: ದುರದೃಷ್ಟ ಓಡಿಸ್ಬೇಕಾ? ಇಲ್ಲಿವೆ ಪರಿಹಾರ ಮಾರ್ಗಗಳು ಒಬ್ಬ ವ್ಯಕ್ತಿಯು ನಿರಂತರವಾಗಿ ವೈಫಲ್ಯವನ್ನು ಎದುರಿಸಿದಾಗ ನಾವು ಅದನ್ನು ದುರಾದೃಷ್ಟ ಎಂದು ಕರೆಯುತ್ತೇವೆ. ದುರದೃಷ್ಟದ ಕಾರಣದಿಂದಾಗಿ ಜೀವನ ಕೆಟ್ಟದೆನಿಸಲಾರಂಭಿಸುತ್ತದೆ.. ಆದ್ದರಿಂದ ಜೀವನವನ್ನು ಆನಂದಿಸಲು ದುರದೃಷ್ಟವನ್ನು ತೊಡೆದು ಹಾಕಲು ತಿಳಿದುಕೊಳ್ಳುವುದು ಬಹಳ ಅವಶ್ಯಕ. ಇದಕ್ಕಾಗಿ ಪರಿಹಾರ ಮಾರ್ಗಗಳು ಜ್ಯೋತಿಷ್ಯದಲ್ಲಿವೆ. ಸರಿಯಾದ ಕೆಲಸವನ್ನು ಮಾಡಿದರೂ ವ್ಯಕ್ತಿಯು ಬಯಸಿದ ಫಲಿತಾಂಶಗಳನ್ನು ಪಡೆಯದಿದ್ದರೆ ಅಥವಾ ವೈಫಲ್ಯವನ್ನು ಎದುರಿಸಿದರೆ ಅದನ್ನು ದುರದೃಷ್ಟ ಎಂದು ಕರೆಯಲಾಗುತ್ತದೆ. ಎಷ್ಟೇ ಪ್ರಯತ್ನಿಸಿದರೂ ಸೋಲೇ ಸಿದ್ಧಿಯಾಗುತ್ತಿದ್ದರೆ ಅದು ದುರದೃಷ್ಟವಲ್ಲದೆ ಮತ್ತೇನು?ದುರದೃಷ್ಟಕ್ಕೆ ನಮ್ಮ ಹಿಂದಿನ ಜನ್ಮದ ಕರ್ಮಗಳೇ ಕಾರಣ. ಆದರೆ ಹಾಗಂದುಕೊಂಡು ಬಂದದ್ದನ್ನೇ ಅನುಭವಿಸುತ್ತಾ ಸುಮ್ಮನೆ ಕೂರಬಾರದು. ಏಕೆಂದರೆ, ಈ ಸಮಸ್ಯೆಯಿಂದ ಹೊರಬರುವುದು ಅಸಾಧ್ಯವಲ್ಲ. ಸಮಸ್ಯೆ ಇದೆ ಎಂದ ಮೇಲೆ ಅದಕ್ಕೆ ಏನಾದರೂ ಪರಿಹಾರಗಳು ಇರಲೇಬೇಕು. ಆದ್ದರಿಂದ ದುರಾದೃಷ್ಟಕ್ಕೆ ಹೆದರಬೇಡಿ, ನಿಮ್ಮ ದುರಾದೃಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ ಮತ್ತು ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ದುರದೃಷ್ಟ ಓಡಿಸುವ ಪರಿಹಾರ ಮಾರ್ಗಗಳು