: ನಿಮ್ಮ ಹುಟ್ಟುಹಬ್ಬಕ್ಕೆ ಯಾವ ಬಣ್ಣದ ಬಟ್ಟೆ ಅದೃಷ್ಟ ತರುತ್ತೆ ನೋಡ್ಕೊಳಿ ನೀವು ಎಂದಾದರೂ ನಿಮ್ಮ ಅದೃಷ್ಟದ ಬಣ್ಣವನ್ನು ಕೇಳಿದ್ದೀರಾ? ವಿಶೇಷ ಸಂದರ್ಭಗಳಲ್ಲಿ, ಮುಖ್ಯವಾಗಿ ಸವಾಲಿನ ಸಮಯಗಳಲ್ಲಿ ಅದೃಷ್ಟದ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ ಎಂದು ಜ್ಯೋತಿಷ್ಯ ತಜ್ಞರು ಖಚಿತವಾಗಿ ಹೇಳುತ್ತಾರೆ. ಹುಟ್ಟುಹಬ್ಬ ಎದುರಾದಾಗ ಅರಿಯದೇ ಎಲ್ಲರೊಳಗೊಂದು ಥ್ರಿಲ್‌ ಆವರಿಸುತ್ತದೆ. ಬರ್ತ್‌ ಡೇ ಪಾರ್ಟಿ ಆಚರಿಸುವವರಂತೂ ಅದರ ಸಿದ್ಧತೆಯಲ್ಲಿ ತೊಡಗುತ್ತಾರೆ. ಪ್ರೀತಿಪಾತ್ರರೊಂದಿಗೆ ಪಾರ್ಟಿ ಆಚರಿಸುವ ಮೂಲಕ ಅದನ್ನು ಬೆಚ್ಚಗಿನ ಅನುಭವವನ್ನಾಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ವಾರ್ಡ್‌ ರೋಬ್‌ ಎದುರು ನಿಂತು ಯಾವ ಬಣ್ಣದ ಡಿಸೈನರ್‌ ಡ್ರೆಸ್‌ ಕೊಂಡುಕೊಳ್ಳುವುದೆಂದು ಲೆಕ್ಕಾಚಾರ ಹಾಕುತ್ತಾರೆ. ಬಣ್ಣಗಳ ಆಯ್ಕೆ ಪಕ್ಕಾ ಇಷ್ಟದ ಮೇಲೆ ಆಧಾರವಾಗುತ್ತದೆ. ಇಷ್ಟದ ಬಣ್ಣ ಹಾಗೂ ಈಗಾಗಲೇ ನಮ್ಮ ಬಳಿ ಇಲ್ಲದ ಬಣ್ಣದ ಉಡುಪುಗಳನ್ನು ಕೊಳ್ಳಲು ಹತ್ತಾರು ಕಡೆ ವಿಚಾರಿಸುತ್ತಾರೆ. ಆದರೆ, ಇಲ್ಲೊಂದು ವಿಚಾರವನ್ನು ಬಹಳಷ್ಟು ಮಂದಿ ಮರೆಯುತ್ತಾರೆ. ಬಣ್ಣ ಕೇವಲ ಇಷ್ಟವಾದರೆ ಸಾಲದು, ಅದು ನಿಮ್ಮ ಹುಟ್ಟಿದ ದಿನಾಂಕ, ರಾಶಿಚಕ್ರಗಳಿಗೂ ಹೊಂದಾಣಿಕೆ ಆಗುವಂತಿದ್ದರೆ ಹೆಚ್ಚು ಅದೃಷ್ಟ ನಿಮ್ಮದಾಗುತ್ತದೆ. ಅದೃಷ್ಟ ತರುವ ಬಣ್ಣದ ಉಡುಪನ್ನು ಹುಟ್ಟುಹಬ್ಬಕ್ಕೆ ಧರಿಸುವುದರಿಂದ ಮುಂದಿನ ನಿಮ್ಮ ವರ್ಷ ಹೆಚ್ಚು ಅದೃಷ್ಟದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಅಖಿಲ ಭಾರತ ಅತೀಂದ್ರಿಯ ವಿಜ್ಞಾನ ಸಂಸ್ಥೆಯ ತಜ್ಞರು ಈ ಬಗ್ಗೆ ಕೆಲವು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಹುಟ್ಟುಹಬ್ಬದ ದಿನಾಂಕಕ್ಕೆ ಪೂರಕವಾಗಿ ಕೆಲವು ಬಣ್ಣಗಳನ್ನು ಧರಿಸುವುದು ಸೂಕ್ತ.• 1,10,19,28 ರಂದು ಜನಿಸಿದವರುಈ ದಿನಾಂಕಗಳಂದು ಜನಿಸಿದವರ ಗ್ರಹ () ಅಧಿಪತಿ ಸೂರ್ಯ (). ಗೋಲ್ಡ್‌ (), ಹಳದಿ (), ಕೇಸರಿ () ಬಣ್ಣದ () ಉಡುಪು ಧರಿಸುವುದು ಸೂಕ್ತ. ಈ ಬಣ್ಣಗಳು ನಾಯಕತ್ವದ ಗುಣ (), ಕ್ರಿಯಾಶೀಲತೆ () ಹಾಗೂ ಆತ್ಮವಿಶ್ವಾಸವನ್ನು () ಸೂಚಿಸುತ್ತವೆ. ಜಾತಕದಲ್ಲಿ ಈ ರೀತಿಯ ಯೋಗಗಳಿದ್ದರೆ ನೀವು ಸನ್ಯಾಸಿಯಾಗಬಹುದು.. • 2,11,20,29 ರಂದು ಜನಿಸಿದ ಜನರುಚಂದ್ರ () ಅಧಿಪತಿಯಾಗಿರುವ ಈ ಜನರು ಬಿಳಿ () ಹಾಗೂ ಬೆಳ್ಳಿ ಬಣ್ಣದ ದಿರಿಸುಗಳನ್ನು ಧರಿಸುವುದು ಉತ್ತಮ. ಇವು ಸಾಮರಸ್ಯ, ಸಮತೋಲನ, ದೈವಿಕತೆಯನ್ನು () ಬಿಂಬಿಸುತ್ತವೆ. • ಹುಟ್ಟಿದ ದಿನಾಂಕ 3,12,21,30ಗುರು () ಗ್ರಹ ಇವರ ಅಧಿಪತಿ. ಹಳದಿ, ನೇರಳೆ () ಬಣ್ಣಗಳು ಇವರಿಗೆ ಸೂಕ್ತ. ಇವು ಕ್ರಿಯಾಶೀಲತೆ, ಅದಮ್ಯ ಆಕಾಂಕ್ಷೆ, ವೃತ್ತಿ ಬೆಳವಣಿಗೆಯನ್ನು ಸೂಚಿಸುತ್ತವೆ. • 4,13,22,31 ರಂದು ಜನಿಸಿದ್ದರೆರಾಹು () ಗ್ರಹಾಧಿಪತಿಯಾಗಿರುತ್ತಾನೆ. ಕಪ್ಪು () ಮತ್ತು ಬೂದು () ಬಣ್ಣದ ಉಡುಪುಗಳನ್ನು ಇವರು ಹುಟ್ಟುಹಬ್ಬದಂದು ಧರಿಸಬೇಕು. ರಾಹು ಗ್ರಹ ಭ್ರಮೆ, ಆಳ, ಪ್ರಾಪಂಚಿಕ ಆಸೆಗಳನ್ನು ತೋರಿಸುತ್ತದೆ. • 5,14,23 ರಂದು ಜನಿಸಿದ್ದರೆಬುಧ () ಗ್ರಹ ಇವರ ಅಧಿಪತಿ. ಇವರ ಅದೃಷ್ಟದ () ಬಣ್ಣ ಹಸಿರು. ಈ ಬಣ್ಣ ಬುದ್ಧಿವಂತಿಕೆ, ಸಂವಹನ ಮತ್ತು ಮಾನಸಿಕ ಸ್ಥಿರತೆಯನ್ನು ( ) ಸೂಚಿಸುತ್ತದೆ. : ಗಳಿಸಿದ್ದನ್ನು ಉಳಿಸಿಕೊಳ್ಳಲು ಬೆತ್ತಲೆಯಾಗಿ ಸ್ನಾನ ಮಾಡ್ಬೇಡಿ! • 6,15,24 ರಂದು ಜನನರಾದವರುಶುಕ್ರ () ಗ್ರಹ ಅಧಿಪತಿ. ತಿಳಿಗುಲಾಬಿ (), ತಿಳಿ ನೀಲಿ ( ) ಇವರಿಗೆ ಅದೃಷ್ಟದ ಬಣ್ಣಗಳು. ಇವು ಪೋಷಣೆ, ಪ್ರೀತಿ (), ಸೌಂದರ್ಯ, ಸಾಮರಸ್ಯ () ಮತ್ತು ಕುಟುಂಬವನ್ನು ತೋರುತ್ತವೆ. • 7,16,25 ರಂದು ಜನ್ಮದಿನಾಂಕ ( ) ಹೊಂದಿದವರುಕೇತು ಇವರ ಅಧಿಪತಿ. ಕಂದು ಮತ್ತು ಬೂದು ಬಣ್ಣ ಇವರಿಗೆ ಸೂಕ್ತ. ಇದು ತಟಸ್ಥ, ವಿರಕ್ತ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸೂಚಿಸುವ ಗ್ರಹ. • 8,17,26ಶನಿ () ಗ್ರಹ ಇವರ ಅಧಿಪತಿ. ಕಪ್ಪು, ದಟ್ಟ ನೀಲಿ ಇವರ ಅದೃಷ್ಟದ ಬಣ್ಣಗಳು. ಶನಿ ಗ್ರಹ ಶಿಸ್ತು ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ. • ಜನ್ಮದಿನಾಂಕ 9,18,27ಮಂಗಳ () ಗ್ರಹ ಇವರ ಅಧಿಪತಿ. ಇವರಿಗೆ ಅದೃಷ್ಟದ ಬಣ್ಣ ಕೆಂಪು (). ಮಂಗಳ ಗ್ರಹ ಆಕಾಂಕ್ಷೆ, ಧೈರ್ಯ ಮತ್ತು ಶಕ್ತಿ-ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.