'ಅತ್ಯದ್ಭುತ ಬಾಯ್‌ ಫ್ರೆಂಡ್‌' ಎನಿಸಿಕೊಳ್ಳೋ ರಾಶಿಗಳಿವು, ಇವರನ್ನು ಪತಿಯಾಗಿ ಪಡೆದವರೇ ಲಕ್ಕಿ! ಪ್ರತಿಯೊಬ್ಬ ಲವರ್‌ ಕೂಡ ಅದ್ಭುತವೇ. ಪ್ರೀತಿಯೇ ಹಾಗೆ, ಪ್ರತಿಯೊಬ್ಬರನ್ನೂ ಉತ್ತಮರನ್ನಾಗಿ ಮಾಡಿಬಿಡುತ್ತದೆ. ಆದರೂ ಕೆಲವು ರಾಶಿಗಳ ಪುರುಷರು ಎಕ್ಸಲೆಂಟ್‌ ಬಾಯ್‌ ಫ್ರೆಂಡ್‌ ಆಗಿರುತ್ತಾರೆ. ಇವರಲ್ಲಿರುವ ಕೆಲವು ವಿಶಿಷ್ಟ ಗುಣಗಳು ಇವರನ್ನು ಉತ್ತಮ ಸಂಗಾತಿಯನ್ನಾಗಿ ರೂಪಿಸುತ್ತದೆ. ಪ್ರೇಮಿಗಳು ವೈವಾಹಿಕ ಜೀವನ ಆರಂಭಿಸುವ ಕನಸು ಕಾಣುತ್ತಲೇ ಇರುತ್ತಾರೆ. ಪ್ರೀತಿಪಾತ್ರರೊಂದಿಗೆ ಬಾಳನ್ನು ಆರಂಭಿಸುವ ಕಲ್ಪನೆ ಹಿತವೆನಿಸುತ್ತದೆ. ಪರಸ್ಪರ ಅರಿತಿರುವ ಸಮಯದಲ್ಲಿ ಮದುವೆ ಎನ್ನುವುದು ಅವರಲ್ಲಿ ಭಯ ಮೂಡಿಸುವುದಿಲ್ಲ. ಬದಲಿಗೆ, ಅವರೊಂದಿಗೆ ಭವಿಷ್ಯ ಕಲ್ಪಿಸಿಕೊಳ್ಳುವ ಸುಂದರವಾದ ಭಾವನೆಗೆ ಕಾರಣವಾಗುತ್ತದೆ. ಎಲ್ಲರೂ ತಮ್ಮ ಲವರ್‌ ವಿಶೇಷವೆಂದೇ ಭಾವಿಸುತ್ತಾರೆ. ಎಲ್ಲರಿಗೂ ಅವರವರ ಪ್ರೀತಿ ವಿಶೇಷವೇ ಆಗಿರುತ್ತದೆ. ಹಾಗೂ ಎಲ್ಲರೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೀತಿಪಾತ್ರರೊಂದಿಗೆ ಬೆರೆಯುತ್ತಾರೆ, ಒಡನಾಡುತ್ತಾರೆ ಹಾಗೂ ಅವರಲ್ಲಿ ಭರವಸೆ ಮೂಡಿಸುತ್ತಾರೆ. ಆದರೆ, ಕೆಲವು ರಾಶಿಗಳ ಪುರುಷರು ಮಾತ್ರ ಈ ವಿಚಾರದಲ್ಲಿ ಒಂದು ಕೈ ಮೇಲೆ. ಅವರು ತಮ್ಮ ಹುಡುಗಿಯಲ್ಲಿ ವಿಶೇಷವಾದ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಗಳ ಪುರುಷರು ಅದ್ಭುತವಾದ ಬಾಯ್‌ ಫ್ರೆಂಡ್‌ ಆಗಿರುತ್ತಾರೆ. ಸಂಬಂಧದಲ್ಲಿ ಸಾಮಾನ್ಯಕ್ಕಿಂತ ಬೇರೆಯಾದ ವಿಶಿಷ್ಟ ಅನುಭೂತಿ ಮೂಡಿಸುವುದು ಇವರ ವಿಶೇಷತೆ. ಈ ಗುಣ ಇವರನ್ನು ಅತ್ಯದ್ಭುತ ಎನಿಸುವಂತಹ ಸಂಗಾತಿಯನ್ನಾಗಿ ಮಾಡುತ್ತದೆ. ಇಂಥ ಪುರುಷರಲ್ಲಿ ಕೆಲವೇ ರಾಶಿಚಕ್ರಗಳಲ್ಲಿ ಕಾಣಬಹುದು. • ಮೇಷ ()ಮೇಷ ರಾಶಿಯ ಜನ ತಮ್ಮ ಹುಡುಗಿಯನ್ನು ( ) ಹೆಚ್ಚು ಹೊಗಳುವುದಿಲ್ಲ. ಪದೇ ಪದೆ ಫೋನ್‌ () ಮಾಡುವುದಿಲ್ಲ. ಮೆಸೇಜ್‌ ಮಾಡುತ್ತಲೂ ಇರುವುದಿಲ್ಲ. ಬದಲಿಗೆ ವಿಚಾರ ಮಾಡುವಂತಹ () ವಿಧಾನಗಳ ಮೂಲಕ ತಮ್ಮ ಪ್ರೀತಿಯನ್ನು () ವ್ಯಕ್ತಪಡಿಸುತ್ತಾರೆ. ನೀವು ಮೇಷ ರಾಶಿಯ ಪುರುಷನನ್ನು () ಪ್ರೀತಿ ಮಾಡುತ್ತಿದ್ದರೆ ಅವರು ನಿಮಗೆ ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುತ್ತಾರೆ. ನಿಮಗೆ ಯಾವಾಗ ಅಗತ್ಯವಿದೆಯೋ ಆಗೆಲ್ಲ ನೆರವಿಗೆ ಧಾವಿಸುತ್ತಾರೆ. ನಿಮ್ಮೊಂದಿಗೆ ಅತ್ಯಂತ ಸಮಾಧಾನದಿಂದ, ಖುಷಿಯಿಂದ ಬೆರೆಯುವ ಧೋರಣೆ ಹೊಂದಿರುತ್ತಾರೆ. ಸಹೋದ್ಯೋಗಿಗಳೊಂದಿಗೆ ಎಲ್ಲಾದರೂ ಹೊರಗೆ ಹೋಗುವುದಿದ್ದರೆ ನೀವೂ ಇದ್ದರೆ ಖುಷಿಪಡುತ್ತಾರೆ. ಸ್ನೇಹಿತರೊಂದಿಗೆ ಪಿಕ್‌ ನಿಕ್‌ ಹೋಗುವುದಾದರೂ ನೀವು ಇರಬೇಕೆಂಬ ಆಸೆ ಹೊಂದಿರುತ್ತಾರೆ. ಆಳವಾದ ಮಟ್ಟದಲ್ಲಿ ಬಾಂಧವ್ಯ ( ) ಹೊಂದಿರಬೇಕು ಎನ್ನುವುದು ಇವರ ಆಸೆ. ಈ ಐದು ರಾಶಿಯವರ ಲವ್ ತುಂಬಾ ಸ್ಟ್ರಾಂಗ್.., ನೀವು ಇವರಲ್ಲಿ ಒಬ್ಬರಾ ? • ಸಿಂಹ ()ಸಿಂಹ ರಾಶಿಯ ಪುರುಷರು ಅದ್ಭುತವಾದ ಸಂಗಾತಿಗಳು. ಇವರು ಸಂಗಾತಿಯೊಂದಿಗೆ () ಸಾಕಷ್ಟು ಮುಕ್ತವಾಗಿ () ಮಾತನಾಡುತ್ತಾರೆ. ತಮ್ಮ ಭಾವನೆ, ವಿಚಾರಗಳ ಬಗ್ಗೆ ಯಾವುದೇ ಹಿಂಜರಿಕೆ, ಮುಚ್ಚುಮರೆಯಿಲ್ಲದೇ ಮಾತನಾಡುತ್ತಾರೆ. ತಮಗೆ ಯಾರು ಇಷ್ಟವಾಗುತ್ತಾರೋ ಅವರಿಗೆ ಭಾರೀ ಮಹತ್ವ () ಕೊಡುತ್ತಾರೆ. ಮೇಲ್ನೋಟಕ್ಕೆ ಒರಟಾಗಿ, ಭಾವನೆರಹಿತವಾಗಿ ಗೋಚರಿಸಿದರೂ ಭಾವುಕತೆಯಲ್ಲಿ () ಸಂಗಾತಿಯನ್ನೂ ಮೀರಿಸುತ್ತಾರೆ. ಈ ಗುಣ ಪ್ರೀತಿಪಾತ್ರರು ಎಂದಿಗೂ ಇವರಿಂದ ದೂರ ಹೋಗದಂತೆ ನೋಡಿಕೊಳ್ಳುತ್ತದೆ. • ಧನು ()ಸಾಹಸ ಪ್ರವೃತ್ತಿಯ ಧನು ರಾಶಿಯ ಪುರುಷರು ಸಾಕಷ್ಟು ವಿನೋದದ () ಮನೋಭಾವ () ಹೊಂದಿರುತ್ತಾರೆ. ಅನುಬಂಧ ಹೆಚ್ಚಿಸಲು ವಿನೋದದ ಬುದ್ಧಿಯೂ ಕೆಲಸ ಮಾಡುತ್ತದೆ. ಧನು ರಾಶಿಯ ಪುರುಷರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ತಮ್ಮ ಸಂಗಾತಿಯನ್ನು ಎಂದಿಗೂ ನಗಿಸುತ್ತಲೇ ಇರುತ್ತಾರೆ. ಅವರಿಗೆ ಬೇಸರವಾಗಲು () ಎಂದಿಗೂ ಅವಕಾಶ ನೀಡುವುದಿಲ್ಲ. ಕೆಟ್ಟ ಸಮಯದಲ್ಲಿ ( ) ಇವರು ಜತೆಗಿರುತ್ತಾರೆ. ಸಂಗಾತಿಯಲ್ಲಿ ಸಂತಸ () ಮೂಡುವಂತೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ತಮ್ಮನ್ನೂ ಛೇಡಿಸಿಕೊಂಡು ನಗುವುದು ಇವರ ದೊಡ್ಡ ಗುಣ. ಇವರಿಲ್ಲ ಎಂದಾದರೆ ಇವರ ಸಂಗಾತಿ ಮಿಸ್‌ ಮಾಡಿಕೊಳ್ಳುವುದು ಗ್ಯಾರೆಂಟಿ. : ಈ ರಾಶಿಯವರು ಪ್ರಣಯದಲ್ಲಿ ಪರಿಣತರು • ಮೀನ ()ಮೀನ ರಾಶಿಯ ಪುರುಷರು ತಮ್ಮ ಸಂಗಾತಿಗೆ ಭಾವನಾತ್ಮಕವಾಗಿ ಎಂದಿಗೂ ಲಭ್ಯವಾಗಿರುತ್ತಾರೆ. ಇವರು ಸಂಗಾತಿ ಜತೆಗೆ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಭಾವುಕರಾಗಿ () ವರ್ತಿಸುತ್ತಾರೆ. ಇವರ ಲವ್‌ ಲೈಫ್‌ ( ) ಅದ್ಭುತವಾಗಿರುತ್ತದೆ. ಸಂಗಾತಿಗೆ ತಮ್ಮ ಹಿನ್ನೆಲೆ, ಸಮಸ್ಯೆಗಳು, ತಮ್ಮೊಳಗಿನ ತಲ್ಲಣಗಳು, ಅನಿಸಿಕೆ, ಕನಸುಗಳು ಹಾಗೂ ಆಸೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು () ಹಿಂದೇಟು ಹಾಕುವುದಿಲ್ಲ.