2023: ಗ್ರಹಣ ಮುಗೀತಿದ್ದಂಗೆ ಈ ಕೆಲಸ ಮಾಡೋಕೆ ಮರೀಬೇಡಿ! ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ನಡೆಯಲಿದೆ. ಗ್ರಹಣ ಮುಗಿದ ತಕ್ಷಣವೇ ಮಾಡಬೇಕಾದ ಕೆಲವು ಕೆಲಸಗಳ ಬಗ್ಗೆ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ ನಕಾರಾತ್ಮಕತೆ ಕೊನೆಗೊಳ್ಳುತ್ತದೆ. ವರ್ಷದ ಮೊದಲ ಸೂರ್ಯಗ್ರಹಣವು ಇಂದು ಅಂದರೆ ಏಪ್ರಿಲ್ 20ರಂದು ಬೆಳಿಗ್ಗೆ 7:04ರಿಂದ ಮಧ್ಯಾಹ್ನ 12:29ರವರೆಗೆ ಸಂಭವಿಸುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ ಮತ್ತು ಭೂಮಿಯ ಮೇಲಿನ ಕೆಲವು ಸ್ಥಳಗಳಿಂದ ಸೂರ್ಯನನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಈ ಗ್ರಹಣ ಗೋಚಾರವಾಗುವುದಿಲ್ಲವಾದರೂ, ನೀವು ಕೆಲವೊಂದು ಮುನ್ನೆಚ್ಚರಿಕೆ ಹಾಗೂ ಗ್ರಹಣದ ಬಳಿಕದ ಕ್ರಿಯೆಗಳನ್ನು ಮಾಡುವುದು ಸದಾ ಒಳ್ಳೆಯದು. ಕಾಂಬೋಡಿಯಾ, ಚೀನಾ, ಅಮೆರಿಕ, ಮಲೇಷ್ಯಾ, ಫಿಜಿ, ಜಪಾನ್, ಸಮೋವಾ, ಸೊಲೊಮನ್, ಸಿಂಗಾಪುರ್, ಥೈಲ್ಯಾಂಡ್, ದಕ್ಷಿಣ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಂತಹ ಸ್ಥಳಗಳಿಂದ ಸೂರ್ಯಗ್ರಹಣ ಗೋಚರಿಸುತ್ತದೆ. ಗ್ರಹಣದ ಮೊದಲು ಸೂತಕವನ್ನು ಆಚರಿಸಲಾಗುತ್ತದೆ ಮತ್ತು ಗ್ರಹಣದ ಸಮಯದಲ್ಲಿಯೂ ಅನೇಕ ನಿರ್ಬಂಧಗಳಿವೆ. ಆದರೆ ಸೂರ್ಯಗ್ರಹಣ ಮುಗಿದರೂ ಅದರ ದುಷ್ಪರಿಣಾಮಗಳು ಕಡಿಮೆಯಾಗುವುದಿಲ್ಲ. ಅದಕ್ಕಾಗಿಯೇ ಗ್ರಹಣ ಮುಗಿದ ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ ನಕಾರಾತ್ಮಕತೆ ಕೊನೆಗೊಳ್ಳುತ್ತದೆ.