: ಸುರಕ್ಷಿತ ಹೆರಿಗೆಗಾಗಿ ಈ ಜ್ಯೋತಿಷ್ಯ ಕ್ರಮಗಳನ್ನು ಅನುಸರಿಸಿ.. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸುಗಮ ಗರ್ಭಧಾರಣೆ ಮತ್ತು ಸುರಕ್ಷಿತ ಹೆರಿಗೆಗೆ ಪರಿಹಾರಗಳು ಕೊಡುಗೆ ನೀಡುತ್ತವೆ. ಲಾಲ್ ಕಿತಾಬ್‌ನಲ್ಲಿ ಕೂಡಾ ಇದಕ್ಕಾಗಿ ಪರಿಹಾರವಿದೆ. ಇದಕ್ಕಾಗಿ ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.. ಈ ದಿನಗಳಲ್ಲಿ ಗರ್ಭಧಾರಣೆಯೇ ಒಂದು ಕಷ್ಟದ ವಿಷಯವಾಗಿದೆ. ಅಂಥದರಲ್ಲಿ ನಂತರದ 9 ತಿಂಗಳನ್ನು ಕಳೆದು ಸುರಕ್ಷಿತ ಹೆರಿಗೆಯಾಗುವುದು ದೊಡ್ಡ ಯಜ್ಞವೇ ಆಗಿದೆ. ಆದರೆ, ಗರ್ಭಧಾರಣೆಯಿಂದ ಹಿಡಿದು ಸುರಕ್ಷಿತ ಹೆರಿಗೆವರೆಗೂ ಜ್ಯೋತಿಷ್ಯದಲ್ಲಿ ಪರಿಹಾರ ಮಾರ್ಗಗಳಿವೆ. ದೇವರನ್ನು ನಂಬಿದರೆ ಆತ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ತಿಳಿದಂತೆಯೇ, ಸುರಕ್ಷಿತ ಹೆರಿಗೆಗಾಗಿ ಗ್ರಹಗಳನ್ನು ಒಲಿಸಿಕೊಳ್ಳಲು ಕೆಲ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ. ಸುರಕ್ಷಿತ ಗರ್ಭಧಾರಣೆಗಾಗಿ ಲಾಲ್ ಕಿತಾಬ್ ಪರಿಹಾರಗಳುಗರ್ಭಾವಸ್ಥೆಯನ್ನು ರಕ್ಷಿಸಲು ಲಾಲ್ ಕಿತಾಬ್‌ನಲ್ಲಿ ಹಲವಾರು ಪರಿಹಾರಗಳನ್ನು ಪಟ್ಟಿ ಮಾಡಲಾಗಿದೆ.