2023ಯಂದು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳು ರಾಮನವಮಿಗೆ ಇನ್ನೇನು ಎರಡು ದಿನವಿದೆ. ಈ ಬಾರಿಯ ರಾಮನವಮಿ ಹಲವು ಶುಭಯೋಗಗಳಿಂದ ಬಹಳ ವಿಶೇಷವಾಗಿದೆ. ಈ ದಿನ ನೀವು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ಇರಲಿ ಎಚ್ಚರ.. ಚೈತ್ರ ನವರಾತ್ರಿಯ ಕೊನೆಯ ದಿನವಾದ ರಾಮ ನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಬರುತ್ತದೆ. ಭಗವಾನ್ ರಾಮನ ಭಕ್ತರು ಈ ದಿನಕ್ಕಾಗಿ ಹಲವು ದಿನಗಳ ಮುಂಚಿತವಾಗಿ ಸಿದ್ಧತೆಗಳನ್ನು ಮಾಡುತ್ತಾರೆ. ಭಗವಾನ್ ರಾಮನ ಹೆಸರು ಕೇಳಿದರೆ ಸಾಕು, ಭಕ್ತರಿಗೆ ಅವನ ಅನಂತ ಸದ್ಗುಣಗಳು ನೆನಪಾಗುತ್ತವೆ. ಅವನ ಮಹಾನ್ ವ್ಯಕ್ತಿತ್ವ ರೋಮಾಂಚನಗೊಳಿಸುತ್ತದೆ. ಈ ಬಾರಿ ಮಾರ್ಚ್ 30ರಂದು ರಾಮನವಮಿ ಹಬ್ಬವಿದೆ. ಇದು ಭಗವಾನ್ ವಿಷ್ಣುವು ರಾಮನ ಅವತಾರದಲ್ಲಿ ಧರೆಗಿಳಿದ ದಿನವಾಗಿದೆ. ಈ ಮಂಗಳಕರ ದಿನದಂದು, ಚಂದ್ರನು ಪುನರ್ವಸು ನಕ್ಷತ್ರವನ್ನು ಸಂಕ್ರಮಿಸುತ್ತಾನೆ. ಪುನರ್ವಸು ನಕ್ಷತ್ರವು ಸಂಪತ್ತು, ಖ್ಯಾತಿ, ಮನ್ನಣೆ, ತಾಯಿಯ ಪ್ರೀತಿ ಮತ್ತು ಪುನರಾವರ್ತನೆಯನ್ನು ಸಂಕೇತಿಸುತ್ತದೆ. ಇದಲ್ಲದೆ, ಚಂದ್ರನು ಶನಿ, ಮಂಗಳ ಮತ್ತು ಗುರುವಿನ ಅಂಶವನ್ನು ಸ್ವೀಕರಿಸುತ್ತಾನೆ.ಈ ದಿನದಂದು ಶ್ರೀರಾಮನನ್ನು ಪೂಜಿಸುವುದರಿಂದ ಮತ್ತು ಅವನ ಮಂತ್ರವನ್ನು ಪಠಿಸುವುದರಿಂದ ಕಳೆದುಹೋದ ಸಂಪತ್ತು, ಸ್ಥಾನಮಾನ ಮತ್ತು ಮನ್ನಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆರೋಗ್ಯ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲು ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಇದು ಸರಿಯಾದ ದಿನವಾಗಿದೆ. 2023; ಈ ದಿನ ವೈಶಿಷ್ಟ್ಯತೆಯ ಬಗ್ಗೆ ನೀವು ತಿಳಿಯಬೇಕಾದುದೆಲ್ಲವೂ ಇಲ್ಲಿದೆ.. ರಾಮ ನವಮಿಯ ಸಂದರ್ಭದಲ್ಲಿ ನೀವು ಮಾಡಬೇಕಾದ ಹಾಗೂ ಮಾಡಬಾರದ ವಿಷಯಗಳ ಬಗ್ಗೆ ತಿಳಿಯುವುದು ಮುಖ್ಯವಾಗಿದೆ. ರಾಮನವಮಿಯಂದು ಮಾಡಬೇಕಾದ ಕೆಲಸಗಳು ಈ ಶುಭ ದಿನದಂದು ಮಾಡಬಾರದ ಕೆಲವು ವಿಷಯಗಳು ಇಲ್ಲಿವೆ: