: ಹಣಕಾಸು ಚೆನ್ನಾಗಿ ಕೈಲಿ ಓಡಾಡ್ಬೇಕಂದ್ರೆ ಶುಕ್ರವಾರ ಈ ಕೆಲಸ ಮಾಡೋಕ್ ಮರೀಬೇಡಿ! ಶುಕ್ರವಾರವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಮರ್ಪಿತವಾಗಿದೆ. ಅಷ್ಟೇ ಅಲ್ಲ, ವೈಭೋಗ ನೀಡುವ ಶುಕ್ರ ಗ್ರಹದ ದಿನ ಕೂಡಾ ಇದೇ ಆಗಿದೆ. ಇಂದು ಕೈಗೊಳ್ಳುವ ಕೆಲ ಕ್ರಮಗಳು ಆರ್ಥಿಕವಾಗಿ ನಿಮ್ಮನ್ನು ಸದೃಢಗೊಳಿಸುವ ಜೊತೆಗೆ ಸದಾ ಕೈಲಿ ಹಣಕಾಸು ಓಡಾಡುವಂತೆ ಮಾಡುತ್ತವೆ. ವಾರದ ಪ್ರತಿ ದಿನವೂ ಒಂದಲ್ಲ ಒಂದು ದೇವರಿಗೆ ಮೀಸಲಾಗಿದೆ, ಜೊತೆಗೆ ಗ್ರಹಕ್ಕೆ ಕೂಡಾ. ಶುಕ್ರವಾರದಂದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವ ಆಚರಣೆ ಇದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜೊತೆಗೆ, ಐಶಾರಾಮಿಕಾರಕನಾದ ಶುಕ್ರ ಗ್ರಹವೂ ಬಲಗೊಳ್ಳುತ್ತದೆ. ಕುಟುಂಬದಲ್ಲಿ ಸಮೃದ್ಧಿ ಮತ್ತು ಸಂಪತ್ತು ಸದಾ ಇರಬೇಕು ಎಂದು ನೀವು ಬಯಸಿದರೆ, ಖಂಡಿತವಾಗಿಯೂ ಶುಕ್ರವಾರದಂದು ಕೆಲ ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳಿ. ಮತ್ತು ಜೀವನದಲ್ಲಾಗುವ ಬದಲಾವಣೆಗಳನ್ನು ಸ್ವತಃ ಗಮನಿಸಿ. ಶುಕ್ರವಾರದ ಪರಿಹಾರಗಳು