ಕಟಕದಲ್ಲಿ ಬುಧನ ಪ್ರವೇಶ; ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ? ಎಲ್ಲಾ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಪ್ರಸ್ತುತ ಬುಧ ಗ್ರಹವು ಮಿಥುನ ರಾಶಿಯಲ್ಲಿದ್ದು, ಜುಲೈ 8ರಂದು ಕಟಕ ರಾಶಿಯನ್ನು ಪ್ರವೇಶಿಸಿದೆ. ಮತ್ತು ಜುಲೈ 25ರವರೆಗೆ ಈ ರಾಶಿಯಲ್ಲಿ ಬುಧನು ಇರಲಿದ್ದಾನೆ. ಶ್ರಾವಣ ಮಾಸದಲ್ಲಿ ಇದು ಒಂದು ಪ್ರಮುಖ ಸಂಚಾರವಾಗಿದೆ. ಕಟಕ ರಾಶಿಯಲ್ಲಿ ಬುಧನ ಪ್ರವೇಶವಾಗಿದ್ದು, ಇದರಿಂದ ಜುಲೈ 25ರವರೆಗೆ ಕೆಲ ರಾಶಿಚಕ್ರ () ಚಿಹ್ನೆಗಳಿಗೆ ಅದೃಷ್ಟ ಬರಲಿದೆ. ಬುಧದಲ್ಲಿನ ಬದಲಾವಣೆಗಳು ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷವನ್ನು ತರಬಹುದು. ಜುಲೈ ತಿಂಗಳು ಯಾವ ರಾಶಿಗೆ ತುಂಬಾ ಶುಭ ಎಂಬ ಮಾಹಿತಿ ಇಲ್ಲಿದೆ. ಎಲ್ಲಾ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಪ್ರಸ್ತುತ ಬುಧ ಗ್ರಹವು ಮಿಥುನ ರಾಶಿ () ಯಲ್ಲಿದ್ದು, ಜುಲೈ 8ರಂದು ಕಟಕ ರಾಶಿಯನ್ನು ಪ್ರವೇಶಿಸಿದೆ. ಮತ್ತು ಜುಲೈ 25ರವರೆಗೆ ಈ ರಾಶಿಯಲ್ಲಿ ಬುಧನು ಇರಲಿದ್ದಾನೆ. ಶ್ರಾವಣ ಮಾಸದಲ್ಲಿ ಇದು ಒಂದು ಪ್ರಮುಖ ಸಂಚಾರವಾಗಿದೆ. ಬುಧ ಗ್ರಹ ( ) ವು ಸಂವಹನ, ಬದಲಾವಣೆ, ತಾರ್ಕಿಕ ಚಿಂತನೆ, ಹೊಂದಾಣಿಕೆ ಮತ್ತು ತರ್ಕವನ್ನು ಪ್ರತಿನಿಧಿಸುತ್ತದೆ. ಇದರಿಂದ ಯಾವ ರಾಶಿಯವರಿಗೆ ಉತ್ತಮ ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿ ( ) ನೀವು ಬುಧ ರಾಶಿಯ ಬದಲಾವಣೆ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಈ ಸಂಚಾರವು ನಿಮಗೆ ಮಂಗಳಕರವಾಗಿರುತ್ತದೆ. ಅದರ ಪರಿಣಾಮದಿಂದ ನಿಮ್ಮ ಆಸೆಯನ್ನು ಪೂರೈಸಬಹುದು. ನಿಮ್ಮ ಆದಾಯ () ದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ. ನಿಮ್ಮ ವೈವಾಹಿಕ ಜೀವನ ( ) ವು ಅನುಕೂಲಕರವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಪಂಚ ಮಹಾಪುರುಷ ಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು?; ಇವು ನಿಮಗೆ ಅದೃಷ್ಟ ತರಲಿವೆ ವೃಷಭ ರಾಶಿ () ಬುಧ ಗ್ರಹದ ಸಂಕ್ರಮಣದಿಂದ ನೀವು ಧನಾತ್ಮಕ ಪರಿಣಾಮ ( ) ಗಳನ್ನು ನೋಡಬಹುದು. ಆ ಅವಧಿಯಲ್ಲಿ ನಿಮ್ಮ ಆಯ್ಕೆಯ ಕೆಲಸವನ್ನು ನೀವು ಪಡೆಯಬಹುದು.ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬಲವಿರುತ್ತದೆ. ನಿಮ್ಮ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಕುಟುಂಬ () ದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಕಟಕ ರಾಶಿ (,) ಬುಧವು ಕಟಕದಲ್ಲಿ ಸಾಗಿದೆ .ಇದು ನಿಮಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ವೃತ್ತಿನಿರತರು ಕಚೇರಿಯಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯುತ್ತಾರೆ. ನಿಮ್ಮ ಆದಾಯ () ದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಆದಾಯದ ಮೂಲಗಳನ್ನು ಪಡೆಯುವ ಮೂಲಕ ನೀವು ಭವಿಷ್ಯಕ್ಕಾಗಿ ಉಳಿಸಲು ಸಾಧ್ಯವಾಗುತ್ತದೆ. ಕನ್ಯಾ ರಾಶಿ () ನೀವು ಈ ತಿಂಗಳು ಬುಧ ಸಂಚಾರದಿಂದ ಲಾಭವನ್ನು ಪಡೆಯುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರೊಂದಿಗೆ, ನಿಮ್ಮ ಜೀವನದಲ್ಲಿ ಸಂತೋಷ () ಬರುತ್ತದೆ. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆ ಇರುತ್ತದೆ. ಕಚೇರಿಯಲ್ಲಿ ಬಾಸ್‌ ಜೊತೆಗಿನ ಸಂಬಂಧಗಳು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. : ಇಂದು ಸ್ನೇಹಿತನೇ ಶತ್ರು ಆಗಲಿದ್ದಾನೆ; ಈ ರಾಶಿಯವರು ಜಾಗೃತೆಯಿಂದ ಇರಿ..! ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.