ಹುಲ್ಲು ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ಜೀವನದ ಸಮಸ್ಯೆಗಳನ್ನ ನಿವಾರಿಸಿ ಬುಧವಾರವು ಗಣೇಶನಿಗೆ ಸಮರ್ಪಿತವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಅವನು ನಮ್ಮ ಎಲ್ಲಾ ದುಃಖಗಳನ್ನು ತೆಗೆದುಹಾಕುತ್ತಾನೆ ಮತ್ತು ಸಮೃದ್ಧಿಯನ್ನು ತರುತ್ತಾನೆ. ಈ ಕಾರಣಕ್ಕಾಗಿಯೇ ಅವನಿಗೆ ಸಿದ್ಧಿ ಅಥವಾ ಸಮೃದ್ಧಿ ಮತ್ತು ಸಾಧನೆಯ ದೇವರು ಎಂಬ ಬಿರುದನ್ನು ಸಹ ನೀಡಲಾಗುತ್ತೆ. ಬುಧವಾರವು ಗಣೇಶನಿಗೆ ಸಮರ್ಪಿತವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಅವನು ನಮ್ಮ ಎಲ್ಲಾ ದುಃಖಗಳನ್ನು ತೆಗೆದುಹಾಕುತ್ತಾನೆ ಮತ್ತು ಸಮೃದ್ಧಿಯನ್ನು ತರುತ್ತಾನೆ. ಈ ಕಾರಣಕ್ಕಾಗಿಯೇ ಅವನಿಗೆ ಸಿದ್ಧಿ ಅಥವಾ ಸಮೃದ್ಧಿ ಮತ್ತು ಸಾಧನೆಯ ದೇವರು ಎಂಬ ಬಿರುದನ್ನು ಸಹ ನೀಡಲಾಗುತ್ತೆ. ಒಬ್ಬ ವ್ಯಕ್ತಿಯು ಯಾವುದೇ ಕಾಯಿಲೆ, ಬಡತನ ಅಥವಾ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ, ಅಂತಹ ಸಮಸ್ಯೆಗಳನ್ನು ತೊಡೆದುಹಾಕಲು ಗಣೇಶನನ್ನು ಭಕ್ತಿಯಿಂದ ಪೂಜಿಸಿದರೆ ಉತ್ತಮ ಫಲ ದೊರೆಯುತ್ತದೆ. ಇಲ್ಲಿ ಬುಧವಾರ ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳ ಬಗ್ಗೆ ಹೇಳಲಾಗಿದೆ, ಅದರ ಮೂಲಕ ನೀವು ಗಣೇಶನನ್ನು ಮೆಚ್ಚಿಸಬಹುದು, ಅವರ ಆಶೀರ್ವಾದವನ್ನು ಪಡೆಯಬಹುದು ಮತ್ತು ನಿಮ್ಮ ಜೀವನದ ಎಲ್ಲಾ ದುಃಖಗಳನ್ನು ತೊಡೆದುಹಾಕಬಹುದು. ಹಾಗೆಯೇ, ಬುಧ ದೋಷವನ್ನು ತೆಗೆದುಹಾಕುವ ಪರಿಹಾರಗಳನ್ನು ಸಹ ಹೇಳಲಾಗಿದೆ. ಬುಧವಾರ ಈ ಕ್ರಮಗಳನ್ನು ಮಾಡೋದರಿಂದ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ( ) ಹೆಚ್ಚಾಗುತ್ತೆ. ಜೀವನದಲ್ಲಿನ ಅಡೆತಡೆಗಳು ಮತ್ತು ಸವಾಲುಗಳನ್ನು ತೊಡೆದುಹಾಕಲು ಗಣೇಶನಿಗೆ ( ) ಸಿಂಧೂರವನ್ನು ಅರ್ಪಿಸಿ. ಇದನ್ನು ಮಾಡೋದರಿಂದ, ನಿಮ್ಮ ಜೀವನದ ಎಲ್ಲಾ ತೊಂದರೆಗಳು ( ) ನಿವಾರಣೆಯಾಗುತ್ತವೆ. ಗಣೇಶನು