ಶನಿ ಕಾಟದಿಂದ ಈ ರಾಶಿಯವರಿಗೆ ಹೊಸ ವರ್ಷದಲ್ಲಿ ಸಿಗಲಿದೆ ಮುಕ್ತಿ, ನಿಮ್ಮ ರಾಶಿ ಇದ್ಯಾ? ಯಾವುದೇ ಗ್ರಹ ರಾಶಿ ಬದಲಾವಣೆ ಮಾಡಿದ್ರೆ ಉಳಿದ ರಾಶಿಗಳ ಮೇಲೂ ಇದ್ರ ಪ್ರಭಾವವನ್ನು ಕಾಣಬಹುದು. ಕಳೆದ ಎರಡು ವರ್ಷಗಳಿಂದ ಶನಿಯ ಕೋಪದಲ್ಲಿ ಬೆಂದ ಕೆಲ ರಾಶಿಗೆ ಹೊಸ ವರ್ಷ ನೆಮ್ಮದಿ ಸಿಗಲಿದೆ. ಶನಿಯ ರಾಶಿ ಪರಿವರ್ತನೆ ಒಳ್ಳೆಯ ಫಲ ನೀಡಲಿದೆ. ಶನಿ ಹೆಸರು ಕೇಳಿದ್ರೆ ಸ್ವಲ್ಪ ನಡುಕ ಬರುತ್ತೆ. ಹಾಗಂತ ಶನಿ ಕೆಟ್ಟವನಲ್ಲ. ಶನಿ ಕರುಣೆ ತೋರಿದ್ರೆ ಎಂಥ ಕಷ್ಟ ಕೂಡ ಹೂವಿನ ಎಸಳಂತೆ ಹಗುರವಾಗುತ್ತದೆ. ಅದೇ ಶನಿಯ ಕೋಪಕ್ಕೆ ಗುರಿಯಾದ್ರೆ ಅದ್ರಿಂದ ಚೇತರಿಸಿಕೊಳ್ಳುವುದು ಕಷ್ಟ. ಶನಿಯನ್ನು ನ್ಯಾಯ ದೇವತೆ ಎಂದೇ ನಂಬಲಾಗುತ್ತದೆ. ದಾರಿ ತಪ್ಪಿದವರಿಗೆ ಶಿಕ್ಷೆ ನೀಡುವ ಕೆಲಸವನ್ನು ಶನಿ ಮಾಡ್ತಾನೆ ಅಂದ್ರೆ ತಪ್ಪಾಗೋದಿಲ್ಲ. ಶನಿ ಮುಂದಿನ ವರ್ಷ ಅಂದ್ರೆ 2023ರಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಹೊಸ ವರ್ಷ ( ) ದ ಮೊದಲ ತಿಂಗಳು ಜನವರಿಯ 17ನೇ ತಾರೀಕಿನಂದು ಶನಿ () ರಾಶಿ ಪರಿವರ್ತನೆ ಮಾಡ್ತಿದ್ದಾನೆ. ಜನವರಿ 2020 ರಲ್ಲಿ ಶನಿ ಮಕರ ರಾಶಿ ಪ್ರವೇಶಿಸಿದ್ದ. ಇದೀಗ ಶನಿ ಕುಂಭ () ರಾಶಿಗೆ ಹೋಗಲಿದ್ದಾನೆ. ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿರುವ ಶನಿ ಸ್ವಲ್ಪ ತಣ್ಣಗಾದಂತೆ ಕಾನ್ತಿದೆ. ಕುಂಭ ರಾಶಿಗೆ ಶನಿ ಹೋಗ್ತಿದ್ದಂತೆ ಉಳಿದ ರಾಶಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗಲಿವೆ. ಕಳೆದ ಎರಡೂವರೆ ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಕೆಲ ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಲಿವೆ. ಶನಿ, ಕುಂಭ ರಾಶಿಗೆ ಪ್ರವೇಶಿಸಿದ ನಂತ್ರ ಯಾವ ರಾಶಿಯವರ ದುರದೃಷ್ಟಗಳು ದೂರವಾಗುತ್ತವೆ ಎಂಬುದನ್ನು ನಾವಿಂದು ಹೇಳ್ತೇವೆ.ಹಸುವಿನ ಸಗಣಿ ಎಂಬ ಪವಾಡ; ಆರ್ಥಿಕ ಸಮಸ್ಯೆ ಹೋಗಿಸುವ ಶನಿ ರಾಶಿ ಪರಿವರ್ತನೆಯಿಂದ ಬದಲಾಗುತ್ತೆ ಇವರ ಅದೃಷ್ಟ ( ) :ವೃಷಭ ರಾಶಿಯವರಿಗೆ ಸಿಗಲಿದೆ ನೆಮ್ಮದಿ :ಶನಿ ಕುಂಭ ರಾಶಿಗೆ ಪ್ರವೇಶ ಮಾಡ್ತಿದ್ದಂತೆ ವೃಷಭ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಮಕರ ರಾಶಿಯಲ್ಲಿದ್ದಾಗ ವೃಷಭ ರಾಶಿಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಈಗ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆಯಿದೆ. ಪ್ರಯಾಣದಲ್ಲಿ ಲಾಭವಾಗಲಿದೆ. ಎಲ್ಲ ಸ್ಪರ್ಧೆಯಲ್ಲಿ ವೃಷಭ ರಾಶಿಯವರಿಗೆ ಯಶಸ್ಸು ಸಿಗಲಿದೆ. ಆರ್ಥಿಕ ಪ್ರಗತಿ ಕಾಣಲಿದೆ. ಅನೇಕ ದಿನಗಳಿಂದ ಕಾಡ್ತಿರುವ ಸಮಸ್ಯೆಗೆ ಮುಕ್ತಿ ಸಿಗುವ ಜೊತೆಗೆ ಆದಾಯ ಹೆಚ್ಚಾಗುವುದ್ರಿಂದ ಸಂತೋಷ ಪ್ರಾಪ್ತಿಯಾಗಲಿದೆ. ಮಿಥುನ ರಾಶಿಯವರ ಜೀವನದಲ್ಲಿ ಬರಲಿದೆ ಸಂತೋಷ :2020 ರಿಂದ ಮಿಥುನ ರಾಶಿಯ ಮೇಲೆ ಧಯ್ಯಾ ನಡೆಯುತ್ತಿದೆ. ಕುಂಭ ರಾಶಿಗೆ ಶನಿ ಪ್ರವೇಶ ಮಾಡ್ತಿದ್ದಂತೆ ಧಯ್ಯಾ ಮುಗಿಯಲಿದೆ. ಜೀವನದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರಿಗೆ ಇದು ಒಳ್ಳೆ ಅವಕಾಶ. ಕೆಲಸ ಮಾಡುವ ಸ್ಥಳದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ. ಶುಭ ಕಾರ್ಯಗಳಿಗೆ ಹಣ ಖರ್ಚಾಗಲಿದೆ. ಕುಟುಂಬದ ಸಮಸ್ಯೆಗಳು ಬಗೆಹರಿಯಲಿವೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ತುಲಾ ರಾಶಿ ಮೇಲೆ ಕರುಣೆ ತೋರುವ ಶನಿ :ಶನಿ, ಮಕರ ರಾಶಿಯಿಂದ ಕುಂಭ ರಾಶಿಗೆ ಹೋಗ್ತಿದ್ದಂತೆ ತುಲಾ ರಾಶಿಯ ಧಯ್ಯಾ ಕೊನೆಯಾಗಲಿದೆ. ಕಳೆದ ಎರಡೂವರೆ ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಫಲ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಕಂಡು ಬರಲಿದೆ. ನಿಮ್ಮಿಂದ ದೂರವಾಗಿದ್ದವರು ನಿಮ್ಮ ಬಳಿ ಬರ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಿಗಲಿದೆ. ಗಳಿಕೆಗೆ ಹಲವಾರು ಮಾರ್ಗಗಳು ತೆರೆದುಕೊಳ್ಳಲಿವೆ. ಮನೆಯ ನೆಮ್ಮದಿ ನಾಶವಾಗಿದೆಯೇ? ಈ ಟ್ರೈ ಮಾಡಿ ಧನು ರಾಶಿಗೆ ಸಿಗಲಿದೆ ಲಾಭ :ಶನಿಯು ಕುಂಭ ರಾಶಿಗೆ ಪ್ರವೇಶ ಮಾಡೋದು ಧನು ರಾಶಿಯವರಿಗೆ ಲಾಭವಾಗಲಿದೆ. ಮಾನಸಿಕ ಒತ್ತಡ ಕ್ರಮೇಣ ಕಡಿಮೆಯಾಗಲಿದೆ. ಜೀವನದಲ್ಲಿ ಸ್ಥಿರತೆ ಇರುತ್ತದೆ. ಆರ್ಥಿಕ ಸ್ಥಿತಿ ಬಲಪಡೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಹೊಸ ಉದ್ಯೋಗಾವಕಾಶ ತೆರೆಯಲಿದೆ. ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಗಲಿದೆ. ಕೌಟುಂಬಿಕ ಜೀವನವೂ ಉತ್ತಮವಾಗಿರಲಿದೆ.