: ಈ ದಿನ ಈ ವಸ್ತುಗಳ ದಾನದಿಂದ ದುಪ್ಪಟ್ಟು ಸಮೃದ್ಧಿ ನಿಮ್ಮದಾಗುತ್ತೆ! ಗುರುವಾರದಂದು ದಾನ ಮಾಡುವುದರಿಂದ ವಿಷ್ಣುವಿನ ವಿಶೇಷ ಆಶೀರ್ವಾದ ಸಿಗುತ್ತದೆ. ಗುರುವಾರದ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು, ಅದರಿಂದ ಏನೆಲ್ಲ ಲಾಭಗಳಿವೆ ತಿಳಿಯೋಣ. ಭಗವಾನ್ ವಿಷ್ಣುವು ಈ ಪ್ರಪಂಚದ ರಕ್ಷಕ. ಅವನೇ ಈ ಬ್ರಹ್ಮಾಂಡದ ಸೃಷ್ಟಿಕರ್ತ. ಗುರುವಾರ ಭಗವಾನ್ ಶ್ರೀ ಹರಿವಿಷ್ಣು ಮತ್ತು ದೇವಗುರು ಬೃಹಸ್ಪತಿಗೆ ಅತ್ಯಂತ ಪ್ರಿಯವಾದದ್ದು. ದೇವಗುರು ಎಂಬ ಬಿರುದು ಪಡೆದಿರುವ ಕಾರಣ ಗುರುಗ್ರಹವು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಶುಭಗ್ರಹವಾಗಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಗುರುವಾರ ಇವರಿಬ್ಬರನ್ನು ಪೂಜಿಸುವುದು, ಗುರು ಗ್ರಹ ದೋಷ ಕಳೆದುಕೊಂಡು ಬಲ ಹೆಚ್ಚಿಸುವ ಕಾರ್ಯ ಮಾಡುವುದರಿಂದ ವಿಶೇಷ ಲಾಭಗಳು ದಕ್ಕಲಿವೆ. ಗುರುವಾರದ ದಿನ ಮಾಡುವ ಕೆಲ ವಸ್ತುಗಳ ದಾನ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಗುರುವಾರ ದಾನ ಮಾಡುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ. ಗುರುವಾರದ ಪೂಜೆಗುರುವಾರ ವಿಷ್ಣು ಪೂಜೆಗೆ ಮೀಸಲಾಗಿದೆ, ಗುರುವಾರದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಗುರುವಾರದಂದು ಉಪವಾಸ ಆಚರಿಸುವವರು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ನಂಬಿಕೆಯ ಪ್ರಕಾರ, ಗುರುವಾರದಂದು ನೀವು ಭಗವಾನ್ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಕುಂಕುಮ ಮತ್ತು 1.25 ಕೆಜಿ ಗ್ರಾಂ ಇಟ್ಟು ವಿಷ್ಣು ಸಹಸ್ತ್ರನಾಮವನ್ನು ಜಪಿಸಿದರೆ, ನೀವು ಬಯಸಿದ ಫಲವನ್ನು ಪಡೆಯುತ್ತೀರಿ. 2023: ಶನಿ ದೋಷ ಕಳೆದುಕೊಳ್ಳೋಕೆ ಇದೇ ಸುದಿನ, ಇಷ್ಟ್ ಮಾಡಿ ಸಾಕು.. ಗುರುವಾರ ಏನು ದಾನ ಮಾಡಬೇಕು?