: ಮನೆಯ ಈ ವಸ್ತುಗಳೇ ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತಿರಬಹುದು, ಕೂಡಲೇ ಹೊರ ಹಾಕಿ ಮನೆಯಲ್ಲಿ ತುಂಬಿರುವ ಕೆಲ ಸರಕುಗಳು ಅದೆಷ್ಟು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತಿರುತ್ತವೆ ಎಂದರೆ ಅವುಗಳಿಂದ ವ್ಯಕ್ತಿಯ ಬದುಕಿನ ನೆಮ್ಮದಿಯೇ ಹಾಳಾಗುತ್ತಿರುತ್ತದೆ. ಅಂಥ ವಸ್ತುಗಳು ಯಾವೆಲ್ಲ ನೋಡೋಣ. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಯಶಸ್ಸು ಸಿಗುತ್ತಿಲ್ಲ, ಏನೇ ಮಾಡಿದರೂ ಜೀವನದಲ್ಲಿ ನೆಮ್ಮದಿ ಇಲ್ಲ, ಹಣಕಾಸು ಕೈಲಿ ನಿಲ್ಲುತ್ತಿಲ್ಲ, ಮನೆಯಲ್ಲಿ ಜಗಳ ತಪ್ಪುತ್ತಿಲ್ಲ.. ಇಂಥ ಸಮಸ್ಯೆಗಳನ್ನು ಹಲವರು ಎದುರಿಸುತ್ತಿರಬಹುದು. ಇದಕ್ಕೆ ಸಣ್ಣ ಸಣ್ಣ ವಾಸ್ತು ದೋಷಗಳು ಕಾರಣವಾಗುತ್ತಿರಬಹುದು. ವಾಸ್ತು ಪ್ರಕಾರ, ಮನೆಯಲ್ಲಿ ಬೇಡದ ವಸ್ತುಗಳ ಸಂಗ್ರಹಣೆಯಿಂದ ಬದುಕಿನ ಪ್ರಗತಿ ನಿಲ್ಲುತ್ತದೆ. ಅವು ಸದ್ದೇ ಇಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡಿ ಎಲ್ಲ ಕೆಲಸ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುತ್ತವೆ. ಹಾಗಾಗಿ, ಬದುಕಿನಲ್ಲಿ ಸಂತೋಷ, ಸುಖ, ಸಮೃದ್ಧಿಗಾಗಿ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ. ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ..