ಈ ರತ್ನ ಧರಿಸಿದ್ರೆ ನೀವು ಹಿಡಿದ ಕೆಲಸಗಳಲ್ಲೆಲ್ಲಾ ಯಶಸ್ಸು ಗ್ಯಾರಂಟಿ ಜ್ಯೋತಿಷ್ಯದ ಪ್ರಕಾರ, ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗೆ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಜ್ಯೋತಿಷಿಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲ ಸ್ಥಾನದಲ್ಲಿದ್ದರೆ, ಅವನು ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತೆ. ಹಾಗಾಗಿ ಇಲ್ಲಿ ಹೇಳಿರೋ ರತ್ನ ಧರಿಸಿ, ನಿಮ್ಮ ಜೀವನದಲ್ಲಿ ಯಶಸ್ಸು ಕಾಣಿ. ಜ್ಯೋತಿಷ್ಯದ ಪ್ರಕಾರ, ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗೆ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಜ್ಯೋತಿಷಿಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲ ಸ್ಥಾನದಲ್ಲಿದ್ದರೆ, ಅವನು ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತೆ. ಹಾಗಾಗಿ ಇಲ್ಲಿ ಹೇಳಿರೋ ರತ್ನ ಧರಿಸಿ, ನಿಮ್ಮ ಜೀವನದಲ್ಲಿ ಯಶಸ್ಸು ಕಾಣಿ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸೋದು ಯಾವಾಗಲೂ ಅಪಾಯಕಾರಿ.ವ್ಯವಹಾರವು() ಸರಿಯಾಗಿ ನಡೆಯುತ್ತಾ ಅಥವಾ ಇಲ್ವಾ, ಅದು ಹೇಗೆ ಮತ್ತು ಯಾವಾಗ ನಡೆಯುತ್ತೆ ಎಂಬಂತಹ ಅನೇಕ ಪ್ರಶ್ನೆ ಮತ್ತು ಭಯಗಳು ಇದರಲ್ಲಿ ಒಳಗೊಂಡಿವೆ. ಅದರಲ್ಲಿ ಹೂಡಿಕೆ ಮಾಡಿದ ಬಂಡವಾಳ ಮುಳುಗುತ್ತದೆಯೇ?. ಇದು ಎಷ್ಟು ಲಾಭವನ್ನು ಗಳಿಸುತ್ತೆ ಮತ್ತು ಎಷ್ಟು ಲಾಸ್ ಆಗಬಹುದು?. ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಯಾವಾಗಲೂ ಕಾಡುತ್ತವೆ. ಜ್ಯೋತಿಷ್ಯದಲ್ಲಿ ಎಲ್ಲಾ ರೀತಿಯ ಸಮಸ್ಯೆಗೆ ಪರಿಹಾರಗಳನ್ನು ಹೇಳಲಾಗುತ್ತೆ. ಜ್ಯೋತಿಷಿಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲ ಸ್ಥಾನದಲ್ಲಿದ್ದರೆ, ಅವನು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತೆ . ಆದ್ದರಿಂದ ಜ್ಯೋತಿಷಿಗಳು ಸುನೇಲ ರತ್ನದ ಕಲ್ಲುಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ. ವೃತ್ತಿಜೀವನದ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಗೋಲ್ಡನ್ ಜೆಮ್ ಸ್ಟೋನ್( ) ಬಹಳ ಸಹಾಯಕವಾಗಿದೆ. ಪುಖ್ರಾಜ್ ರತ್ನದ ಕಲ್ಲು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಲಭ್ಯವಿದೆ, ಈ ಕಾರಣದಿಂದಾಗಿ ಅನೇಕ ಜನರಿಗೆ ಆ ರತ್ನವನ್ನು ಖರೀದಿಸಲು ಸಾಧ್ಯವಾಗೋದಿಲ್ಲ, ಅಂತಹ ಜನರು ಅದರ ಬದಲಿಗೆ ಸುನೇಲ ರತ್ನದ( ) ಕಲ್ಲುಗಳನ್ನು ಧರಿಸಬಹುದು. ಇದನ್ನು ಪಂಚಧಾತುವಿನಲ್ಲಿ ಧರಿಸಬೇಕು. ಈ ರತ್ನವನ್ನು ಧರಿಸುವುದರ ಪ್ರಯೋಜನಗಳು ಹೀಗಿವೆ -ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ( )ಯಶಸ್ಸನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.ಇದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಹಾಯ ಮಾಡುತ್ತೆ.ಹಣಕಾಸಿನ ನಿರ್ಬಂಧಗಳನ್ನು ತೆಗೆದುಹಾಕಲು ಸುನೇಲ ರತ್ನದ ಕಲ್ಲುಗಳು ಸಹಾಯ ಮಾಡುತ್ತೆ.ಸುನೇಲ ರತ್ನದ ಕಲ್ಲುಗಳನ್ನು ಧರಿಸೋದ್ರಿಂದ ಇದು ಕೆಲಸವನ್ನು ಉತ್ತೇಜಿಸುತ್ತೆ. ಈ ರತ್ನವನ್ನು ಧರಿಸೋದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತೆ.ಮಾನಸಿಕಒತ್ತಡವನ್ನು( ) ನಿವಾರಿಸಲು ಸಹಾಯ ಮಾಡುತ್ತೆ.ಉನ್ನತ ಶಿಕ್ಷಣ ಪಡೆಯುವ ಆಸೆ ನಿಮಗಿದ್ದರೆ ಸುನೇಲ ರತ್ನದ ಕಲ್ಲುಗಳನ್ನು ಧಾರಣೆ ಮಾಡಿ ನೋಡಿ. ಸುನೇಲ ರತ್ನದ ಕಲ್ಲುಗಳನ್ನು ಧಾರಣೆ ಮಾಡೋದು ಹೇಗೆ?ಜ್ಯೋತಿಷ್ಯದ ಪ್ರಕಾರ, ಗುರುವಾರ ಬಲಗೈ ತೋರುಬೆರಳಿನಲ್ಲಿ ಈ ರತ್ನವನ್ನು ಧರಿಸೋದು ಪ್ರಯೋಜನಕಾರಿ. ಇದನ್ನು ಪಂಚಧಾತುವಿನಲ್ಲಿ ಧರಿಸಬೇಕು. ನೀವು ಅದನ್ನು ತಪ್ಪಿಯೂ ಮುತ್ತುಗಳೊಂದಿಗೆ() ಧರಿಸಬಾರದು. ಈ ರತ್ನವು ಧನು ಮತ್ತು ಮೀನ ರಾಶಿಯವರಿಗೆ ತುಂಬಾ ಅದೃಷ್ಟಶಾಲಿಯಾಗಿದೆ.