ಶನಿವಾರ ನಿಮ್ಮ ಚಪ್ಪಲಿ ಕಳೆದು ಹೋದರೆ ಏನರ್ಥ ಗೊತ್ತಾ? ಚಪ್ಪಲಿ ಯಾವಾಗಲೂ ಮನೆಯ ಹೊರಗಿರುತ್ತದೆ. ಆದರೆ ಅದು ಕಳವಾದರೆ ಏನು ಶಕುನ, ಎಲ್ಲಿ ಕಳುವಾದರೆ ಲಾಭ, ಶುಭಶಕುನವಾಗಬೇಕಿದ್ದರೆ ಎಂಥ ಚಪ್ಪಲಿ ಧರಿಸಬೇಕು, ಎಂಬದನ್ನೆಲ್ಲ ಇಲ್ಲಿ ಹೇಳಲಾಗಿದೆ ಸಾಮಾನ್ಯವಾಗಿ ನಾವು ಪಾದರಕ್ಷೆಗಳನ್ನು ಅಶುಭವೆಂದೇ ಕಾಣುತ್ತೇವೆ. ಆದರೆ ನಿಜ ಹಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಅಂದಂದಿನ ಶಕುನಗಳು ಪಾದರಕ್ಷೆ ಅಥವಾ ಚಪ್ಪಲಿಯ ಮೂಲಕವೂ ನಿಮಗೆ ಬರುತ್ತವೆ. ಪಾದರಕ್ಷೆಯನ್ನು ಧರಿಸದೆ ಯಾರೂ ಓಡಾಡಲು ಸಾಧ್ಯವಿಲ್ಲ. ಆದರೆ ನಮ್ಮ ಪಾದಗಳನ್ನು ಕಾಪಾಡುವ ಚಪ್ಪಲಿಗಳು ಯಾವಾಗಲೂ ಮನೆಯ ಹೊರಗೇ ಇರುತ್ತವೆ. ತಮ್ಮ ಚಪ್ಪಲಿಗಳನ್ನು ದೇವಸ್ಥಾನದಲ್ಲಿ ಕಳೆದುಕೊಳ್ಳದವರೇ ಇಲ್ಲ ಎನ್ನಬಹುದು. ಹಾಗಿದ್ದರೆ ಇವೆಲ್ಲಾ ನಮ್ಮ ಬದುಕಿನಲ್ಲಿ ಏನನ್ನು ಸೂಚಿಸುತ್ತವೆ? ಚಪ್ಪಲಿಗಳು ಏನು ಹೇಳುತ್ತವೆ ಎಂಬುದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಇಲ್ಲಿದೆ ನೋಡಿ. ಪದೇ ಪದೇ ನಿಮ್ಮನ್ನು ಕಾಗೆ ಅಟ್ಟಾಡಿಸಿ ಕುಕ್ಕುತ್ತಿದ್ದರೆ ಅದು ದೊಡ್ಡ ಸೂಚನೆ; ಎಚ್ಚೆತ್ತುಕೊಳ್ಳಿ- ಮನೆಯಿಂದಾಚೆಗೆ ಹೊರಡುವಾಗ ಚಪ್ಪಲಿಗಳು ಕಂಡರೆ ದೋಷವಿಲ್ಲ. ಆದರೆ ಒಂಟಿ ಚಪ್ಪಲಿ ಕಂಡರೆ ಅಶುಭ. ನಿಮ್ಮ ಚಪ್ಪಲಿ ಒಂದೇ ಇದ್ದು, ಇನ್ನೊಂದನ್ನು ಹುಡುಕುವಂತೆ ಆದರೂ ಅದೂ ಅಶುಭ.- ಮನೆಯಲ್ಲಿ ಚಪ್ಪಲಿ ಸ್ಟಾಂಡ್ ತುಳಸಿ ಕಟ್ಟೆಗಿಂತ ಎತ್ತರವಾಗಿ ಇರಕೂಡದು. ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಸ್ಟಾಂಡ್ ಇರಬಾರದು. ಹೊಸ್ತಿಲಿನ ಮುಂದೆ ಸದಾ ಚಪ್ಪಲಿಗಳನ್ನು ಹರಡಿದಂತೆ ಇಡಬಾರದು.- ಚಪ್ಪಲಿ ಸ್ಟಾಂಡ್‌ನಲ್ಲಿ ಪುಸ್ತಕ, ಪತ್ರಿಕೆ, ಊಟದ ತಟ್ಟೆ ಬಟ್ಟಲು, ಕಾರಿನ ಕೀ ಇತ್ಯಾದಿಗಳನ್ನು ಇಡಬೇಡಿ. ಶ್ರಾವಣ ಮಾಸದಲ್ಲಿ ಮಾಂಸ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ? ಇಲ್ಲಿದೆ ವೈಜ್ಞಾನಿಕ ಕಾರಣ!