ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌ 14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದು ಕೋರ್ಟ್‌ ಹೇಳಿದೆ. ಅಹಮದಾಬಾದ್‌ (ಜೂನ್ 10, 2023):‘ಹಿಂದಿನ ಕಾಲದಲ್ಲಿ ಹುಡುಗಿಯರು 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು ಮತ್ತು 17 ವರ್ಷಕ್ಕಾಗಲೇ ಮಗುವಿಗೆ ಜನ್ಮ ನೀಡುತ್ತಿದ್ದರು. ಈ ಬಗ್ಗೆ ಮನುಸ್ಮೃತಿಯನ್ನು ಓದಿ’ ಎಂದು ಗುಜರಾತ್‌ ಹೈಕೋರ್ಟ್‌ ಮೌಖಿಕವಾಗಿ ಹೇಳಿದೆ. ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿರುವ 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿ ಸಲ್ಲಿ​ಸಿ​ದ್ದಾರೆ. ಇದರ ವಿಚಾ​ರಣೆ ನಡೆ​ಸಿ​ದ ನ್ಯಾಯಮೂರ್ತಿ ಸಮೀರ್‌ ಜೆ ದೇವ್‌, ‘14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದರು. ಇದನ್ನು ಓದಿ:ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಸಲಹೆ ಇದೇ ವೇಳೆ, ‘ಬಾಲಕಿಯ ಗರ್ಭದಲ್ಲಿ ಎರಡು ಭ್ರೂಣಗಳಿದ್ದು ಆಕೆಯೂ ಉತ್ತಮ ಸ್ಥಿತಿಯಲ್ಲಿರುವುದರಿಂದ ಏಕಾ​ಏಕಿ ಗರ್ಭಪಾತಕ್ಕೆ ಅನುಮತಿ ನೀಡಲು ಆಗದು. ಆದರೂ ಈ ಬಗ್ಗೆ ವೈದ್ಯ​ರಿಂದ ವರದಿ ತರಿ​ಸಿ​ಕೊಂಡು ಮುಂದಿನ ಹೆಜ್ಜೆ ಇಡೋ​ಣ​’ ಎಂದು ಸ್ಪಷ್ಟ​ಪ​ಡಿಸಿ ವಿಚಾ​ರಣೆ ಮುಂದೂ​ಡಿ​ದ​ರು. ‘ಮಗಳು 7 ತಿಂಗಳ ಗರ್ಭಿಣಿಯಾದಾಗ ನಮ​ಗೆ ಈ ವಿಷಯ ತಿಳಿದಿದ್ದು, ಆಕೆ ಅಪ್ರಾಪ್ತೆಯಾದ್ದರಿಂದ ವೈದ್ಯಕೀಯವಾಗಿ ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದು ತಂದೆ ಕೋರ್ಟ್‌ ಮೆಟ್ಟಿ​ಲೇ​ರಿ​ದ್ದಾ​ರೆ. ಇದನ್ನೂ ಓದಿ:ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