ದಿನ ನೋಡಿ ತಲೆ ಸ್ನಾನ ಮಾಡಿ, ನಿಮ್ಮ ಕಾಲ ಬಳಿಯೇ ಬಿದ್ದಿರುತ್ತಾಳೆ ಲಕ್ಷ್ಮಿ! ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಹಣ ನಷ್ಟ ತಪ್ಪಿಸಲು ಮತ್ತು ಶ್ರೀಮಂತರಾಗಲು ಬಯಸೋದಾದ್ರೆ, ಕೂದಲು ಕಟ್ ಮಾಡೋದು, ತೊಳೆಯೋದು ಇತ್ಯಾದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಯಾವ ದಿನದಂದು ಹೇರ್ ವಾಶ್ ಮಾಡಿದ್ರೆ ಶ್ರೀಮಂತರಾಗುತ್ತೀರಿ ಎಂದು ಇಲ್ಲಿ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಹಣ ನಷ್ಟ ತಪ್ಪಿಸಲು ಮತ್ತು ಶ್ರೀಮಂತರಾಗಲು ಬಯಸೋದಾದ್ರೆ, ಕೂದಲು ಕಟ್ ಮಾಡೋದು, ತೊಳೆಯೋದು ಇತ್ಯಾದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀವು ಯಾವ ದಿನದಂದು ಹೇರ್ ವಾಶ್ ಮಾಡಿದ್ರೆ ಶ್ರೀಮಂತರಾಗುತ್ತೀರಿ ಎಂದು ಇಲ್ಲಿ ತಿಳಿಯೋಣ. ಯಾರಿಗಾದರೂಶ್ರೀಮಂತರಾಗುವ () ಅವಕಾಶ ದೊರೆತರೆ, ಈ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ? ಜ್ಯೋತಿಷ್ಯ ಶಾಸ್ತ್ರದಲ್ಲಿ, ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ ಅಂತಹ ಒಂದು ಶ್ರೀಮಂತರಾಗೋ ತಂತ್ರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದ್ರೆ ನೀವು ಶ್ರೀಮಂತರಾಗುವ ಅಂತಹ ಒಂದು ತಂತ್ರದ ಬಗ್ಗೆ ತಿಳಿದುಕೊಳ್ಳೋಣ. ಕೂದಲು ಕತ್ತರಿಸೋದು ( ), ಕಟ್ಟುವುದು ಮತ್ತು ತೊಳೆಯುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದಲ್ಲ ಒಂದು ದಿನವಿದೆ. ನಿಮ್ಮ ಕೂದಲನ್ನು ಯಾವ ದಿನದಂದು ತೊಳೆಯಬೇಕು ಎಂದು ತಿಳಿದುಕೊಳ್ಳಿ, ಇದರಿಂದ ಹಣ ಹೇಗೆ ನಿಮ್ಮತ್ರ ಬರುತ್ತೆ ಅಂತ ನೀವೇ ನೋಡಿ. ಇಲ್ಲಿದೆ ಆ ಉಪಾಯದ ಬಗ್ಗೆ ಮಾಹಿತಿ. ಬುಧವಾರ ನಿಮ್ಮ ಕೂದಲನ್ನು ತೊಳೆಯಬೇಡಿ ( ) ಮದುವೆಯಾಗದ ಹುಡುಗಿಯರು ಕೂದಲನ್ನು ತೊಳೆಯುವ ಮೊದಲು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಈ ಸಂಗತಿ ತಿಳಿದುಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮದುವೆಯಾಗದ ಹುಡುಗಿಯರು ಬುಧವಾರ ತಮ್ಮ ಕೂದಲನ್ನು ತೊಳೆಯಬಾರದು. ಈ ದಿನ ಕೂದಲನ್ನು ತೊಳೆದರೆ, ಹಣ ಕಳೆದುಕೊಳ್ಳುತ್ತೀರಿ ಎಂದು ಹೇಳಲಾಗುತ್ತೆ. ಇದರೊಂದಿಗೆ, ಜೀವನದಲ್ಲಿ ಏರಿಳಿತಗಳು ಉಂಟಾಗುತ್ತೆ, ಹುಷಾರ್. ಶುಕ್ರವಾರ ನಿಮ್ಮ ಕೂದಲನ್ನು ತೊಳೆಯಿರಿ ಶುಕ್ರವಾರಲಕ್ಷ್ಮಿದೇವಿಯ ( ) ದಿನ ಎಂದು ಹೇಳಲಾಗುತ್ತೆ. ಈ ದಿನದಂದು ಕೂದಲು ತೊಳೆಯುವುದನ್ನು ಶುಭವೆಂದು ಪರಿಗಣಿಸಲಾಗುತ್ತೆ. ಶುಕ್ರವಾರ ಕೂದಲನ್ನು ತೊಳೆಯುವುದು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.. ಶುಕ್ರವಾರದ ದಿನ() ನೀವು ನಿಮ್ಮ ಕೂದಲನ್ನು ತೊಳೆದರೆ, ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಹೆಚ್ಚು ಸುರಿಯುತ್ತೆ. ಹಾಗಾಗಿ ಶುಕ್ರವಾರ ನಿಮ್ಮ ಕೂದಲನ್ನು ತೊಳೆಯೋದು ಶುಭ. ಈ ದಿನ ಕೂದಲು ತೊಳೆದು, ಸ್ನಾನ ಮಾಡಿ, ದೇವಿಯ ಸ್ತುತಿ ಮಾಡೋದು ಉತ್ತಮ. ಉಪವಾಸದ ದಿನದಂದು( ) ಕೂದಲನ್ನು ತೊಳೆಯಬೇಡಿ ಉಪವಾಸದ ವೃತಾಚರಣೆ ತೆಗೆದುಕೊಂಡಿದ್ದರೆ, ಉಪವಾಸದ ದಿನದಂದು ಕೂದಲನ್ನು ತೊಳೆಯಬೇಡಿ. ಉಪವಾಸಕ್ಕೆ ಒಂದು ದಿನ ಮೊದಲು ಕೂದಲನ್ನು ತೊಳೆಯಿರಿ. ಋತುಚಕ್ರದ ಕಾರಣದಿಂದಾಗಿ ಉಪವಾಸದ ದಿನದಂದು ನೀವು ಕೂದಲನ್ನು ತೊಳೆಯಬೇಕಾದರೆ, ಹಸಿ ಹಾಲನ್ನು ನೀರಿನಲ್ಲಿ ಬೆರೆಸಿ, ಆ ನೀರಿನಿಂದ ಮಾತ್ರ ಕೂದಲನ್ನು ತೊಳೆಯಿರಿ. ಇದರಿಂದ ಲಾಭವಾಗಲಿದೆ. ಗುರುವಾರ() ಕೂದಲನ್ನು ತೊಳೆಯಬೇಡಿ. ಗುರುವಾರವೂ ಕೂದಲನ್ನು ತೊಳೆಯಬಾರದು, ಇದು ಹಣವನ್ನು ಕಳೆದುಕೊಳ್ಳಲು ಕಾರಣವಾಗುತ್ತೆ. ನೀವು ಗುರುವಾರ ಕೂದಲನ್ನು ತೊಳೆದರೆ, ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ಹಾಗಾಗಿ ತಪ್ಪಿಯೂ ಗುರುವಾರದಂದು ಕೂದಲು ತೊಳೆಯಬೇಡಿ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಹಾಗೆಯೇ ಸಾಧ್ಯವಾದರೆ, ಶನಿವಾರದಂದು() ಎಣ್ಣೆ ಹಚ್ಚಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತೆ. ನೀವು ಈ ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಿದ್ರೆ, ಮನೆಯಲ್ಲಿ ಎಂದಿಗೂ ಹಣದ ನಷ್ಟವಾಗೋದಿಲ್ಲ ಎಂದು ಹೇಳಲಾಗುತ್ತೆ. ಇವೆಲ್ಲಾ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ ಪರಿಹಾರಗಳು. ಇವುಗಳನ್ನು ಪಾಲಿಸುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು.