2023: ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶಕ್ಕೆ ಮುಹೂರ್ತ ಯಾವಾಗಿದೆ? ಹೊಸ ವರ್ಷದಲ್ಲಿ ಗೃಹಪ್ರವೇಶ ಮಾಡಲು ಯೋಜಿಸಿರುವವರಿಗೆ ಮುಹೂರ್ತಗಳು ಯಾವಾಗೆಲ್ಲ ಇವೆ ಎಂಬ ಪಟ್ಟಿ ಇಲ್ಲಿದೆ. ಈ ಮೂಲಕ ನೀವು ಮನೆಯನ್ನು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಜೋಡಿಸಿಕೊಂಡು ಗೃಹಪ್ರವೇಶಕ್ಕೆ ಸಜ್ಜಾಗಬಹುದು. ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಸುಂದರವಾದ ಮನೆಯನ್ನು ಖರೀದಿಸಲು ಬಯಸುತ್ತಾರೆ. ಅದು ಸಣ್ಣದೋ, ದೊಡ್ಡದೋ ಎಂಬುದಕ್ಕಿಂತ ಸ್ವಂತ ಗೂಡು ಎಂಬ ಸಮಾಧಾನವೇ ದೊಡ್ಡದು. ತಮ್ಮೆಲ್ಲ ಅಗತ್ಯಗಳು, ಹಣಕಾಸಿನ ಶಕ್ತ್ಯಾನುಸಾರ ಯೋಜಿಸಿ ಬಹಳ ಕನಸು ಕಟ್ಟಿಕೊಂಡು ಮನೆ ನಿರ್ಮಿಸುತ್ತಾರೆ. ಇಷ್ಟೆಲ್ಲ ಒಪ್ಪ ಓರಣವಾಗಿ ನಿರ್ಮಿಸಿದ ಮನೆ ಎಂದ ಮೇಲೆ ಅದಕ್ಕೆ ಅತ್ಯಂತ ಶುಭ ಮುಹೂರ್ತದಲ್ಲೇ ಪ್ರವೇಶ ಮಾಡಬೇಕು. ಏಕೆಂದರೆ, ಜೀವನಪೂರ್ತಿ ಇರುವ ಮನೆ ಸದಾ ಒಳ್ಳೆಯದನ್ನು ಮಾಡಲೆಂದು ಬಯಸಿ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ಮಾಡುವುದು ಶ್ರೇಯಸ್ಕರ. ಶಾಸ್ತ್ರಗಳ ಪ್ರಕಾರ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಸರಿಯಾದ ಪೂಜೆಯನ್ನು ಮಾಡಬೇಕು. ಪೂಜಿಸುವುದರಿಂದ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ, ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ನೀವು ಕೂಡ 2023ರ ಹೊಸ ವರ್ಷದಲ್ಲಿ ಗೃಹಪ್ರವೇಶ ಮಾಡುವ ಯೋಜನೆ ಹೊಂದಿದ್ದರೆ ಅದಕ್ಕಾಗಿ ಯಾವೆಲ್ಲ ಶು ಮುಹೂರ್ತಗಳು ಲಭ್ಯವಿವೆ ಎಂಬ ಪಟ್ಟಿ ಇಲ್ಲಿದೆ. ಇದನ್ನು ನೋಡಿಕೊಂಡು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆಯ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. 2023ರಲ್ಲಿ ಮನೆ ಗೃಹಪ್ರವೇಶಕ್ಕೆ ಮುಹೂರ್ತ ಫೆಬ್ರವರಿ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ ಮಾರ್ಚ್ 2023ರಲ್ಲಿ ಗೃಹ ಪ್ರವೇಶ ಮುಹೂರ್ತ ಮೇ 2023ರಲ್ಲಿ ಗೃಹ ಪ್ರವೇಶ ಮುಹೂರ್ತ ಜೂನ್ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ ನವೆಂಬರ್ 2023ರಲ್ಲಿ ಗೃಹ ಪ್ರವೇಶ ಮುಹೂರ್ತ ಡಿಸೆಂಬರ್ 2023 ರಲ್ಲಿ ಗೃಹ ಪ್ರವೇಶ ಮುಹೂರ್ತ