: ಅಂಗಡಿಗಳಲ್ಲಿ ಇಂಥ ಕನ್ನಡಿ ಇರಿಸಿದ್ರೆ ವ್ಯಾಪಾರ ದ್ವಿಗುಣವಾಗೋದು ಖಚಿತ! ವಾಸ್ತು ಶಾಸ್ತ್ರದಲ್ಲಿ ಕನ್ನಡಿಗಳಿಗೆ ಪ್ರಾಮುಖ್ಯತೆ ಇದೆ. ಸರಿಯಾದ ದಿಕ್ಕಿನಲ್ಲಿ ಇರಿಸದ ಕನ್ನಡಿಯು ಮನೆಯ ಸಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಋಣಾತ್ಮಕ ಶಕ್ತಿಯನ್ನು ತರುತ್ತದೆ. ಕನ್ನಡಿಯ ವಿಷಯವಾಗಿ ನೀವು ಗಮನಿಸಬೇಕಾದ ವಾಸ್ತು ಸಲಹೆಗಳು ಇವು. ಕನ್ನಡಿಗಳು ಪ್ರತಿ ಮನೆಯ ಅಗತ್ಯ. ಈಗಂತೂ ಕೆಲ ಮನೆಗಳ ರಚನೆ ಹೇಗಿರುತ್ತದೆಂದರೆ ಮನೆಯಲ್ಲಿ ಕನ್ನಡಿ ಇದೆಯೋ, ಕನ್ನಡಿಯಲ್ಲೇ ಮನೆ ಕಟ್ಟಿದ್ದಾರೋ ತಿಳಿಯದಷ್ಟು ಎಲ್ಲೆಲ್ಲೂ ಪ್ರತಿಬಿಂಬ ಕಾಣಿಸುತ್ತದೆ. ವಾಸ್ತುವಿನಲ್ಲಿ ಕನ್ನಡಿಗೆ ಮಹತ್ವದ ಸ್ಥಾನವಿದೆ. ಕನ್ನಡಿಗಳಿಗೆ ಸಕಾರಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳೆರಡನ್ನೂ ಆಕರ್ಷಿಸುವ ಶಕ್ತಿ ಇದೆ. ವಾಸ್ತು ಪ್ರಕಾರ ಕನ್ನಡಿ ಇಡದಿದ್ದಾಗ ಮನೆಯ ಶಕ್ತಿಯ ಹರಿವಿನಲ್ಲಿ ವ್ಯತ್ಯಾಸವಾಗಿ ಋಣಾತ್ಮಕ ಶಕ್ತಿ ಹೆಚ್ಚಬಹುದು. ಅಂತೆಯೇ ಕನ್ನಡಿಗಳನ್ನು ವಾಸ್ತು ಪ್ರಕಾರ ಇರಿಸಿದಾಗ ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು ಸಮೃದ್ಧಿಯನ್ನು ಹೆಚ್ಚಿಸುವ ಮತ್ತು ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಸಕಾರಾತ್ಮಕ ಶಕ್ತಿಯ ಹರಿವಿಗಾಗಿ ಕನ್ನಡಿಯನ್ನು ವಾಸ್ತು ಪ್ರಕಾರ ಇರಿಸಲು ಇಲ್ಲಿವೆ ನಿಯಮಗಳು..