: ಮಲಗುವ ಕೋಣೆ ಹೀಗಿದ್ದರೆ ದಂಪತಿಯ ನಡುವೆ ಪ್ರೀತಿಗೆ ಕೊರತೆ ಇರೋಲ್ಲ! ವಾಸ್ತುವಿನ ಈ ಸಲಹೆಗಳು ದಾಪಂತ್ಯದಲ್ಲಿ ಸಪ್ಪೆತನ ಹೋಗಿಸಿ ಸಿಹಿಯನ್ನು ತುಂಬುತ್ತವೆ. ಪತಿ ಪತ್ನಿಯ ನಡುವೆ ಪ್ರೀತಿ ಹೆಚ್ಚಿಸುತ್ತವೆ. ಪ್ರಣಯ ತರುತ್ತವೆ. ಭಾರತೀಯ ಸಂತರು ಮತ್ತು ಪಂಡಿತರು ಮನುಷ್ಯರ ಮೇಲೆ ವಿವಿಧ ವಸ್ತುಗಳ ಪರಿಣಾಮಗಳ ಕುರಿತು ಶತಶತಮಾನಗಳಿಂದ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ, ಧನಾತ್ಮಕ ಪರಿಣಾಮಗಳನ್ನು ಮನೆಯಲ್ಲಿ ಬಳಸಲಾಗುತ್ತದೆ. ಆದರೆ ಮಾಟಮಂತ್ರದಂಥ ನಕಾರಾತ್ಮಕ ಪರಿಣಾಮಗಳನ್ನು ಎದುರಾಳಿಗಳನ್ನು ಜಯಿಸಲು ಮತ್ತು ಪಳಗಿಸಲು ಬಳಸುತ್ತಾರೆ. ಆದರೆ ಯಾವುದೇ ಧಾರ್ಮಿಕ ಅಥವಾ ತಾಂತ್ರಿಕ ವಿಧಾನಗಳನ್ನು ನಕಾರಾತ್ಮಕ ಉದ್ದೇಶಕ್ಕಾಗಿ ಬಳಸಿದರೆ ಅದು ಹೇಗೋ ಅಥವಾ ಇನ್ನೊಂದು ರೀತಿಯಲ್ಲಿ ಕರ್ಮವಾಗಿ ತಿರುಗಿ ಬೀಳುತ್ತದೆ. ವಾಸ್ತುವಿನ ಈ ಕೆಲವು ವಿಧಾನಗಳು ಸಂಬಂಧಗಳನ್ನು ಸುಧಾರಿಸಲು ಅತ್ಯುತ್ತಮವಾಗಿವೆ. ದಾಂಪತ್ಯದಲ್ಲಿ ಪ್ರೀತಿಯ ಕೊರತೆಯಿದ್ದರೆ ನಿಮ್ಮ ಮಲಗುವ ಕೋಣೆಯಲ್ಲಿ ಈ ಬದಲಾವಣೆಗಳನ್ನು ಮಾಡಿ.