: ಹೃದಯದ ಸಮಸ್ಯೆಯೇ? ಈ ಜ್ಯೋತಿಷ್ಯ ಪರಿಹಾರಗಳನ್ನು ಕೈಗೊಳ್ಳಿ.. ಜ್ಯೋತಿಷ್ಯದಲ್ಲಿ ಕೆಲವು ಗ್ರಹಗಳನ್ನು, ಯೋಗಗಳನ್ನು ಮತ್ತು ಜಾತಕ ಸ್ಥಾನಗಳನ್ನು ಹೃದ್ರೋಗಕ್ಕೆ ಕಾರಣ ಎನ್ನಲಾಗುತ್ತದೆ. ಹೃದ್ರೋಗಕ್ಕೆ ಕಾರಣವಾಗುವ ಗ್ರಹಗಳು ಯಾವುವು, ಇದಕ್ಕಾಗಿ ಮಾಡಬೇಕಾದ ಜ್ಯೋತಿಷ್ಯ ಪರಿಹಾರಗಳೇನು ತಿಳಿಯೋಣ. ಇಂದಿನ ವೇಗದ ಮತ್ತು ಒತ್ತಡದ ಜೀವನದಲ್ಲಿ, ತನ್ನನ್ನು ತಾನು ಆರೋಗ್ಯವಾಗಿರಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ತಿನ್ನುವ, ಕುಡಿಯುವ, ಮಲಗುವ ಮತ್ತು ಏಳುವ ವಿಧಾನದ ಬದಲಾವಣೆಯಿಂದ ಹೃದಯ ಕಾಯಿಲೆಗಳು ಹೆಚ್ಚಾಗತೊಡಗಿವೆ. ಇತ್ತೀಚಿನ ದಿನಗಳಲ್ಲಂತೂ ಸಣ್ಣ ವಯಸ್ಸಿಗೇ ಹೃದಯಾಘಾತ ಮತ್ತು ಇತರೆ ಹೃದಯ ಸಮಸ್ಯೆಗಳು ಹೆಚ್ಚಾಗಿದ್ದು, ಸಾವಿನ ಭೀತಿ ಯುವಜನತೆಯನ್ನು ನಿರಂತರ ಕಾಡುತ್ತಿದೆ. ವೈದ್ಯರ ಪ್ರಕಾರ ಅತಿಯಾದ ಒತ್ತಡದಿಂದ ಹೃದ್ರೋಗಗಳು( ) ಬರುತ್ತವೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಕೆಲವು ಗ್ರಹಗಳೂ ಕಾರಣ ಎಂದು ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೃದ್ರೋಗ ಸಮಸ್ಯೆಗೆ ಕಾರಣಗಳೇನು ಎಂದು ತಿಳಿಯೋಣ. ಸೂರ್ಯನ ಸ್ಥಾನಜ್ಯೋತಿಷ್ಯದಲ್ಲಿ, ಸೂರ್ಯನನ್ನು ತಂದೆ ಮತ್ತು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕ()ದಲ್ಲಿ ಸೂರ್ಯನ ಅಶುಭ ಸ್ಥಾನವು ಸ್ಥಳೀಯರಿಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ನೀಡಬಹುದು. ಚಂದ್ರ ಗ್ರಹ ಸ್ಥಾನಜ್ಯೋತಿಷ್ಯದಲ್ಲಿ, ಚಂದ್ರ()ನನ್ನು ಮನಸ್ಸು ಮತ್ತು ಮೆದುಳಿನ ಅಂಶವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಚಂದ್ರನು ಕೆಟ್ಟದ್ದಾಗಿದ್ದರೆ, ಅವನಿಗೆ ಹೃದಯ ಕಾಯಿಲೆ ಇರಬಹುದು. : ಶನಿ ಕಾಟದಿಂದ ತಪ್ಪಿಸುತ್ತೆ ಶಮಿ ಸಸ್ಯ! ಮಂಗಳ ಸ್ಥಾನಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ನಮ್ಮ ದೇಹದ ಸ್ನಾಯುಗಳಿಗೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗಿದೆ. ಹೃದಯವೂ ಸ್ನಾಯುಗಳಿಂದ ಮಾಡಲ್ಪಟ್ಟಿರುವುದರಿಂದ, ಮಂಗಳ()ವನ್ನು ಸಹ ಹೃದಯ ಕಾಯಿಲೆಗೆ ಕಾರಣವೆಂದು ಪರಿಗಣಿಸಬಹುದು.ಗುರು ಗ್ರಹದ ಸ್ಥಾನಇದು ಅಪಧಮನಿಗಳು ಮತ್ತು ರಕ್ತನಾಳಗಳನ್ನು ನಿಯಂತ್ರಿಸುತ್ತದೆ. ಅಪಧಮನಿಗಳು ಮತ್ತು ರಕ್ತನಾಳಗಳ ಮೂಲಕ ಪರಿಚಲನೆಯಾಗುವ ಎಲ್ಲಾ ರಕ್ತವು ಗುರು ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ. ನಿಮ್ಮ ಜಾತಕದಲ್ಲಿ ಗುರುವು ದುರ್ಬಲವಾಗಿದ್ದರೆ ನೀವು ಹೃದಯ ಸಮಸ್ಯೆಯೇ ಅಲ್ಲದೆ, ಮಧುಮೇಹ, ಕಾಮಾಲೆ ಮತ್ತು ಕ್ಯಾನ್ಸರ್‌ನಂತಹ ಕೆಲವು ರೋಗಗಳನ್ನು ಎದುರಿಸಬಹುದು. ರಾಹು ಗ್ರಹದ ಸ್ಥಾನಜ್ಯೋತಿಷ್ಯದಲ್ಲಿ, ರಾಹುವನ್ನು ಹಠಾತ್ ಘಟನೆ, ಅಪಘಾತ()ದಿಂದ ವ್ಯಕ್ತಿಯನ್ನು ಅನಾರೋಗ್ಯಕ್ಕೆ ಒಳಪಡಿಸುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಹೃದ್ರೋಗವನ್ನು ಹೊಂದಿದ್ದರೆ, ಆಗ ರಾಹು ಕೂಡ ಅದರ ಕಾರಕ ಗ್ರಹವಾಗಬಹುದು. 2022: ವರ್ಷಾರಂಭದಲ್ಲೇ ಬುಧ ವಕ್ರಿಯಿಂದ ಈ ರಾಶಿಗಳಿಗೆ ಸಂಕಷ್ಟ ಹೃದ್ರೋಗವನ್ನು ತಪ್ಪಿಸಲು ಜ್ಯೋತಿಷ್ಯ ಪರಿಹಾರಗಳು( )