ಕೆಟ್ಟ ಕನಸುಗಳ ಬಾಧೆಗೆ ಗುಡ್‌ಬೈ ಹೇಳಲು ಅಪರೂಪಕ್ಕೊಂದು ಕೆಟ್ಟ ಕನಸು ಎಲ್ಲರನ್ನೂ ಭಾದಿಸುತ್ತದೆ. ಆದರೆ, ಪದೇ ಪದೇ ಕೆಟ್ಟ ಕನಸುಗಳೇ ಬೀಳುತ್ತಿದ್ದರೆ ಮನಸ್ಸು ಚಿಂತೆಗೆ ಬೀಳುತ್ತದೆ. ಆತಂಕವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಟ್ಟ ಕನಸುಗಳಿಗೆ ಬೈಬೈ ಹೇಳಲು ಈ ಜ್ಯೋತಿಷ್ಯ ಪರಿಹಾರಗಳು ಸಹಾಯಕವಾಗಿವೆ. ಅದೇನೋ ಕೆಲವರಿಗೆ ಬರೀ ಕೆಟ್ಟ ಕನಸುಗಳೇ ಬೀಳುತ್ತಿರುತ್ತವೆ. ಅವರು ಎಷ್ಟೇ ಪಾಸಿಟಿವ್ ಯೋಚನೆಗಳನ್ನು ಮಾಡಿ ಮಲಗಲಿ, ಕೆಟ್ಟ ಕನಸು ಬಿದ್ದು ಅರ್ಧ ರಾತ್ರಿಯಲ್ಲಿ ನಿದ್ರೆಗೆಡಿಸುತ್ತದೆ. ಈ ಕೆಟ್ಟ ಕನಸುಗಳಲ್ಲಿ ಹತ್ತಿರದವರಿಗೆ ಅಪಾಘಾತವಾದಂತೆ, ಸ್ವತಃ ನೀವೇ ಮೇಲಿಂದ ಬೀಳುತ್ತಿರುವಂತೆ, ಯಾರೋ ಮೋಸ ಮಾಡಿದಂತೆ, ದೆವ್ವಗಳು ಅಟ್ಟಿಸಿಕೊಂಡು ಬಂದಂತೆ.. ಹೀಗೆ ಅನೇಕ ರೀತಿಯಲ್ಲಿ ಬಿದ್ದು ಮನಸ್ಸನ್ನು ಕದಡುತ್ತವೆ. ಆತಂಕ ಹುಟ್ಟು ಹಾಕುತ್ತವೆ. ಅದು ಭವಿಷ್ಯದ ಮುನ್ಸೂಚನೆಯೇನೋ ಎಂದು ಮನಸ್ಸು ಗೊಂದಲಕ್ಕೀಡಾಗುತ್ತದೆ. ನಿಮಗೂ ಕೂಡಾ ಪದೇ ಪದೇ ಕೆಟ್ಟ ಕನಸುಗಳೇ ಬೀಳುತ್ತಿದ್ದರೆ ಅದರಿಂದ ಪಾರಾಗಲು ಜ್ಯೋತಿಷ್ಯ ಉಪಾಯಗಳು ಇಲ್ಲಿವೆ.. ಕೆಟ್ಟ ಕನಸುಗಳನ್ನು ತೊಡೆದು ಹಾಕಲು ಜ್ಯೋತಿಷ್ಯ ಪರಿಹಾರಗಳು! ಕೆಟ್ಟ ಕನಸುಗಳನ್ನು ದೂರ ಮಾಡಲು ಮಂತ್ರದುರ್ಗಾ ದೇವಿಯ ಮಂತ್ರ'ಯಾ ದೇವಿ ಸರ್ವ ಭೂತೇಷು ನಿದ್ರಾ ರೂಪೇಣ ಸಂಸ್ಥಿತ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।' ಹನುಮಾನ್ ಮಂತ್ರ'ರಾಮಸ್ಕಂದಂ ಹನುಮಂತಂ, ವೈನತೇಯಂ ವೃಕೋದರಂ ಶಯನಯಾಃ ಸ್ಮರೇ ನಿತ್ಯಂ, ದುಸ್ವಪ್ನ ತಸ್ಯ ನಶ್ಯತಿ' ನರಸಿಂಹ ಮಂತ್ರ'ಓಂ ಹುಂ ಫಟ್ ನೃಸಿಂಹ ಸ್ವಾಹಾ'