ನಿರುದ್ಯೋಗ ಸಮಸ್ಯೆಯೇ? ಈ ರೀತಿ ಮಾಡಿದ್ರೆ ಬಯಸಿದ ಉದ್ಯೋಗ ಪಕ್ಕಾ! ಉದ್ಯೋಗವನ್ನು ಪಡೆಯುವುದು ಅಷ್ಟು ಸುಲಭವಲ್ಲ, ವಿಶೇಷವಾಗಿ ಇಂದು ಪ್ರತಿಯೊಬ್ಬರೂ ತುಂಬಾ ಸ್ಪರ್ಧಾತ್ಮಕರಾಗಿರುವಾಗ ಬಯಸಿದ ಉದ್ಯೋಗ ಹೋಗಲಿ, ಯಾವುದೋ ಒಂದು ಕೆಲಸ ಸಿಕ್ಕರೂ ಸಾಕು ಎಂದುಕೊಂಡರೂ ಸಿಗೋದಿಲ್ಲ. ನಿರುದ್ಯೋಗದಿಂದ ಕಂಗಾಲಾಗಿದ್ದರೆ ಈ ಜ್ಯೋತಿಷ್ಯದ ಕ್ರಮಗಳನ್ನು ಅನುಸರಿಸಿ. ನಿಮಗೆ ಶೀಘ್ರದಲ್ಲೇ ಕೆಲಸ ಸಿಗುತ್ತದೆ. ಬಯಸಿದ ಉದ್ಯೋಗವನ್ನು ಪಡೆಯುವುದು ಪ್ರತಿಯೊಬ್ಬರ ಕನಸು. ಆದರೆ, ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಪಕ ಜಗತ್ತಿನಲ್ಲಿ ಜನರು ತಮ್ಮ ಇಚ್ಛೆಯಂತೆ ಉದ್ಯೋಗಗಳನ್ನು ಹುಡುಕುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಗಲು ರಾತ್ರಿ ಕೆಲಸಕ್ಕಾಗಿ ಬೇಟೆಯಾಡಿದರೂ ಅದೃಷ್ಟ ಜೊತೆಗೊಳಿಯುವುದಿಲ್ಲ. ಅನೇಕ ಬಾರಿ ಸಂದರ್ಶನದ ನಂತರವೂ ಜನರು ಕೆಲಸ ಪಡೆಯಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ರಯತ್ನಕ್ಕೆ ಸಾಥ್ ನೀಡಲು ಅದೃಷ್ಟ, ದೇವರ ಆಶೀರ್ವಾದ ಬೇಕಾಗುತ್ತದೆ. ಇದಕ್ಕಾಗಿ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳನ್ನು ಹೇಳಲಾಗಿದೆ. ಇದರಿಂದ ಉದ್ಯೋಗದ ದಿಕ್ಕಿನಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಬಹುದು. ಈ ಕ್ರಮಗಳು ಅರ್ಹ ಅಭ್ಯರ್ಥಿಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡುತ್ತದೆ. ಅಂಥ ಕ್ರಮಗಳು ಯಾವೆಲ್ಲ ತಿಳಿಸುತ್ತೇವೆ.