: ಮಾನಸಿಕ ಆರೋಗ್ಯ ಹಾಳು ಮಾಡುತ್ತೆ ಈ ಗ್ರಹ ಮಾನಸಿಕ ಆರೋಗ್ಯ ಬಹಳ ಮುಖ್ಯ. ಮನಸ್ಸು ಹಾಳಾದ್ರೆ ಇಡೀ ಜೀವನ ಹದಗೆಟ್ಟಂತೆ. ದೈಹಿಕ ರೋಗಗಳನ್ನು ನಾವು ಮಾನಸಿಕ ಬಲದಿಂದ ಗೆಲ್ಲಬಹುದು. ಆದ್ರೆ ಈ ಮಾನಸಿಕ ಸಮಸ್ಯೆಗೆ ನಮ್ಮ ಗ್ರಹಗತಿ ಕೂಡ ಕಾರಣವಾಗುತ್ತದೆ. ದೈಹಿಕ ಅನಾರೋಗ್ಯಕ್ಕೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಆದ್ರೆ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದು ಕಷ್ಟ. ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು ವೈದ್ಯರ ಬಳಿ ಹೋಗೋದಿಲ್ಲ. ನಮಗೆ ಮಾನಸಿಕ ಸಮಸ್ಯೆಯಿದೆ ಎಂಬುದನ್ನೇ ಒಪ್ಪಿಕೊಳ್ಳಲು ಸಿದ್ಧರಿರೋದಿಲ್ಲ. ಗ್ರಹಗಳು ನಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಹದ ಸ್ಥಿತಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಮಾನಸಿಕ ಸಮಸ್ಯೆ ಪತ್ತೆ ಹಚ್ಚೋದು ಕಷ್ಟ. ಜಾತಕ ನೋಡುವ ಮೂಲಕ ಈಗಿನ ಹಾಗೂ ಮುಂದೆ ಬರುವ ಮಾನಸಿಕ ಸಮಸ್ಯೆಯನ್ನು ಮೊದಲೇ ಪತ್ತೆ ಮಾಡಬಹುದು. ವೈದಿಕ ಜ್ಯೋತಿಷ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೇಳಲಾಗಿದೆ. ಯಾವ ಗ್ರಹದಿಂದ ಸಮಸ್ಯೆ ಕಾಡುತ್ತದೆ ಎಂಬುದನ್ನು ಹೇಳಲಾಗಿದೆ. ನಾವಿಂದು ವೈದಿಕ ಜ್ಯೋತಿಷ್ಯದಲ್ಲಿ ಮಾನಸಿಕ ಆರೋಗ್ಯ ಹಾಗೂ ಗ್ರಹದ ಬಗ್ಗೆ ಏನೆಲ್ಲ ಹೇಳಲಾಗಿದೆ ಎಂಬುದನ್ನು ಹೇಳ್ತೆವೆ. ಮಾನಸಿಕ ಆರೋಗ್ಯ ( ) ದ ಮೇಲೆ ಚಂದ್ರ () ಮತ್ತು ಬುಧ ಗ್ರಹಗಳು ಪರಿಣಾಮ ಬೀರುತ್ತವೆ. ಗುರು ಗ್ರಹ ಮಾನಸಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಗುರು ಜಾತಕ () ದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ. ಆದ್ರೆ ಗುರು ಗ್ರಹ ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಅದು ಮಾನಸಿಕ ಅಸ್ವಸ್ಥತೆ ಉಂಟುಮಾಡುತ್ತದೆ. ಚಂದ್ರ ಮನಸ್ಸಿನ ಸಂಕೇತವಾಗಿದ್ದಾನೆ. ಬುಧ, ಸ್ಮರಣೆಯ ಪ್ರತಿನಿಧಿ ಗುರುವು ಜ್ಞಾನ () ದ ಅಧಿಪತಿ. ಈ ಗ್ರಹಗಳು ಬಾಧಿತವಾಗಿದ್ದಾಗ ಜನರು ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮತ್ತು ಇತರ ಗಂಭೀರ ಮಾನಸಿಕ ಸಮಸ್ಯೆ ಎದುರಾಗುತ್ತದೆ. 2023 : ಹೊಸ ವರ್ಷಕ್ಕೆ ನಿಮ್ಮ ಅದೃಷ್ಟ ಬದಲಿಸಲಿದೆ ಈ ಸಂಖ್ಯೆ ಚಂದ್ರ ಕೆಟ್ಟ ಸ್ಥಾನದಲ್ಲಿದ್ದರೆ ಏನಾಗುತ್ತೆ ಗೊತ್ತಾ? :ಜಾತಕದಲ್ಲಿ ಚಂದ್ರ ಕೆಟ್ಟ ಸ್ಥಾನದಲ್ಲಿದ್ರೆ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆತಂಕ ಮತ್ತು ಖಿನ್ನತೆ ಕಾಡುತ್ತದೆ. ಚಂದ್ರ, ಮನಸ್ಸು, ನಡವಳಿಕೆ ಮತ್ತು ಭಾವನೆಗಳನ್ನು ನಿಯಂತ್ರಿಸುತ್ತಾನೆ. ಇದು ಭೂಮಿಗೆ ಹತ್ತಿರವಿರುವ ಗ್ರಹವಾಗಿದೆ. ಚಂದ್ರನ ಧನಾತ್ಮಕ ಸ್ಥಾನ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ವೃದ್ಧಿಸುತ್ತದೆ. ಚಂದ್ರನು ಉತ್ತಮ ಸ್ಥಾನದಲ್ಲಿದ್ದರೆ ಏಕಾಗ್ರತೆ ಮತ್ತು ಸೃಜನಶೀಲ ಸಾಮರ್ಥ್ಯ ಹೆಚ್ಚಾಗುತ್ತದೆ. ಚಂದ್ರನು ಯಾವುದೇ ಅಶುಭ ಮನೆಯಲ್ಲಿ ಅಂದರೆ 6, 8 ಮತ್ತು 12ನೇ ಸ್ಥಾನದಲ್ಲಿದ್ದರೆ ಅದು ಮಾನಸಿಕ ಸಮಸ್ಯೆಯನ್ನುಂಟು ಮಾಡುತ್ತದೆ. ಭ್ರಮೆ ಹೆಚ್ಚಿಸುವ ರಾಹು ಮತ್ತು ಕೇತು ಜಾತಕದಲ್ಲಿ ಚಂದ್ರನೊಂದಿಗಿದ್ದರೆ ಮಾನಸಿಕ ಗೊಂದಲ, ಚಡಪಡಿಕೆ, ಭಯ ಮತ್ತು ನಿದ್ರಾಹೀನತೆ ಕಾಡುತ್ತದೆ. ಬುಧ ಕೆಟ್ಟ ಸ್ಥಾನದಲ್ಲಿದ್ದರೆ ಕಾಡುತ್ತೆ ಸಮಸ್ಯೆ :ಜಾತಕದಲ್ಲಿ ಬುಧ ದುರ್ಬಲನಾಗಿದ್ದರೆ ಚಂಚಲತೆ ಮತ್ತು ಮುಂಗೋಪ ಹೆಚ್ಚಾಗುತ್ತದೆ. ಬುಧ ದುರ್ಬಲವಾಗಿದ್ದಾಗ ಅದು ವ್ಯಕ್ತಿಯ ಮನಸ್ಸು ಮತ್ತು ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದಾಗಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಒಸಿಡಿ ನಂತಹ ಮಾನಸಿಕ ಸಮಸ್ಯೆ ಕಾಡುತ್ತದೆ. ಗುರು ದುರ್ಬಲನಾಗಿದ್ದರೆ ಈ ಸಮಸ್ಯೆ :ಅಶುಭ ಗುರುವು ವ್ಯಕ್ತಿಯ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡುತ್ತದೆ. ಸ್ವಲ್ಪ ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಮತ್ತು ರೋಗ ಕಾಡುತ್ತದ. ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿದ್ದರೆ ಮನಃಶಾಂತಿ ಕದಡುತ್ತದೆ. : ಕಣ್ಣಿಗೆ ಕಾಡಿಗೆ ಹಚ್ಚಿದ್ರೆ ಈ ದೋಷ ಕಡಿಮೆಯಾಗುತ್ತೆ ಮಾನಸಿಕ ಅಸ್ವಸ್ಥತೆಗೆ ಜ್ಯೋತಿಷ್ಯ ಕಾರಣ :ಜ್ಯೋತಿಷ್ಯದ ಮೂಲಕ ಮಾನಸಿಕ ಕಾಯಿಲೆಗಳ ಕಾರಣಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಜಾತಕವನ್ನು ಬಹಳ ಎಚ್ಚರಿಕೆಯಿಂದ ಮತ್ತು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು. ಜಾತಕದ ಮೊದಲ ಮನೆಯಲ್ಲಿ ರಾಹು ಮತ್ತು ಮಂಗಳ ಒಟ್ಟಿಗೆ ಇದ್ದರೆ ಮಾನಸಿಕ ಅಸ್ವಸ್ಥತೆ ಕಾಡುತ್ತದೆ.