: ಗುರು ದೋಷ ತೊಡೆದು ಹಾಕಲು ಹೀಗೆ ಮಾಡಿದ್ರೆ ವಿವಾಹಕ್ಕಿಲ್ಲ ಅಡೆತಡೆ ಗುರುವಾರ ಮಾಡಬೇಕಾದ ಹಾಗೂ ಮಾಡಬಾರದ ಈ ಕೆಲಸಗಳನ್ನು ಮನಸ್ಸಲ್ಲಿಟ್ಟುಕೊಂಡು ಮುಂದುವರೆದರೆ, ಜಾತಕದಲ್ಲಿನ ಗುರು ದೋಷ ತೊಲಗಿ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಇದರಿಂದ ಸಂತೋಷದ ವೈವಾಹಿಕ ಜೀವನ ಸಿಗುತ್ತದೆ ಹಾಗೆಯೇ ಅವಿವಾಹಿತರಿಗೆ ಶೀಘ್ರ ಸಂಬಂಧ ಕೂಡಿಬರುತ್ತದೆ. ಗುರುವಾರ ದೇವಗುರು ಬೃಹಸ್ಪತಿಯ ದಿನ. ಈ ದಿನ, ಭಗವಾನ್ ವಿಷ್ಣುವನ್ನು ಮೆಚ್ಚಿಸಲು, ಅವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಪಂಚದ ರಕ್ಷಕ ವಿಷ್ಣುವಿನ ಆಶೀರ್ವಾದವಿದ್ದರೆ ಸದಾ ಆತನ ರಕ್ಷೆಯಲ್ಲಿ ಸಂತೋಷವಾಗಿರಬಹುದು. ಇನ್ನು ಗುರುವಾರವೆಂದರೆ ಗುರು ಗ್ರಹದ ದಿನವೂ ಹೌದು. ಗುರುವನ್ನು ವ್ಯಕ್ತಿಯ ವೈವಾಹಿಕ ಸ್ಥಿತಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ಸೂಚಕ ಎಂದು ಭಾವಿಸಲಾಗಿದೆ. ಅದೇ ಜಾತಕದಲ್ಲಿ ಗುರುದೋಷವಿದ್ದರೆ ವೈವಾಹಿಕ ಜೀವನದಲ್ಲಿ ಅಡೆತಡೆ ಬರುವ ಜೊತೆಗೆ ಅವಿವಾಹಿತರ ಮದುವೆ ವಿಳಂಬವಾಗುವುದು. ನಿಮ್ಮ ಕುಂಡಲಿಯಿಂದ ಗುರು ದೋಷವನ್ನು ತೊಡೆದು ಹಾಕಲು ಮತ್ತು ವಿಷ್ಣುವಿನ ಕೃಪೆಗಾಗಿ ಗುರುವಾರದ ಉಪವಾಸ ಮತ್ತು ಗುರುವಾರ ಅದೃಷ್ಟಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಜೀವನದ ಕಷ್ಟಗಳಿಂದ ಮುಕ್ತರಾಗಬಹುದು. ಈಗ ಗುರುವಾರ ವ್ರತ ವಿಧಿ ಮತ್ತು ಈ ದಿನದಂದು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಬಗ್ಗೆ ತಿಳಿಯೋಣ. ಗುರುವಾರ ಪರಿಹಾರಗಳುಗುರುವಾರದ ಪರಿಹಾರಗಳನ್ನು ಪ್ರಯತ್ನಿಸುವುದರಿಂದ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಈ ದಿನದಂದು ತೆಗೆದುಕೊಂಡ ಕ್ರಮಗಳನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಈ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. : ಸಂಬಳ ಬಂದ ತಕ್ಷಣ ಈ ಕೆಲಸ ಮಾಡಿದ್ರೆ ಯಶಸ್ಸು ಗ್ಯಾರಂಟಿ ಗುರುವಾರದಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ ಗುರುವಾರ ಮಾಡಬೇಕಾದ ಕೆಲಸಗಳು