: ಏಕಾಏಕಿ ನಿರ್ಧಾರ ಕೈಗೊಳ್ಳೋದ್ರಲ್ಲಿ ಇವರನ್ನು ಮೀರಿಸೋರಿಲ್ಲ ಆ ಕ್ಷಣದಲ್ಲಿ ಏನಾದರೂ ನಿರ್ಧಾರ ಕೈಗೊಳ್ಳುವುದು, ಹಿಂದೆಮುಂದೆ ಯೋಚಿಸದೆ ಯಾವುದಾದರೂ ಕೆಲಸಕ್ಕೆ ಧುಮುಕುವುದು, ಹೊಸ ಹೊಸ ಅನುಭವಗಳಿಗೆ ಮುಂದಾಗುವುದು, ಹಠಾತ್‌ ಪ್ರವೃತ್ತಿ ಕೆಲವರ ಸ್ವಾಭಾವಿಕ ಗುಣ. ಈ ಗುಣಗಳನ್ನು ಪ್ರಮುಖವಾಗಿ ಮೂರು ರಾಶಿಗಳಲ್ಲಿ ಕಾಣಬಹುದು. ಕೆಲವರಿಗೆ ಎಲ್ಲವೂ ಯೋಜನಾಬದ್ಧವಾಗಿಯೇ ನಡೆಯಬೇಕು. ಅವರ ಪ್ರತಿ ಕೆಲಸ, ಮಾತುಕತೆಗಳು ಪೂರ್ವ ಸಿದ್ಧತೆಯೊಂದಿಗೇ ಜರುಗುತ್ತವೆ. ಮೊದಲೇ ಪ್ಲಾನ್‌ ಮಾಡಿಕೊಳ್ಳದ ಹೊರತು ಏನನ್ನೂ ಮಾಡದ ಜನರಿರುತ್ತಾರೆ. ಆದರೆ, ಕೆಲ ಜನ ತಮ್ಮ ಸ್ಪಾಂಟೇನಿಟಿಗೆ ಹೆಸರುವಾಸಿ. ಅಂದರೆ, ಇವರು ಕೆಲವು ವಿಚಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡುವುದಿಲ್ಲ. ಆ ಕ್ಷಣದಲ್ಲಿ ಏನನ್ನಿಸುತ್ತದೆಯೋ ಅದನ್ನು ಮಾಡುತ್ತಾರೆ. ಇದನ್ನು ಸ್ವಲ್ಪ ದುಡುಕು ಸ್ವಭಾವ ಎಂದೂ ಹೇಳಬಹುದು. ಯೋಜನಾರಹಿತವಾಗಿ, ತಕ್ಷಣ ಏನಾದರೂ ಮಾಡುವ ಸ್ವಭಾವ ಹಲವರಲ್ಲಿ ಎದ್ದು ಕಾಣುತ್ತದೆ. ಹೀಗಾಗಿ, ಇವರು ಹಲವಾರು ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಏನಾದರೂ ನಿರ್ಧಾರ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ, ಅನಗತ್ಯ ವಿಳಂಬ ಮಾಡುವುದಿಲ್ಲ, ಪರಿಣಾಮಗಳ ಬಗ್ಗೆಯೂ ಹೆಚ್ಚು ಯೋಚಿಸುವುದಿಲ್ಲ. ಎಲ್ಲರಲ್ಲೂ ಈ ಗುಣ ಇರಬಹುದಾದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳ ಪೈಕಿ ಮೂರು ರಾಶಿಗಳಲ್ಲಿ ಈ ಗುಣವನ್ನು ಗಾಢವಾಗಿ ಕಾಣಬಹುದು. ಇವರು ಮನಸ್ಸಿಗೆ ತೋಚಿದ್ದನ್ನೆಲ್ಲ ಮಾಡುತ್ತಾರೆ ಎಂದರೆ ತಪ್ಪಿಲ್ಲ. ಇಂಪಲ್ಸಿವ್‌ ಧೋರಣೆಯೊಂದಿಗೆ ಅನಿರೀಕ್ಷಿತ ತಿರುವು, ನಿರ್ಧಾರಗಳೊಂದಿಗೆ ಜೀವನದಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ ಹಾಗೂ ಎಲ್ಲ ಥ್ರಿಲ್‌ ಅನುಭವಿಸುತ್ತಾರೆ. • ಮೇಷ ()-ಅಗ್ನಿಯಂತೆ () ಮನಬಂದಂತೆ ಸಾಗುವ ಧಾರ್ಷ್ಟ್ಯಅತ್ಯುತ್ಸಾಹ, ದುಡುಕು (), ಸಾಹಸಕೃತ್ಯಗಳಿಗೆ ಮುಂದಿರುವ ರಾಶಿ ಮೇಷ. ತಕ್ಷಣಕ್ಕೆ ಏನಾದರೂ ನಿರ್ಧಾರ ಕೈಗೊಳ್ಳಬೇಕಾದರೆ ಯಾವುದನ್ನೂ ಪರಿಗಣಿಸದೇ ಏಕಾಏಕಿ ನಿರ್ಣಯ () ಕೈಗೊಳ್ಳುತ್ತಾರೆ. ಅಪಾಯಗಳನ್ನು ಎದುರಿಸುವ ರಿಸ್ಕ್‌ () ತೆಗೆದುಕೊಳ್ಳುತ್ತಾರೆ. ಕಾರ್ಯಕ್ಕೆ () ಸಂಬಂಧಿಸಿ ಎಂದಿಗೂ ಹಿಂದೇಟು ಹಾಕುವುದಿಲ್ಲ. ಸಮಯ ವ್ಯರ್ಥ ( ) ಮಾಡುವುದೆಂದರೆ ಇವರಿಗೆ ಆಗಿಬರುವುದಿಲ್ಲ. ಈ ಕ್ಷಣದಲ್ಲಿ ಬದುಕುವ () ಇವರು ಎಲ್ಲ ಅವಕಾಶಗಳನ್ನೂ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ದುಡುಕು ಕೃತ್ಯಗಳ ಮೂಲಕ ಎಲ್ಲೆಡೆ ಮಾತುಕತೆಯ ವಸ್ತುವಾಗುತ್ತಾರೆ. ಸಾಮಾನ್ಯ ದಿನವನ್ನು ವಿಶೇಷವನ್ನಾಗಿ ಹೇಗೆ ಮಾಡಿಕೊಳ್ಳಬೇಕು ಎನ್ನುವ ಕಲೆ ಇವರಿಗೆ ಗೊತ್ತಿರುತ್ತದೆ. ಬೋಲ್ಡ್‌ () ಆಗಿ ನಿರ್ಧಾರ ಕೈಗೊಳ್ಳುವಿಕೆ ಮತ್ತು ಭಯವಿಲ್ಲದ ನಡವಳಿಕೆಗೆ ನಿಜಕ್ಕೂ ಸ್ಫೂರ್ತಿದಾಯಕ (). ತಮ್ಮ ಸಮೀಪವರ್ತಿಗಳಿಗೂ ಅನಿರೀಕ್ಷಿತ ಚಟುವಟಿಕೆಯ ( ) ವಿನೋದವನ್ನು ಒದಗಿಸುತ್ತಾರೆ. : ನಿಮ್ಮ ರಾಶಿಗೆ ಆಗಿಬರದ ರಾಶಿ ಯಾವ್ದು? ಯಾವ ರಾಶಿಯವರೊಂದಿಗೆ ಸ್ನೇಹ ಕಷ್ಟ? • ಮಿಥುನ ()-ಸೋಷಿಯಲ್‌ ಬಟರ್‌ ಫ್ಲೈ ( )ಮಿಥುನ ರಾಶಿಯಲ್ಲಿ ರಾಜ ಮತ್ತು ರಾಣಿ ಇಬ್ಬರೂ ಇದ್ದಾರೆ, ಚುರುಕು ಬುದ್ಧಿ ( ) ಮತ್ತು ಅಡಾಪ್ಟ್‌ () ಮಾಡಿಕೊಳ್ಳುವ ಗುಣ ಅದ್ಭುತವಾಗಿರುತ್ತದೆ. ವಿನೂತನ (), ವೈವಿಧ್ಯಮಯ ಅನುಭವಗಳಿಗೆ ಹಾತೊರೆಯುವ ಮಂದಿ ಇವರು. ಸಮಯವನ್ನು ಚೆನ್ನಾಗಿ ಕಳೆಯುತ್ತಲೇ ಗಮನವಿರುತ್ತದೆ. ಮಿಥುನ ರಾಶಿಯವರ ಜತೆಗಿರುವಾಗ ಬೇಸರ () ಎನ್ನುವುದು ಹತ್ತಿರ ಸುಳಿಯಲು ಸಾಧ್ಯವಿಲ್ಲ. ಹಲವಾರು ಕೆಲಸಗಳನ್ನು ಏಕಕಾಲದಲ್ಲೇ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅತೀವ ಕುತೂಹಲಿಗಳಾಗಿದ್ದು, ಇವರ ಕುತೂಹಲಕ್ಕೆ ಮಿತಿ ಎನ್ನುವುದು ಇರುವುದಿಲ್ಲ. ಮೊದಲೇ ರಂಗಿನಿಂದ ಮೂಡಿರುವ ಜೀವನಕ್ಕೆ ಇನ್ನಷ್ಟು ಬಣ್ಣ ಸೇರಿಸುವ ಪ್ರಯತ್ನದಲ್ಲಿರುತ್ತಾರೆ. ಹೊಸ ಅಡುಗೆಗಳನ್ನು ( ) ಟೇಸ್ಟ್‌ ಮಾಡುವಲ್ಲಿ ಮುಂದಿರುತ್ತಾರೆ. ತಮ್ಮ ದಾರಿಯಲ್ಲಿ ಏನೇ ಎದುರಾದರೂ ಅದನ್ನು ಒಪ್ಪಿಕೊಳ್ಳುವ, ಅಡಾಪ್ಟ್ ಮಾಡುವ ಮನೋಧರ್ಮ () ಹೊಂದಿರುತ್ತಾರೆ. ತಕ್ಷಣದ ನಿರ್ಧಾರಗಳಿಂದ ಸುಂದರವಾದ ನೆನಪುಗಳು ನಿರ್ಮಾಣವಾಗುತ್ತವೆ ಎನ್ನುವುದನ್ನು ಅರಿತಿರುತ್ತಾರೆ. ಈ ರಾಶಿಯವರು ಮನದ ಮಾತು ಹೇಳಲು ಭಯ ಪಡುತ್ತಾರೆ.. • ಧನು ()-ಸ್ವತಂತ್ರ ಚೈತನ್ಯ ( )ತಕ್ಷಣದ ನಿರ್ಧಾರಗಳಿಗೆ ಧನು ರಾಶಿಯವರು ಎತ್ತಿದ ಕೈ. ಸಾಹಸಮಯ () ಚಟುವಟಿಕೆಗಳಲ್ಲಿ ನಿರತರಾಗುವುದು ಇವರ ನೆಚ್ಚಿನ ಹವ್ಯಾಸ. ಹೊಸದನ್ನು ಕಲಿಯುವುದು, ಹೊಸ ಕೆಲಸಗಳಲ್ಲಿ ಭಾಗಿಯಾಗುವುದು ಇಷ್ಟ. ಇವರ ನರನಾಡಿಗಳಲ್ಲೇ ಆ ಕ್ಷಣದ ಪ್ರೇರಣೆ ಎನ್ನುವುದು ಇರುತ್ತದೆ. ಯಾವುದೇ ಹೊಸ ಸಾಹಸಕ್ಕೆ ತಲೆ ಒಡ್ಡಲು ಸದಾ ಸಿದ್ಧರಾಗಿರುತ್ತಾರೆ. ತಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳುವ ಯತ್ನದಲ್ಲೇ ಇರುತ್ತಾರೆ. ದಿನವೂ ಒಂದೇ ರೀತಿ ಇರುವುದು ಇವರಿಗೆ ಭಾರೀ ಬೇಸರ ತರುತ್ತವೆ.