ಬೇಗನೆ ಬೇಡಿಕೆ ಈಡೇರಿಸುತ್ತಾನೆ ಎಂದು ಹೇಳಲಾಗುತ್ತೆ, ಹಾಗಾಗಿ ಗಣೇಶನ ದೇವಸ್ಥಾನಕ್ಕೆ ಹೋಗಿ ಪೂಜಿಸೋದರಿಂದ ಜೀವನದಲ್ಲಿ ಸಮೃದ್ಧಿಯನ್ನು ಸಾಧಿಸಬಹುದು. ಹಾಗಾಗಿ ಬುಧವಾರ ತಪ್ಪದೇ ಗಣೇಶನ ದೇವಸ್ಥಾನ ಭೇಟಿ ನೀಡಿ, ಆತನ ಆಶೀರ್ವಾದ ಪಡೆಯಿರಿ. ಹುಲ್ಲು ಗರಿಕೆ ( ) ಗಣೇಶನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಗಣೇಶನಿಗೆ ಗರಿಕೆ ಹುಲ್ಲು ಅರ್ಪಿಸೋದು ನಿಮಗೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತೆ. ಗಣೇಶ ಇದರಿಂದ ಸಂತುಷ್ಟನಾಗಿ ನಿಮ್ಮ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಆಶೀರ್ವದಿಸುತ್ತಾನೆ. ನಿಮ್ಮ ಮನಸ್ಸಿನಲ್ಲಿ ಯಾವುದೇ ಆಸೆ ಇದ್ದರೆ, ಬುಧವಾರ ಯಾವುದೇ ಗಣೇಶ ದೇವಸ್ಥಾನಕ್ಕೆ ಹೋಗಿ ದೇವರಿಗೆ ಬೆಲ್ಲವನ್ನು ಅರ್ಪಿಸಿ. ಇದನ್ನು ಮಾಡೋದರಿಂದ, ನಿಮ್ಮ ಆಸೆ ಖಂಡಿತವಾಗಿಯೂ ಈಡೇರುತ್ತೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಲಾಗಿದೆ.. ಕೆಲಸದ ಸ್ಥಳ ಮತ್ತು ವೃತ್ತಿಪರ ಜೀವನದಲ್ಲಿನ ಅಡೆತಡೆಗಳನ್ನು ( ) ತೊಡೆದುಹಾಕಲು ಗಣೇಶ ರುದ್ರಾಕ್ಷಿಯನ್ನು ಧರಿಸಿ.ವೃತ್ತಿಯಲ್ಲಿನ ಎಲ್ಲಾ ಸವಾಲುಗಳನ್ನು ತೊಡೆದುಹಾಕಲು ಇದು ತುಂಬಾ ಸಹಾಯಕವಾಗಿದೆ. ಗಣೇಶ ನಿಮ್ಮ ಕಷ್ಟವನ್ನೆಲ್ಲಾ ಹೋಗಲಾಡಿಸುವನು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಲು ( ) ಮತ್ತು ಉತ್ತಮ ಅಂಕಗಳನ್ನು ಪಡೆಯಲು ಬಯಸೋದಾದ್ರೆ, ಬುಧವಾರ ಗಣೇಶನಿಗೆ ಹೆಸರುಕಾಳು ಲಡ್ಡುವನ್ನು ಅರ್ಪಿಸಬಹುದು. ಹೀಗೆ ಮಾಡೋದ್ರಿಂದ ವಿದ್ಯಾರ್ಥಿಗಳ ಮೇಲೆ ಗಣೇಶನ ಅನುಗ್ರಹ ಹೆಚ್ಚಾಗುತ್ತೆ. ನಿಮ್ಮ ಜೀವನದ ವಿವಿಧ ಅಂಶಗಳಲ್ಲಿ ಯಶಸ್ಸನ್ನು ಸಾಧಿಸಲು ಬುಧವಾರ ಹಸುವಿಗೆ ಹಸಿರು ಮೇವನ್ನು ನೀಡಿ. ಪ್ರಾಣಿಗಳಿಗೆ ಆಹಾರ ನೀಡೋದು ಅತ್ಯತ್ತಮ ಕೆಲಸ ಅದರಲ್ಲೂ ಹಸುಗೆ ಮೇವು ನೀಡೋದ್ರಿಂದ ಗಣೇಶ ಸಂತುಷ್ಟನಾಗುತ್ತಾನೆ.