಿಕೊಳ್ಳುತ್ತಿರುವ ದೃಶ್ಯ ಬೀಳಬಾರದು. ಒಂದು ವೇಳೆ ಈ ರೀತಿಯ ಕನಸು ಕಂಡರೆ, ಇದು ವ್ಯಕ್ತಿಯ ಮನೆಯಲ್ಲಿರುವ ಹಿರಿಯರ ಮೃತ್ಯುವಿನ ಸಂಕೇತ ಆಗಿರುತ್ತದೆ ಎಂದು ಹೇಳಲಾಗುತ್ತದೆ. ನೆರಳು ಸಾವಿನ ಸೂಚನೆ ಯಾವುದೇ ಓರ್ವ ವ್ಯಕ್ತಿಯ ಕನಸಿನಲ್ಲಿ ದಪ್ಪವಿರುವ ವ್ಯಕ್ತಿಯು ತೆಳ್ಳಗೆ ಕಾಣಿಸಿದರೆ ಅಥವಾ ತೆಳ್ಳಗಿರುವ ವ್ಯಕ್ತಿಯು ದಪ್ಪ ಕಾಣಿಸಿದರೆ ಅಥವಾ ಈ ರೀತಿಯಾಗಿ ನೆರಳು () ಕಾಣಿಸುವ ಕನಸು ಕಂಡರೆ ಆ ವ್ಯಕ್ತಿ ಸದ್ಯದಲ್ಲೇ ಸಾಯುತ್ತಾನೆ ಎಂದರ್ಥ. ಯಾತ್ರೆಗೆ ಹೊರಡುವ ಕನಸು ಸ್ವಪ್ನ ಶಾಸ್ತ್ರದ ಪ್ರಕಾರ ಯಾತ್ರೆ () ಗೆ ಹೊರಡುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸಂಕೇತವಾಗಿರುತ್ತದೆ. ಹಾಗಾಗಿ ಯಾತ್ರೆಗೆ ಹೋಗುವ ಸಮಯದಲ್ಲಿ ಅಂತಹ ಕನಸು ಬಿದ್ದರೆ ಆ ಯಾತ್ರೆಯನ್ನು ನಿಲ್ಲಿಸುವುದು ಉತ್ತಮ. ಸ್ಮಶಾನದಲ್ಲಿ ಮದ್ಯಪಾನ ವ್ಯಕ್ತಿಯು ಸ್ಮಶಾನದಲ್ಲಿ ಅಥವಾ ಪರ್ವತದ ತುದಿಯಲ್ಲಿ ಕುಳಿತು ಮದ್ಯಪಾನ () ಮಾಡುತ್ತಿರುವಂತೆ ಕನಸು ಕಂಡರೆ ಅದು ಸಾವಿನ ಸಂಕೇತವೆಂದು ಹೇಳಲಾಗುತ್ತದೆ. ಹಾಗೂ ಕನಸಿನಲ್ಲಿ ಕಪ್ಪು ಬಟ್ಟೆಯನ್ನು ಹಾಕಿಕೊಂಡು ಕಪ್ಪು ಕುದುರೆಯ ಮೇಲೆ ಸವಾರಿ ಮಾಡುತ್ತಿರುವಂತೆ ಕನಸು ಕಂಡರೆ ಅದು ಮೃತ್ಯುವಿನ ಸಂಕೇತವಾಗಿರುತ್ತದೆ ಎಂದು ಹೇಳಲಾಗಿದೆ. ಕಟಕದಲ್ಲಿ ಬುಧನ ಪ್ರವೇಶ; ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ? ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.